ಮಡಿಕೇರಿ, ಅ. ೨೪: ಕೊಡಗು ಜಿಲ್ಲೆಯಲ್ಲಿ ಮಳೆಯಿಂದಾಗಿ ಇದುವರೆಗೆ ೩೧೧ ಕೋಟಿ ೨೫ ಲಕ್ಷದ ೪೨ ಸಾವಿರ ರೂ. ಒಟ್ಟು ನಷ್ಟ ಸಂಭವಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಮಾಹಿತಿ ನೀಡಿದ್ದು, ವಿವರ ಇಂತಿದೆ:-

೨೩ ಮನೆಗಳು ಸಂಪೂರ್ಣ ಹಾನಿಯಾಗಿದ್ದು,

(ಮೊದಲ ಪುಟದಿಂದ) ೯ ಮನೆಗಳಿಗೆ ಪರಿಹಾರ ನೀಡಲಾಗಿದೆ. ೯೧ ಮನೆಗಳಿಗೆ ತೀವ್ರ ಹಾನಿಯಾಗಿದ್ದು, ೩೩ ಮನೆಗಳಿಗೆ ಪರಿಹಾರ ಒದಗಿಸಲಾಗಿದೆ. ೩೧೧ ಮನೆಗಳು ಭಾಗಶಃ ಹಾನಿಯಾಗಿದ್ದು, ೧೨೫ ಮನೆಗಳಿಗೆ ಪರಿಹಾರ ನೀಡಲಾಗಿದೆ. ಇವೆಲ್ಲವೂ ಸೇರಿ ಒಟ್ಟು ೪೨೫ ಮನೆಗಳಿಗೆ ಹಾನಿಯಾಗಿದ್ದು, ೧೬೭ ಮನೆಗಳಿಗೆ ಪರಿಹಾರ ವಿತರಿಸಲಾಗಿದೆ. ಕೃಷಿ ನಷ್ಟಕ್ಕೆ ಸಂಬAಧಿಸಿದAತೆ ೮೨.೦೧ ಹೆಕ್ಟೇರ್ ಹಾನಿಯಾಗಿದ್ದು, ೨೫.೬ ಲಕ್ಷ ನಷ್ಟ ಸಂಭವಿಸಿದೆ. ತೋಟಗಾರಿಕಾ ಪ್ರದೇಶಗಳು ೩೬.೨ ಹೆಕ್ಟೇರ್ ಹಾನಿಯಾಗಿದ್ದು, ೩೯.೮೨ ಲಕ್ಷ ನಷ್ಟ ಉಂಟಾಗಿದೆ. ತೋಟಗಾರಿಕೆ ಹಾಗೂ ಕೃಷಿ ಸೇರಿ ಒಟ್ಟು ೧೧೮.೨ ಹೆಕ್ಟೇರ್ ಹಾನಿಯಾಗಿದ್ದು, ೬೫.೪೨ ಲಕ್ಷ ನಷ್ಟವಾಗಿದೆ. ಮೀನುಗಾರಿಕೆ ವಲಯದಲ್ಲಿ ೧೫.೧೬ ಲಕ್ಷ ನಷ್ಟವಾಗಿದೆ. ೧೧೫೬.೦೪ ಕಿ.ಮೀ. ರಸ್ತೆ ಹಾನಿಗೊಳಗಾಗಿದ್ದು, ೧೪೮ ಕೋಟಿಯಷ್ಟು ನಷ್ಟ ಉಂಟಾಗಿದೆ. ಪಿ.ಡಬ್ಲೂö್ಯ.ಡಿ.ಗೆ ಸೇರಿದ ೩೬.೧೯ ಕಿ.ಮೀ., ಪಿ.ಆರ್.ಇಡಿಗೆ ಸೇರಿದ ೯೯೭.೩೩ ಕಿ.ಮೀ., ಪಿಎಂಜಿಎಸ್‌ವೈನ ೮೬.೩೨ ಕಿ.ಮೀ., ಡಿಯುಡಿಸಿಯ ೩೭೮ ಮೀ. ಹಾಗೂ ರಾಷ್ಟಿçÃಯ ಹೆದ್ದಾರಿಯ ೫ ಕಿ.ಮೀ. ರಸ್ತೆಗಳು ಹಾನಿಗೊಳಗಾಗಿವೆ.

೮೮ ಸೇತುವೆಗಳಿಗೆ ಹಾನಿಯಾಗಿದ್ದು, ೧೩೭ ಕೋಟಿ ನಷ್ಟವಾಗಿದೆ. ಪಿಆರ್‌ಡಿಇಯ ೪೪ ಮೋರಿಗಳು ಹಾನಿಗೊಳಗಾಗಿದ್ದು, ೨ ಕೋಟಿ ೨೫ ಲಕ್ಷ ನಷ್ಟ ಉಂಟಾಗಿದೆ. ಪಿಆರ್‌ಇಡಿಗೆ ಸೇರಿದ ೧೨೫ ತಡೆಗೋಡೆಗಳಿಗೆ ಹಾನಿಯಾಗಿದ್ದು, ೧೦ ಕೋಟಿ ೯೦ ಲಕ್ಷ ನಷ್ಟಗೊಂಡಿದೆ.

ಪಿ.ಡಬ್ಲೂö್ಯಡಿಯ ೨೫, ಪಿಎಂಜಿಎಸ್‌ವೈನ ೪, ಪಿಆರ್‌ಇಡಿಯ ೫೯, ರಾಷ್ಟಿçÃಯ ಹೆದ್ದಾರಿಗೆ ಸೇರಿದ ೨ ಸೇತುವೆಗಳು ಹಾನಿಗೊಳಗಾಗಿದೆ. ೪೨ ಪ್ರಾಣಿಗಳ ಜೀವ ಹಾನಿಯಾಗಿದ್ದು, ೩೭ ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. ಸುಳುಗಳಲೆಯ ವಸಂತಮ್ಮ, ಅಮ್ಮತ್ತಿ ಹೊಸಕೋಟೆಯ ಪ್ರಕಾಶ್ ಎಂಬವರುಗಳು ಮಳೆಯ ಆರ್ಭಟಕ್ಕೆ ಬಲಿಯಾಗಿದ್ದಾರೆ. ವಿದ್ಯುತ್ ಇಲಾಖೆಯಲ್ಲಿ ೩ ಕೋಟಿ ೫೨ ಲಕ್ಷ ನಷ್ಟ ಉಂಟಾಗಿದೆ. ೨೧೦೮ ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದು, ಬದಲಾಯಿಸಲಾಗಿದೆ. ಹಾನಿಗೊಳಗಾದ ೧೩೭ ಟ್ರಾನ್ಸ್ಫಾರ್ಮರ್‌ಗಳನ್ನು ಬದಲಾವಣೆ ಮಾಡಲಾಗಿದೆ. ೮.೬೭ ಕಿ.ಮೀ. ವಿದ್ಯುತ್ ತಂತಿಯನ್ನು ಬದಲಿಸಲಾಗಿದೆ.

೩೫ ಅಂಗನವಾಡಿ ಕೇಂದ್ರಗಳು ಹಾನಿಗೊಳಗಾಗಿದ್ದು, ೮೮.೫೦ ಲಕ್ಷ ನಷ್ಟ ಸಂಭವಿಸಿದೆ. ೧೪೨ ಶಾಲೆಗಳಿಗೆ ಹಾನಿಯಾಗಿದ್ದು, ೪ ಕೋಟಿ ೪೨ ಲಕ್ಷ ನಷ್ಟವಾಗಿದೆ. ೨೫ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಾನಿಯಾಗಿದ್ದು, ೮೧ ಲಕ್ಷ ನಷ್ಟವಾಗಿದೆ. ೫ ಸರ್ಕಾರಿ ಕಟ್ಟಡ, ೩೭ ಗ್ರಾ.ಪಂ. ಕಟ್ಟಡಗಳಿಗೆ ಹಾನಿಯಾಗಿದ್ದು, ೧ ಕೋಟಿ ೪೪ ಲಕ್ಷ ನಷ್ಟವಾಗಿದೆ. ೪ ಕುಡಿಯುವ ನೀರಿನ ಸಂಪರ್ಕಗಳು ಹಾನಿಗೊಂಡಿದ್ದು, ೧೪ ಲಕ್ಷ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.