ಹೆಬ್ಬಾಲೆ, ಆ. ೨೪: ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.

ಬಾಣಾವರ ಅರಣ್ಯ ವಲಯ ವ್ಯಾಪ್ತಿಯ ಅಂದಾನಿಪುರ ಗ್ರಾಮದ ಪೈಸಾರಿ ಜಾಗದಲ್ಲಿ ೩ ಶ್ರೀಗಂಧದ ಮರಗಳನ್ನು ಕಡಿದು ತುಂಡುಗಳಾಗಿ ಹಾಗೂ ಕೊರಟುಗಳಾಗಿ ಪರಿವರ್ತಿಸಿದ ಒಟ್ಟು ೨೫ ಕೆಜಿ ಶ್ರೀಗಂಧವನ್ನು ಬೈಕಿನಲ್ಲಿ ಸಾಗಾಟ ಮಾಡುತ್ತಿದ್ದ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಗೋಣಿಮರೂರು ಗ್ರಾಮದ ರವಿ ಹಾಗೂ ಮಹೇಂದ್ರ ಬಂಧಿತ ಆರೋಪಿಗಳು. ಕೃತ್ಯಕ್ಕೆ ಬಳಸಿದ್ದ ಸ್ಪೆ÷್ಲಂಡರ್ ಬೈಕ್‌ನ್ನು ವಶಪಡಿಸಿ ಕೊಳ್ಳಲಾಗಿದೆ. ಮತ್ತೋರ್ವ ಆರೋಪಿ ನಾಗರಾಜ್ ಎಂಬಾತ ಪರಾರಿಯಾಗಿ ದ್ದಾನೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಎಚ್.ಪಿ. ಚೇತನ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಎಚ್.ಎಂ. ರಾಕೇಶ್, ಅರಣ್ಯ ರಕ್ಷಕರಾದ ಪ್ರಸಾದ್, ವೀಕ್ಷಕರಾದ ಅಂಥೋಣಿ, ವಾಹನ ಚಾಲಕ ಸಂತೋಷ್ ಪಾಲ್ಗೊಂಡಿದ್ದರು.