ಮುಳ್ಳೂರು, ಆ. ೨೩: ಇತ್ತೀಚೆಗೆ ನೇಪಾಳದ ಪೊಕವೊರಾ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ನಡೆದ ಅಂರ‍್ರಾಷ್ಟಿçÃಯ ಹ್ಯಾಂಡ್ ಬಾಲ್ ಅಂತಿಮ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ ತಂಡದ ಕ್ಯಾಪ್ಟನ್ ನಿಡ್ತ ಗ್ರಾ.ಪಂ. ವ್ಯಾಪ್ತಿಯ ಗೋಪಾಲಪುರ ಗ್ರಾಮದ ಟಿ.ಎ. ಜೀವನ್ ಬೆಳ್ಳಿ ಪದಕಗಳಿಸಿ ದೇಶ ಮತ್ತು ರಾಜ್ಯಕ್ಕೆ ಕೀರ್ತಿ ತಂದಿರುವ ಹಿನ್ನೆಲೆಯಲ್ಲಿ ಜೀವನ್ ಅವರನ್ನು ನಿಡ್ತ ಗ್ರಾ.ಪಂ. ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಯಶೋಧ ಪುಟ್ಟಸ್ವಾಮಿ, ಉಪಾಧ್ಯಕ್ಷ ತೀರ್ಥಾನಂದ, ಪಿಡಿಓ ಪ್ರತಿಮಾ, ಕಾರ್ಯದರ್ಶಿ ಕುಶಾಲಪ್ಪ, ಗ್ರಾ.ಪಂ. ಸದಸ್ಯರು, ಜೀವನ್ ಅವರ ತಂದೆ ಅಶೋಕ್ ಮುಂತಾದವರು ಹಾಜರಿದ್ದರು.