ವೀರಾಜಪೇಟೆ, ಆ. ೨೪: ಚಿಣ್ಣರಿಗೆ ಕ್ರಿಕೆಟ್ ಕ್ರೀಡೆಯಲ್ಲಿ ಉತ್ತಮವಾದ ವೇದಿಕೆಯನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ವೀರಾಜಪೇಟೆ ಪ್ರಗತಿ ಶಾಲೆಯ ಅಧೀನ ಸಂಸ್ಥೆಯಾದ ಪ್ರಗತಿ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಸ್ವಾತಂತ್ರö್ಯದ ಅಮೃತ ಮಹೋತ್ಸವ ಅಂಗವಾಗಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಪ್ರಗತಿ ಕ್ರಿಕೆಟ್ ಆಕಾಡೆಮಿ ಯಿಂದ ಚಿಣ್ಣರಿಗಾಗಿ ಕೃತಕ ಹುಲ್ಲು ಅಳವಡಿಸಲಾಗಿರುವ ಒಳಾಂಗಣ ಕ್ರಿಕೆಟ್ ಪಿಚ್(ಕೃತಕ ಹುಲ್ಲು ಹಾಸು)ನ್ನು ಗಣ್ಯರು ಮತ್ತು ಕ್ರಿಕೆಟ್ ಪಟುಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಪ್ರಗತಿ ಶಾಲೆಯ ಆಡಳಿತಾಧಿಕಾರಿ ಮತ್ತು ಅಂತ ರ‍್ರಾಷ್ಟಿçÃಯ ರಗ್ಬಿ ಪಟು ಮಾದಂಡ ತಿಮ್ಮಯ್ಯ ಮಾತನಾಡಿ, ಜಿಲ್ಲೆಯಲ್ಲಿ ಕ್ರಿಕೆಟ್ ಕ್ರೀಡೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವುದು ಮತ್ತು ವಲಯ ಮಟ್ಟದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾಟಕ್ಕೆ ಜಿಲ್ಲೆಯ ಪಟುಗಳನ್ನು ಸಿದ್ಧಗೊಳಿಸುವುದು ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಶಾಲಾ ಕಟ್ಟಡದಲ್ಲಿ ಕೃತಕ ಕ್ರಿಕೆಟ್ ಪಿಚ್ ನಿರ್ಮಾಣ ಮಾಡಲಾಗಿದೆ. ಸುಮಾರು ೪-೬ ತಿಂಗಳ ಕಾಲ ಮಳೆ ಯಾಗುವುದರಿಂದ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಕಷ್ಟ ಸಾಧ್ಯವಾಗಿದೆ. ಮಳೆಗಾಲದಲ್ಲಿಯು ಕ್ರೀಡಾಪಟುಗಳು ತರಬೇತಿ ಪಡೆದು ಕೊಳ್ಳಲು ಕೃತಕ ಪಿಚ್ ಸಹಾಯ ವಾಗುತ್ತದೆ. ಕ್ರೀಡಾಪಟುಗಳಿಗೆ ಲೆದರ್ ಬಾಲ್‌ನಲ್ಲಿ ತರಬೇತಿ ನೀಡಲಾಗುತ್ತಿದ್ದು ೦೮-೧೬ ವರ್ಷದ ಪ್ರಾಯದ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಕ್ರಿಕೆಟ್ ತರಬೇತಿಗೆ ಶಾಲಾ ವಿದ್ಯಾರ್ಥಿ ಗಳನ್ನು ದಾಖಲಿಸುವಂತೆ ಕ್ರಿಕೆಟ್ ಕ್ಷೇತ್ರದಲ್ಲಿ ಉತ್ತಮ ಕ್ರೀಡಾಪಟುಗಳು ಹೊರಹೊಮ್ಮುವಂತೆ ಮಾಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಹಿರಿಯ ಕ್ರಿಕೆಟ್‌ಪಟು ಮತ್ತು ಕಾರ್ಪೋ ರೇಷನ್ ಬ್ಯಾಂಕ್ ಸಿಬ್ಬಂದಿಗಳಾದ ಕೆ.ಕೆ. ಜೀವನ್ ಅವರು ಬೌಲಿಂಗ್ ಮಾಡುವ ಮೂಲಕ ಉದ್ಘಾಟಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕ್ರಿಕೆಟ್ ಕ್ಷೇತ್ರವು ತನ್ನದೆಯಾದ ವೈವಿದ್ಯತೆಯನ್ನು ಹೊಂದಿದೆ. ಕ್ರೀಡಾ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಶಿಸ್ತು, ಏಕಾಗ್ರತೆ, ಕಠಿಣ ಪರಿಶ್ರಮದಿಂದ ಮಾತ್ರ ಕ್ರೀಡಾಪಟುವಾಗಿ ಹೊರಹೊಮ್ಮಲು ಸಾದ್ಯ ಎಂದರು. ಕ್ರಿಕೆಟ್ ಪಿಚ್ ಉದ್ಘಾಟನೆ ಕಾರ್ಯಕ್ರಮದಲ್ಲಿ ತರಬೇತಿದಾರರಾದ ಶಿವಶಕ್ತಿ ಚೆನ್ನೆöÊ, ಎಂ.ವೈ.ಸಿ.ಸಿ. ಮಡಿಕೇರಿ, ವಿಮಲ್ಸ್ ಮಡಿಕೇರಿ ಕ್ರಿಕೇಟ್ ಕ್ಲಬ್‌ಗಳ ಸದಸ್ಯರು, ಪಟುಗಳಾದ ಸಾಜಿ, ಮನ್ಸೂರ್, ಅನ್ಸಾಫ್, ಉಸ್ಮಾನ್ ವೀರಾಜಪೇಟೆ ಕ್ರಿಕೆಟ್ ಪಟುಗಳಾದ ಆಲ್ತಾಫ್, ಹೆಚ್.ಎಂ. ಆನಂದ್ (ಎಸ್.ಬಿ.ಐ) ರಾಜೇಶ್ ನಾಯರ್, ಬಿಲ್ಟನ್ ವಾಜ್, ಆಸೀಫ್ ಮಾನ್ನಾ, ನಿತೀನ್ ಲೇಪು ಮತ್ತು ಕಿರಿಯ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.