ಮಡಿಕೇರಿ, ಆ. ೨೩: ಕಾಕೋಟುಪರಂಬು ಬಳಿ ಧರ್ಮಗುರುವಿನ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ. ಉಸ್ಮಾನ್ ಹಾಗೂ ಪ್ರಧಾನ ಕಾರ್ಯದರ್ಶಿ ಸೈಯದ್ ಬಾವ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಧರ್ಮಗುರುವಿನ ಮೇಲೆ ಹಲ್ಲೆ ಮಾಡಿ ಅವರ ಪತ್ನಿ ಹಾಗೂ ಮಕ್ಕಳ ಮೇಲೂ ಹಲ್ಲೆ ಯತ್ನ ನಡೆಸಿರುವ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಆ ಮೂಲಕ ಇನ್ನು ಮುಂದೆ ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣಗಳು ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ.
ಎಸ್‌ವೈಎಸ್ ಸೆಂಟರ್
ಚೆಯ್ಯAಡಾಣೆ: ಹಲ್ಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಭವಿಷ್ಯದಲ್ಲಿ ಘಟನೆ ಮರುಕಳಿಸದ ರೀತಿಯಲ್ಲಿ ಕ್ರಮಕೈಗೊಳ್ಳಬೇಕೆಂದು ಎಸ್‌ವೈಎಸ್ ವೀರಾಜಪೇಟೆ ಸೆಂಟರ್ ವತಿಯಿಂದ ವೀರಾಜಪೇಟೆ ಪೊಲೀಸ್ ಠಾಣೆಗೆ ತೆರಳಿ ಡಿವೈಎಸ್‌ಪಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಎಸ್‌ವೈಎಸ್ ವೀರಾಜಪೇಟೆ ಸೆಂಟರ್ ಅಧ್ಯಕ್ಷ ಅಹ್ಮದ್ ಮದನಿ, ಎಸ್‌ಎಸ್‌ಎಫ್ ರಾಷ್ಟಿçÃಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್, ಎಸ್‌ವೈಎಸ್ ಕೊಡಗು ಜಿಲ್ಲಾ ಮಾಜಿ ಕೋಶಾಧಿಕಾರಿ ಇಬ್ರಾಹಿಂ ಹಾಜಿ ಕಲ್ಲುಬಾಣೆ, ನಾಯಕರಾದ ಉಮ್ಮರ್ ಕಲ್ಲುಬಾಣೆ, ಜಾಫರ್ ಮಿಸ್ಬಾಯಿ, ತನ್ವೀರ್ ಅನ್ವಾರಿ, ಅಬ್ದುಲ್ ಲತೀಫ್ ಸಖಾಫಿ ಚಿಟ್ಟಡೆ ಇದ್ದರು.
ಸುನ್ನಿ ಮಹಲ್ ಫೆಡರೇಶನ್
ಮಡಿಕೇರಿ: ಧರ್ಮಗುರುಗಳ ಮೇಲೆ ಕೆಲವರು ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ ಎಂದು ಸುನ್ನಿ ಮಹಲ್ ಫೆಡರೇಷನ್‌ನ ಕೊಡಗು ಜಿಲ್ಲಾ ಘಟಕ ಆರೋಪಿಸಿದ್ದು, ತಪ್ಪಿತಸ್ಥರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಫೆಡರೇಷನ್‌ನ ಕಾರ್ಯದರ್ಶಿ ಸಿ.ಎಂ. ಹಮೀದ್ ಉಸ್ತಾದ್, ಪ್ರಮುಖರಾದ ಉಮ್ಮರ್ ಫೈಜಿ ಹಾಗೂ ಅಬ್ದುಲ್ ಕರೀಂ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದ್ದಾರೆ. ಪೊಲೀಸರು ಕಠಿಣ ಕ್ರಮಕೈಗೊಳ್ಳುವ ಮೂಲಕ ಇನ್ನು ಮುಂದೆ ಈ ರೀತಿಯ ಪ್ರಕರಣ ನಡೆಯದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಎಸ್‌ಕೆಎಸ್‌ಎಸ್‌ಎಫ್
ಮಡಿಕೇರಿ: ಕುಟುಂಬದೊAದಿಗೆ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಧರ್ಮಗುರುಗಳನ್ನು ಹಿಂಬಾಲಿಸಿ ಹಲ್ಲೆ ನಡೆಸಿ, ಜೊತೆಗಿದ್ದ ಪತ್ನಿ ಹಾಗೂ ಮಕ್ಕಳ ಮೇಲೆ ಹಲ್ಲೆಗೆ ಮುಂದಾಗಿರುವ ಸಂಘಪರಿವಾರದ ಗೂಂಡಾಗಿರಿಯನ್ನು ಎಸ್.ಕೆ.ಎಸ್.ಎಸ್.ಎಫ್. ಕೊಡಗು ಜಿಲ್ಲಾ ಸಮಿತಿ ಖಂಡಿಸಿದೆ.
ಹಲ್ಲೆ ಮಾಡಿದ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ಕೋಮು ಘರ್ಷಣೆ ಸೃಷ್ಟಿಸಲು ಸಂಘಪರಿವಾರ ಸಂಘಟನೆಗಳು ನಿರಂತರ ಷಡ್ಯಂತ್ರ ರೂಪಿಸುತ್ತಿದೆ. ಇಂತಹ ಅಹಿತಕರ ಘಟನೆಗಳು ಮರುಕಳಿಸದ ರೀತಿಯಲ್ಲಿ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಎಸ್.ಕೆ.ಎಸ್.ಎಸ್.ಎಫ್. ಕೊಡಗು ಜಿಲ್ಲಾಧ್ಯಕ್ಷ ತಮ್ಲೀಖ್ ದಾರಿಮಿ ಮಡಿಕೇರಿ ಹಾಗೂ ಪ್ರಧಾನ ಕಾರ್ಯದರ್ಶಿ ಜಂಶೀರ್ ವಾಫಿ ಗೋಣಿಕೊಪ್ಪ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.