ಮಡಿಕೇರಿ, ಆ.೨೩ : ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ಖಂಡಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನಜಾಗೃತಿ ಕೊಡಗು ನಡಿಗೆ ಕಾರ್ಯಕ್ರಮ ಹಾಗೂ ಪ್ರತಿಭಟನೆಯನ್ನು ಜಿಲ್ಲೆಯಲ್ಲಿ ವಿಧಿಸಲಾಗಿರುವ ನಿಷೇಧಾಜ್ಞೆ ತೆರವಾದ ಬಳಿಕ ನಡೆಸಲಾಗುವದೆಂದು ಕೆಪಿಸಿಸಿ ಮುಖಂಡ, ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ತಾ. ೨೬ರಂದು ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕರುಗಳ ಸೂಚನೆಯಂತೆ ಹಿರಿಯರೆಲ್ಲರೂ ಸೇರಿ ಪರಿಶೀಲನೆ ಮಾಡುವ ಸಲುವಾಗಿ ಜಿಲ್ಲೆಗೆ ಭೇಟಿ ನೀಡಿದ್ದೆವು. ಆದರೆ, ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಯಾವ ಕಾರಣಕ್ಕಾಗಿ ೧೪೪ ಸೆಕ್ಷನ್ ಹಾಕಲಾಗಿದೆ ಎಂದು ಪ್ರಶ್ನಿಸಿದರು. ಇದೀಗ ವಿಧಿಸಲಾಗಿರುವ ನಿಷೇಧಾಜ್ಞೆ ತೆರವಾದ ಬಳಿಕ ನಾಯಕರ ನಿರ್ಧಾರದಂತೆ ಬಿಜೆಪಿ, ಸರಕಾರ, ಜಿಲ್ಲಾಡಳಿತದ ವಿರುದ್ಧದ ಪ್ರತಿಭಟನೆ ಮುಂದುವರಿಸ ಲಾಗುವದೆಂದು ಹೇಳಿದರು.

ನಗರಸಭಾ ಸದಸ್ಯನನ್ನು ಬಂಧಿಸಲಿ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಮಾತನಾಡಿ, ತಾ.೧೮ರ ಘಟನೆ ವೇಳೆ ಪೊಲೀಸ್ ವರಿಷ್ಠಾಧಿಕಾರಿ ಗಳು ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದರು.

(ಮೊದಲ ಪುಟದಿಂದ) ಆದರೆ, ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ರುವ, ಮಡಿಕೇರಿ ನಗರಸಭಾ ನಾಮನಿರ್ದೇಶಿತ ಸದಸ್ಯರೋರ್ವರು ಮೊಟ್ಟೆ ಎಸೆದಿರುವ ಬಗ್ಗೆ ವೀಡೀಯೋ ಸಹಿತ ಸಾಕ್ಷಿ ಸಿಕ್ಕಿದೆ. ಆದರೂ ಕೂಡ ಬಂಧಿಸಲಾಗಿಲ್ಲ. ಕೂಡಲೇ ಬಂಧಿಸು ತ್ತಾರೋ ಅಥವಾ ನಾವೇ ವಶಕ್ಕೊಪ್ಪಿ ಸಬೇಕೋ ಎಂದು ಪ್ರಶ್ನಿಸಿದರು.

ಹೆದರಿ ದುಷ್ಕೃತ್ಯ

ಮಾಜಿ ಸಚಿವ ಬಿ.ಎ.ಜೀವಿಜಯ ಮಾತನಾಡಿ, ಮೊಟ್ಟೆ ಎಸೆದ ಸಂಪತ್ ಎಂಬಾತನಿಗೆ ಕಾಮಗಾರಿ ಗುತ್ತಿಗೆ ನೀಡಿ ಬಿಜೆಪಿಯವರು ಬೆದರಿಸಿದ್ದರಿಂದ ಈ ಕೃತ್ಯವೆಸಗಿದ್ದಾನೆ. ಈತನನ್ನು ಜೆಡಿಎಸ್ ವಕೀಲರು ಜಾಮೀನು ನೀಡಿ ಬಿಡಿಸಿಕೊಂಡು ಬಂದಿದ್ದಾರೆ. ಈತನಿಗೂ ತನಗೂ ಯಾವದೇ ಸಂಬAಧವಿಲ್ಲವೆAದು ಪುನರುಚ್ಚರಿಸಿದರು. ಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ವಿನಯಕುಮಾರ್ ಸೊರಕೆ, ಪಿರಿಯಾಪಟ್ಟಣ ಮಾಜಿ ಶಾಸಕ ವೆಂಕಟೇಶ್ ಇದ್ದರು.

ಹೊಡೆಸಿದವರಿಗೆ ಶಿಕ್ಷೆಯಾಗಬೇಕು

ಮತ್ತೊಂದು ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ ಅವರು, ಕೊಡಗಿನ ಗಡಿ, ಮಡಿಕೇರಿಯಲ್ಲಿ ಪ್ರತಿಭಟನೆ ನಡೆದಾ ಗಲೇ ಪೊಲೀಸರು ಎಚ್ಚೆತ್ತುಕೊಂಡು ಭದ್ರತೆ ನೀಡಬೇಕಿತ್ತು. ಮೊಟ್ಟೆ ಹೊಡೆದವರಿಗಿಂತ ಹೊಡೆಸಿದವರಿಗೆ ಮೊದಲು ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು. ಪೊಲೀಸರು ಬಿಜೆಪಿಯವರ ಕೈವಶರಾಗಿದ್ದಾರೆಂದು ಆರೋಪಿಸಿ ದರು. ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಂಜುನಾಥ್ ಕುಮಾರ್ ಮಾತನಾಡಿ, ಬಿಜೆಪಿಯವರು ಅಪರಾಧ ರಾಜಕಾರಣ ಮಾಡುತ್ತಿದ್ದಾರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಅಪಾಯಕಾರಿ ಎಂದು ಹೇಳಿದರು.

ಗೋಷ್ಠಿಯಲ್ಲಿ ಡಿಸಿಸಿ ಪ್ರಮುಖ, ನಗರ ಸಭಾ ಮಾಜಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ಕುಶಾಲನಗರ ಬ್ಲಾಕ್ ಅಧ್ಯಕ್ಷೆ ಸುನಿತಾ ಮಂಜುನಾಥ್, ಮಡಿಕೇರಿ ಬ್ಲಾಕ್ ಉಪಾಧ್ಯಕ್ಷ ಪ್ರಭು ರೈ ಇದ್ದರು.