ವೀರಾಜಪೇಟೆ, ಆ. ೨೪: ವೀರಾಜಪೇಟೆ ಪುರಸಭೆ ವತಿಯಿಂದ ಪೌರಕಾರ್ಮಿಕರು, ಸಿಬ್ಬಂದಿಗಳು ಮತ್ತು ಚುನಾಯಿತ ಸದಸ್ಯರುಗಳಿಗೆ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಪುರುಷರ ಹಗ್ಗಜಗ್ಗಾಟದಲ್ಲಿ ನವೀನ್ ತಂಡ (ಪ್ರ), ಮಹಿಳೆಯರ ವಿಭಾಗದಲ್ಲಿ ಮಮತಾ ಮತ್ತು ತಂಡ (ಪ್ರ), ರಂಜಿ ಪೂಣಚ್ಚ ತಂಡ (ಮಿಶ್ರ ವಿಭಾಗ) ಪ್ರಥಮ ಸ್ಥಾನ ಪಡೆದುಕೊಂಡರು. ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಅಭಿಯಂತರ ಹೇಮಕುಮಾರ್ (ಪ್ರ), ಮುಖ್ಯಾಧಿಕಾರಿ ಚಂದ್ರಕುಮಾರ್ (ದ್ವಿ), ಸದಸ್ಯರುಗಳ ವಿಭಾಗದಲ್ಲಿ ಸುಭಾಷ್ ಮಹಾದೇವ್ (ಪ್ರ), ಡಿ.ಪಿ. ರಾಜೇಶ್ (ದ್ವಿ), ಮಹಿಳೆಯರ ವಿಭಾಗದಲ್ಲಿ ದೇಚಮ್ಮ ಎಂ.ಕೆ. (ಪ್ರ), ನಿತ್ಯಾ (ದ್ವಿ), ಐವತ್ತರ ವಯೋಮಿತಿಯಲ್ಲಿ ಆಶಾ ಸುಬ್ಬಯ್ಯ (ಪ್ರ), ಗೌರಿ (ದ್ವಿ) ಸ್ಥಾನ ಪಡೆದುಕೊಂಡರು.
ಸAಜೆ ಪುರಭವನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವೈದ್ಯೆ ಅಕ್ಷಯ, ನಿವೃತ ಉಪಾಧ್ಯಾಯ ಅಲ್ಬರ್ಟ್ ಡಿಸೋಜಾ, ನಿವೃತ್ತ ಜವಾನ ಸೀನಪ್ಪ, ಸ್ವಚ್ಛತಾ ಸಮಾಜ ಸೇವಕಿ ಕುಮಾರಿ, ಚೆಸ್ಕಾಮ ಸಿಬ್ಬಂದಿ ಎನ್. ಶ್ರೀಧರ್, ಸಾರ್ವಜನಿಕ ಆಸ್ಪತ್ರೆಯ ಶವಗಾರ ಸಿಬ್ಬಂದಿ ಚಂದ್ರ ಅವರುಗಳನ್ನು ಸನ್ಮಾನಿಸಲಾಯಿತು. ಬಳಿಕ ಬಟ್ಟಿಯಂಡ ಲಿಖಿತ ತಂಡದಿAದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಪುರಸಭೆ ಅಧ್ಯಕ್ಷೆ ಸುಶ್ಮೀತಾ, ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ, ಮುಖ್ಯಾಧಿಕಾರಿ ಚಂದ್ರಕುಮಾರ್, ಅಭಿಯಂತರ ಹೇಮಕುಮಾರ್, ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.