ವೀರಾಜಪೇಟೆ, ಆ. ೨೪: ಇಲ್ಲಿನ ಕೊಡವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ಪ್ರಾರಂಭಗೊAಡು ಮೂರು ವರ್ಷಗಳು ಕಳೆದಿದ್ದು ಪ್ರಗತಿಯಲ್ಲಿ ಸಾಗಿಸುತ್ತಿದೆ. ಸದಸ್ಯರುಗಳು, ಸಹಕಾರಿಗಳು ಮತ್ತು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕುತಿದೆ ಎಂದು ಸಂಸ್ಥೆ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಸ್ಥೆಯು ವೀರಾಜಪೇಟೆ, ಮಡಿಕೇರಿ ಪೊನ್ನಂಪೇಟೆ ಮೂರು ತಾಲೂಕುಗಳನ್ನು ಒಳಗೊಂಡಿದೆ. ೧೧೬೧ ಸದಸ್ಯರುಗಳನ್ನು ಹೊಂದಿದೆ. ಪಾಲು ಬಂಡವಾಳ ೫೩.೪೬ ಲಕ್ಷಗಳಾಗಿದ್ದು ವಿವಿಧ ಠೇವಣಿಗಳಿಂದ ೪೩೨.೭೦ ಲಕ್ಷ ಸಂಗ್ರಹಣೆ ಆಗಿದೆ. ೩೩೦.೨೯ ಲಕ್ಷ ವಿವಿಧ ಬಗೆಯ ಸಾಲ ಸೌಲಭ್ಯಗಳನ್ನು ನೀಡಲಾಗಿದ್ದು ಶೇ. ೧೦೦ ಸಾಲ ವಸೂಲಾತಿ ಮಾಡಲಾಗಿದೆ. ಇತರೆ ಬ್ಯಾಂಕಿನಲ್ಲಿ ಠೇವಣಿಯಾಗಿ ೧೮೫ ಲಕ್ಷ ಹೂಡಿಕೆ ಮಾಡಲಾಗಿದ್ದು ೨೦೨೧-೨೨ ಸಾಲಿನಲ್ಲಿ ೬.೩೩.೯೩೪ ಲಕ್ಷ ಲಾಭ ಗಳಿಸಿದೆ. ಲಾಭಾಂಶವನ್ನು ಸಹಕಾರಿಗಳ ನಿಯಮಾನುಸಾರ ವಿಲೇವಾರಿ ಮಾಡಲಾಗುವುದು. ೨೦೨೧-೨೨ಸಾಲಿನ ಲಾಭಾಂಶದಲ್ಲಿ ಸದಸ್ಯರಿಗೆ ಶೇ೮ ರಷ್ಟು ಡಿವಿಡೆಂಟ್ ಹಂಚಲು ಕ್ರಮ ವಹಿಸಲಾಗುವುದು. ಇದೇ ಮೊದಲ ಬಾರಿ ಅಲ್ಪಾವಧಿ ಯಲ್ಲಿ ಸದಸ್ಯರಿಗೆ ಡಿವಿಡೆಂಟ್ ಹಂಚಿದ ಹೆಗ್ಗಳಿಕೆ ನಮ್ಮ ಸೌಹಾರ್ಧ ಸಂಸ್ಥೆAiÀiದಾಗಿದೆ. ಮುಂದಿನ ಸಾಲಿನಲ್ಲಿ ಇನ್ನು ಹಚ್ಚಿನ ಲಾಭ ಗಳಿಸುವ ವಿಶ್ವಾಸ ಇದೆ. ತಾ. ೨೭ ರಂದು ಪಟ್ಟಣ ಸಹಕಾರ ಬ್ಯಾಂಕ್ನ ಸಭಾಂಗಣದಲ್ಲಿ ವಾರ್ಷಿಕ ಮಹಾಸಭೆ ನಡೆಸಲಾಗುವುದು. ಮಹಾಸಭೆಯ ಪುಸ್ತಕವನ್ನು ಸಂಘದ ಕಚೇರಿಯಿಂದ ಪಡೆದುಕೊಳ್ಳಬಹುದು ಎಂದು ಹೇಳಿದರು.
ಉಪಾಧ್ಯಕ್ಷ ಚೇಂದAಡ ವಸಂತ್ಕುಮಾರ್ ಮಾತನಾಡಿ ನಮ್ಮ ಸಂಸ್ಥೆಯು ಸಂಪೂರ್ಣ ಗಣಕಿಕೃತವಾಗಿದ್ದು ಗ್ರಾಹಕರ ಅನುಕೂಲಕ್ಕಾಗಿ ಸೇಫ್ ಡಿಪಾಸಿಟ್ ಲಾಕರ್ ಮತ್ತು ಇ ಸ್ಟಾಂಪಿAಗ್ ಸೌಲಭ್ಯವನ್ನು ನೀಡಲಾಗುತ್ತಿದೆ. ಸಹಕಾರಿಯಲ್ಲಿ ಪಿಗ್ಮಿ ಸಾಲ ಸೇರಿದಂತೆ ಎಲ್ಲಾ ವಿಧದÀ ಸಾಲ ಸೌಲಭ್ಯಗಳನ್ನು ಆಧಾರ ದಾಖಲಾತಿಗಳೊಂದಿಗೆ ಸದಸ್ಯರಿಗೆ ವಿತರಿಸಲಾಗುವುದು. ೨೦೨೨-೨೩ ಸಾಲಿನಲ್ಲಿ ಸಹಕಾರಿ ವತಿಯಿಂದ ನೆಫ್ಟ್, ಆರ್ಟಿಜಿಎಸ್, ಮೊಬೈಲ್ ಬ್ಯಾಂಕಿAಗ್ನ್ನು ರಾಷ್ಟಿçÃಕೃತ ಬ್ಯಾಂಕಿನ ಸಹಯೋಗದೊಂದಿಗೆ ಆರಂಭಿಸಲು ಚಂತನೆ ನಡೆಸಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ನಿದೆೆÃðಶಕರು ಗಳಾದ ಕಾಂಡAಡ ಚರ್ಮಣ, ನೆಲ್ಲಚಂಡ ಭೀಮಯ್ಯ, ವಾಂಚಿರ ನಾಣಯ್ಯ, ವಾಟೇರಿರ ಪೂವಯ್ಯ, ಕಾಳೇಂಗಡ ತಿಮ್ಮಯ್ಯ, ನೆಲ್ಲಮಕ್ಕಡ ಬೆಳ್ಯಪ್ಪ, ಮೇಕೇರಿರ ಪಾಲಿ ಸುಬ್ರಮಣಿ, ಪಟ್ಟಡ ದಿವ್ಯ, ಕಾರ್ಯ ನಿರ್ವಣಾಧಿಕಾರಿ ಅಕ್ಕಮ್ಮ ಉಪಸ್ಥಿತರಿದ್ದರು.