ಸಿದ್ದಾಪುರ, ಆ. ೨೪: ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾಟಕ್ಕೆ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಂಡಿಯ ಮರ್ಕಝ್ ಪಬ್ಲಿಕ್ ಶಾಲೆಯ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಕರ್ನಾಟಕ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಕೊಡಗು ಫುಟ್ಬಾಲ್ ಅಸೋಸಿ ಯೇಷನ್ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಅಮ್ಮತ್ತಿಯಲ್ಲಿ ನಡೆದ ಕರ್ನಾಟಕ ಯೂಥ್ ಲೀಗ್ ಆಯ್ಕೆ ಪ್ರಕ್ರಿಯೆಯಲ್ಲಿ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ೧೩ ವರ್ಷದೊಳಗಿನ ವಿಭಾಗದಲ್ಲಿ ಮರ್ಕಝ್ ಶಾಲೆಯ ೭ನೇ ತರಗತಿಯ ವಿದ್ಯಾರ್ಥಿ ಶಫ್ಫಾನ್, ೧೫ ವರ್ಷದೊಳಗಿನ ವಿಭಾಗದಲ್ಲಿ ೮ನೇ ತರಗತಿಯ ಅಹ್ಮದ್ ರಾಝಿಕ್ ಮತ್ತು ಶಾಫಿ ಆಯ್ಕೆಯಾಗಿದ್ದು, ಮುಂದಿನ ತಿಂಗಳು ಕರ್ನಾಟಕದ ಪ್ರತಿಷ್ಠಿತ ಬೆಂಗಳೂರಿನ ನಕ್ಷತ್ರ ಫುಟ್ಬಾಲ್ ಅಕಾಡೆಮಿಯಲ್ಲಿ ಉಚಿತವಾಗಿ ಒಂದು ತಿಂಗಳ ತರಬೇತಿ ಪಡೆದು, ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆಂದು ಶಾಲೆಯ ದೈಹಿಕ ಶಿಕ್ಷಕ ಅಬ್ದುಲ್ ನಾಸಿರ್ ತಿಳಿಸಿದ್ದಾರೆ.