ಮಡಿಕೇರಿ, ಆ. ೨೩: ಮಡಿಕೇರಿ ನಗರಸಭೆಯ ಬಿಜೆಪಿಯ ಚುನಾಯಿತ ಸದಸ್ಯ ಕೆ.ಎಂ. ಅಪ್ಪಣ್ಣ ನಗರಸಭೆಯ ಕೆಲಸಗಳನ್ನು ಅಧಿಕಾರ ದುರುಪಯೋಗದ ಲಾಭದಾಯಕ ವ್ಯವಹಾರ ಮಾಡಿರುವ ಬಗ್ಗೆ ಪರಿಶೀಲಿಸಿ, ಅವರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಎಸ್.ಡಿ.ಪಿ.ಐ. ಪಕ್ಷದ ನಗರಸಭಾ ಸದಸ್ಯರು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕೆ.ಎ ಅಪ್ಪಣ್ಣ ತಮ್ಮ ಮಾಲೀಕತ್ವದಲ್ಲಿರುವ ಪ್ಲಾಂಟರ್ಸ್ ವರ್ಲ್ಡ್ ಎಂಬ ವಾಣಿಜ್ಯ ವ್ಯವಹಾರದ ಸಂಸ್ಥೆಯ ಮುಖಾಂತರ, ಮಡಿಕೇರಿ ನಗರಸಭೆಯ ನೈರ್ಮಲ್ಯ ವಿಭಾಗದ ಕಾಡು ಕಡಿಯುವ ಯಂತ್ರದ ದುರಸ್ತಿ ಕೆಲಸ ಕಾರ್ಯಗಳನ್ನು ಮಾಡಿ ೨೯.೧೦.೨೦೨೧ ರಿಂದ ಇಂದಿನವರೆಗೆ ನಗರಸಭೆಯಿಂದ ಹಣವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಅಪ್ಪಣ್ಣ ಅವರು ನಗರಸಭೆಗೆ ಸಲ್ಲಿಸಿದ ಜಿ.ಎಸ್.ಟಿ ಟ್ಯಾಕ್ಸ್ ಬಿಲ್ಲಿನಲ್ಲಿ ನಮೂದಿಸಿರುವ ಜಿ.ಎಸ್.ಟಿ ಸಂಖ್ಯೆ ಹಾಗೂ ಪಾನ್ ಸಂಖ್ಯೆ ಇವರ ಹೆಸರಿನಲ್ಲಿ ಸಂಬAಧಪಟ್ಟ ಇಲಾಖೆ ಗಳಲ್ಲಿ ನೊಂದಾವಣೆ ಗೊಂಡಿದೆ ಮತ್ತು ಅವರದ್ದೇ ಪಾನ್ ಸಂಖ್ಯೆಯಲ್ಲಿ ಟಿ.ಡಿ.ಎಸ್ ಕೂಡ ಬಿಲ್ಲಿನಿಂದ ವಸೂಲಿ ಮಾಡಿ ಆದಾಯ ತೆರಿಗೆ ಇಲಾಖೆಗೆ ಪಾವತಿಸಲಾಗಿದೆ ಎಂದು ಎಸ್.ಡಿ.ಪಿ.ಐ. ಪ್ರಮುಖ ಅಮೀನ್ ಮೊಹಿಸಿನ್ ಈ ಸಂದರ್ಭ ಆರೋಪಿಸಿದರು.

ಈ ವಿಚಾರವನ್ನು ತಾ. ೮.೮.೨೦೨೨ ರಂದು ನಡೆದ ನಗರ ಸಭೆಯ ಮಾಸಿಕ ಸಭೆಯಲ್ಲಿ ಪ್ರಸ್ತಾಪಿಸಿದಾಗ ಆಡಳಿತ ಪಕ್ಷದ ಸದಸ್ಯರು ವಿನಾಕಾರಣ ಗೊಂದಲ ವನ್ನು ಉಂಟು ಮಾಡಿ ವಿಷಯವನ್ನು ಮರೆ ಮಾಚುವ ಉದ್ದೇಶದಿಂದ ತನಗೆ ಮಾತನಾಡಲು ಅವಕಾಶ ನೀಡದೆ ಗದ್ದಲ ಮಾಡಿದ್ದಾರೆ ಎಂದು ಕೂಡ ಅವರು ದೂರಿದರು.

ಕರ್ನಾಟಕ ಪೌರಸಭೆಗಳ ಅಧಿನಿಯಮ ೧೯೬೪ ರ ಪ್ರಕರಣ ೧೬(೧)(ಏ)ಯಲ್ಲಿ ನಗರಸಭೆಯ ಯಾವುದೇ ಚುನಾಯಿತ ಸದಸ್ಯ ನಗರಸಭೆಯಲ್ಲಿ ಲಾಭದಾಯಕ ಕೆಲಸ ಕಾರ್ಯಗಳನ್ನು ಮಾಡಿದರೆ ಅಂತಹ ಸದಸ್ಯರು ಸದಸ್ಯತ್ವ ಸ್ಥಾನಕ್ಕೆ ಅ£ಅಧಿನಿಯಮ ೧೯೬೪ ರ ಪ್ರಕರಣ ೧೬(೧)(ಏ)ಯಲ್ಲಿ ನಗರಸಭೆಯ ಯಾವುದೇ ಚುನಾಯಿತ ಸದಸ್ಯ ನಗರಸಭೆಯಲ್ಲಿ ಲಾಭದಾಯಕ ಕೆಲಸ ಕಾರ್ಯಗಳನ್ನು ಮಾಡಿದರೆ ಅಂತಹ ಸದಸ್ಯರು ಸದಸ್ಯತ್ವ ಸ್ಥಾನಕ್ಕೆ ಅನರ್ಹರಾಗಿರುತ್ತಾರೆ. ಆದ್ದರಿಂದ ಈ ವಿಚಾರವಾಗಿ ಮಡಿಕೇರಿ ನಗರಸಭೆಯ ದಾಖಲೆಗಳನ್ನು ಪರಿಶೀಲಿಸಿ ನಿಯಮ ಬಾಹಿರವಾಗಿ ಮಡಿಕೇರಿ ನಗರಸಭೆಯ ಲಾಭದಾಯಕ ಕೆಲಸ ಕಾರ್ಯಗಳನ್ನು ಮಾಡಿರುವ ಕಾರಣದಿಂದ ಕೆ.ಎಂ. ಅಪ್ಪಣ್ಣ ಅವರ ಸದಸ್ಯತ್ವವನ್ನು ಕಾನೂನು ಪ್ರಕಾರ ರದ್ದುಗೊಳಿಸು ವಂತೆ ಜಿಲ್ಲಾಧಿಕಾರಿ ಬಳಿ ಅಮೀನ್ ಮೊಹಿಸಿನ್ ಮನವಿ ಮಾಡಿದರು.

ಈ ಸಂದರ್ಭ ಎಸ್.ಡಿ.ಪಿ.ಐ. ನಗರಸಭಾ ಸದಸ್ಯರಾದ ಮನ್ಸೂರ್, ಮೇರಿ ವೇಗಸ್, ನೀಮಾ ಅರ್ಷಾದ್ ಮತ್ತು ಬಶೀರ್ ಅಹಮದ್ ಇದ್ದರು.Àರ್ಹರಾಗಿರುತ್ತಾರೆ. ಆದ್ದರಿಂದ ಈ ವಿಚಾರವಾಗಿ ಮಡಿಕೇರಿ ನಗರಸಭೆಯ ದಾಖಲೆಗಳನ್ನು ಪರಿಶೀಲಿಸಿ ನಿಯಮ ಬಾಹಿರವಾಗಿ ಮಡಿಕೇರಿ ನಗರಸಭೆಯ ಲಾಭದಾಯಕ ಕೆಲಸ ಕಾರ್ಯಗಳನ್ನು ಮಾಡಿರುವ ಕಾರಣದಿಂದ ಕೆ.ಎಂ. ಅಪ್ಪಣ್ಣ ಅವರ ಸದಸ್ಯತ್ವವನ್ನು ಕಾನೂನು ಪ್ರಕಾರ ರದ್ದುಗೊಳಿಸು ವಂತೆ ಜಿಲ್ಲಾಧಿಕಾರಿ ಬಳಿ ಅಮೀನ್ ಮೊಹಿಸಿನ್ ಮನವಿ ಮಾಡಿದರು.

ಈ ಸಂದರ್ಭ ಎಸ್.ಡಿ.ಪಿ.ಐ. ನಗರಸಭಾ ಸದಸ್ಯರಾದ ಮನ್ಸೂರ್, ಮೇರಿ ವೇಗಸ್, ನೀಮಾ ಅರ್ಷಾದ್ ಮತ್ತು ಬಶೀರ್ ಅಹಮದ್ ಇದ್ದರು.