ಮಡಿಕೇರಿ, ಆ. ೨೩: ದೇಶದ ಅರ್ಥ ವ್ಯವಸ್ಥೆಯ ವಿಷಯ ಜನಸಾಮಾನ್ಯರ ಚರ್ಚಿತ ವಿಚಾರವಾಗಬೇಕು. ಇದರಿಂದ ದೇಶದ ಆರ್ಥಿಕತೆಗೆ ಬಲ ದೊರೆಯುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ಅಂರ‍್ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ವಿಜ್ಞಾನನಂದ ಸ್ವಾಮೀಜಿ ಹೇಳಿದರು.
ನಗರದ ಹೊರವಲಯದ ಖಾಸಗಿ ಹೋಂಸ್ಟೇ ಸಭಾಂಗಣದಲ್ಲಿ ‘ಹಿಂದೂ ಎಕನಾಮಿಕ್ ಫೋರಂ’ನ ಕೊಡಗು ಜಿಲ್ಲಾ ಘಟಕವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಹಿಂದೂ ಸಮಾಜದ ಹಾಗೂ ಸಂಸ್ಕೃತಿಯ ಉಳಿವಿಗೆ ವ್ಯಾಪಾರೋದ್ಯಮ ಕೂಡ ಪರಿಣಾಮಕಾರಿಯಾಗಿ ಮುನ್ನಡೆಯಬೇಕು. ಆರ್ಥಿಕತೆಯನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ. ವ್ಯಾಪಾರೋದ್ಯಮದ ಸ್ವರೂಪ ದಿನದಿಂದ ದಿನಕ್ಕೆ ಜನರಿಗೆ ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಇದಕ್ಕೆ ನಾವು ಹೊಂದಿಕೊಳ್ಳಬೇಕು. ದೇವಾಲಯ ನಿರ್ಮಾಣ, ಧರ್ಮ ರಕ್ಷಣೆಗೆ ದುಡಿಯುವ ನಾವು ವ್ಯಾಪಾರೋದ್ಯಮ ಬೆಳೆವಣಿಗೆಯಲ್ಲಿಯೂ ಪಾತ್ರರಾಗಬೇಕು. ಇನ್ನಿತರ ಧರ್ಮಗಳು ಕೇವಲ ಧಾರ್ಮಿಕ ವಿಚಾರದಲ್ಲಿ ಭಾಗವಹಿಸದೆ ಹೂಡಿಕೆ, ಬ್ಯಾಂಕಿAಗ್, ಆಹಾರ ಕೇಂದ್ರಿತ ಉದ್ಯಮಗಳಲ್ಲಿ ಸಕ್ರಿಯವಾಗಿವೆ. ಈ ಕೆಲಸ ಮಾಡುವಲ್ಲಿ ಹಿಂದೂ ಸಮಾಜ ಹಿನ್ನಡೆ ಅನುಭವಿಸಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಸಲಹೆ ನೀಡಿದರು. ಆಧುನಿಕ ಯುಗದಲ್ಲಿ ಆರ್ಥಿಕತೆ ಹೆಚ್ಚಿಸಿಕೊಳ್ಳುವುದು ಅವಶ್ಯಕವಾಗಿದೆ. ಹಣ ನಿರ್ವಹಣೆಯನ್ನು ನಾವು ಕಲಿಯಬೇಕು. ಆದಾಯ ಹಾಗೂ ಖರ್ಚು ವೈಜ್ಞಾನಿಕವಾಗಿರಬೇಕು. ಬೇರುಮಟ್ಟದಲ್ಲಿ ಜನರ ನಡುವೆ ಸಂಪರ್ಕ ಕಲ್ಪಿಸುವುದು ಸಂಘಟನೆಯ ಉದ್ದೇಶವಾಗಿದೆ. ನಮ್ಮ ದೇಶದಲ್ಲಿ ಉತ್ಪಾದಕರು ಹಾಗೂ ಗ್ರಾಹಕರು ಹಿಂದೂಗಳು ಅದನ್ನು ಮಾರಾಟ ಮಾಡಿ ಲಾಭ ಪಡೆಯುತ್ತಿರುವುದು ಬೇರೆ ಧರ್ಮದವರು. ಇದರ ಬಗ್ಗೆ ಜಾಗೃತಿಗೊಳ್ಳಬೇಕು. ಎಲ್ಲಾ ವಲಯಗಳಲ್ಲಿಯೂ ಬೇರೆ ಧರ್ಮದ ವ್ಯಾಪಾರಿಗಳು ಪ್ರಾಬಲ್ಯ ಸಾಧಿಸುತ್ತಿರುವುದು ಹಿಂದೂ ಸಮಾಜ ಭಯ ಪಡುವ ವಿಚಾರ ಎಂದು ಕಳವಳ ವ್ಯಕ್ತಪಡಿಸಿದರು.
ವ್ಯಾಪಾರೋದ್ಯಮದಲ್ಲಿ ತಂತ್ರಜ್ಞಾನ ಬಳಕೆಗೆ ಒತ್ತು ನೀಡಬೇಕು. ಉದ್ಯಮಿಗಳನ್ನು ಸೃಷ್ಟಿಸಬೇಕು. ಉದ್ಯೋಗ ಹುಟ್ಟುಹಾಕಬೇಕು. ಯುವ ಉದ್ಯಮಿಗಳಿಗೆ ಬೆಂಬಲ ನೀಡಬೇಕು. ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟದಲ್ಲಿ ವ್ಯಾಪಾರೋದ್ಯಮ ಬೆಳವಣಿಗೆಗೆ ಸಂಪರ್ಕ ಬೆಸೆಯುವ ಕೆಲಸವಾಗಬೇಕು. ಪ್ರತ್ಯೇಕ ಹಾಗೂ ಪರೋಕ್ಷವಾಗಿ ನಮ್ಮ ಭೂಮಿಯನ್ನು ಅನ್ಯರು ಖರೀದಿಸುವ ಮೂಲಕ ಹಿಂದೂಗಳ ಅಸ್ತಿತ್ವ ಹಾಳು ಮಾಡುವ ಸಂಚು ನಡೆಸುತ್ತಿದ್ದಾರೆ. ಈ ಬಗ್ಗೆ ಜಾಗರೂಕರಾಗುವಂತೆ ಕರೆ ನೀಡಿದರು. ಅಮೆಜಾನ್ ಸಂಸ್ಥೆಯ ಕರ್ನಾಟಕ ರಾಜ್ಯದ ಮುಖ್ಯಸ್ಥ ರಾಜೇಶ್ ಕೆ. ಪ್ರಸಾದ್ ಮಾತನಾಡಿ, ಇ-ಕಾಮರ್ಸ್ ಉದ್ಯಮಗಳು ಮಾರುಕಟ್ಟೆ ವ್ಯಾಪ್ತಿಯನ್ನು ಬದಲಾಯಿಸಿದೆ. ಆನ್‌ಲೈನ್ ಮೂಲಕ ಹೊಸ ಉದ್ಯಮಗಳು ವಿಸ್ತಾರಗೊಂಡಿವೆ. ವ್ಯಾಪಾರದ ಸಾಂಪ್ರದಾಯಿಕ ಪದ್ಧತಿ ಕೂಡ ಬದಲಾಗಿದ್ದು, ಉದ್ಯಮದ ಯಶಸ್ವಿಗೆ ವಿಶ್ವಾಸ ಮುಖ್ಯವಾಗಿದೆ. ಗ್ರಾಹಕರಿಗೆ ಬೇಕಾದನ್ನು ನೀಡುವುದು ಉದ್ಯಮಿಯ ಗುರಿಯಾಗಿರಬೇಕು. ಪ್ರಾಥಮಿಕ ಹಂತದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ ಇಲ್ಲದೆ ಗುಣಮಟ್ಟವನ್ನು ಕಾಯ್ದುಕೊಂಡರೆ ಮುಂದಿನ ದಿನಗಳಲ್ಲಿ ಉತ್ತಮ ಉದ್ಯಮಿಯಾಗುವುದಲ್ಲದೆ ವಿಶ್ವಾಸಾರ್ಹ ಸಂಸ್ಥೆ ನಿರ್ಮಾಣಗೊಳ್ಳುತ್ತದೆ. ಉತ್ಪನ್ನಗಳು ಶೇ. ೧೦೦ ರಷ್ಟು ಗುಣಮಟ್ಟ ಕಾಯ್ದುಕೊಳ್ಳಬೇಕು. ಜಗತ್ತಿನ ಅತ್ಯುತ್ತಮ ಸಂಸ್ಥೆಗಳ ಯಶಸ್ವಿಗೆ ಇದು ಕಾರಣವಾಗಿದೆ. ಉತ್ಪನ್ನವೇ ಉದ್ಯಮದ ಮೊದಲ ರಾಯಭಾರಿಯಾಗಿದ್ದು, ಪ್ರಸ್ತುತ ಕಾಲಘಟ್ಟದಲ್ಲಿ ಆನ್ ಲೈನ್ ವಲಯ ವಿಶ್ವಾಸಾರ್ಹತೆ ಗಳಿಸಿಕೊಂಡಿದೆ. ಇದನ್ನು ಸಣ್ಣ ಉದ್ಯಮಿಗಳು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಉತ್ತಮ ಹಾಗೂ ಲಾಭದಾಯಕ ಉದ್ಯಮ ಸ್ಥಾಪಿಸಲು ಸಾಧ್ಯ. ಆನ್‌ಲೈನ್ ಮಾರುಕಟ್ಟೆಯಿಂದ ನೇರ ಮಾರುಕಟ್ಟೆಗೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
ಮೈಸೂರಿನ ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೋರೇಟರಿಯ ಹಿರಿಯ ವಿಜ್ಞಾನಿ ಡಾ.ನವೀನ್ ಮಾತನಾಡಿ, ಸೇನೆಗೆ ಗುಣಮಟ್ಟ ಹಾಗೂ ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಆರೋಗ್ಯ ವರ್ಧಕ ಆಹಾರ ನೀಡಲು ನಮ್ಮ ಸಂಸ್ಥೆ ಸ್ಥಾಪನೆಯಾಯಿತು. ಕಾರ್ಗಿಲ್ ಸೇರಿದಂತೆ ಇನ್ನಿತರ ಯುದ್ಧಗಳಲ್ಲಿ ಸೈನಿಕರಿಗೆ ಆಹಾರ ಪೂರೈಸುವಲ್ಲಿ ನಮ್ಮ ಸಂಸ್ಥೆ ಕೆಲಸ ಮಾಡಿದೆ. ‘ನಾಸಾ’ ಸಂಸ್ಥೆ ಕೂಡ ಬಾಹ್ಯಾಕಾಶದಲ್ಲಿ ಬಳಸುವ ಆಹಾರವನ್ನು ಆವಿಷ್ಕರಿಸಲು ಸೂಚಿಸಿದೆ. ೫೦ ರಿಂದ ೬೦ ಆಹಾರಗಳು ಸಿದ್ಧವಾಗಿವೆ ಎಂದ ಅವರು, ಹೆಸರಾಂತ ಆಹಾರ ಸಂಸ್ಥೆಗಳಿಗೆ ನಾವು ನೆರವು ನೀಡಿದ್ದು, ಅವೆಲ್ಲ ಪ್ರಸಿದ್ಧಗೊಂಡಿವೆ. ಆಹಾರ ಕೇಂದ್ರೀಕೃತ ಉದ್ಯಮದ ಸ್ವರೂಪ ಇಂದು ಬದಲಾಗಿದೆ. ‘ರೆಡಿಮೇಡ್’ ಆಹಾರದ ಬಳಕೆ ಹೆಚ್ಚಾಗಿದೆ. ಅದರಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಅದರ ಪ್ಯಾಕಿಂಗ್ ಕೂಡ ಆಹಾರ ಹಾಳಾಗದಿರಲು ಕಾರಣವಾಗುತ್ತದೆ. ಕೃಷಿಕರಿಗೆ ಪೂರಕವಾದ ತಂತ್ರಜ್ಞಾನಗಳು ಇವೆ. ಇದನ್ನು ಬಳಸಿಕೊಂಡು ಉತ್ತಮ ಉದ್ಯಮಿಯಾಗುವಂತೆ ಸಲಹೆ ನೀಡಿದರು. ಡಿಟಿಡಿಸಿ ಎಕ್ಸ್ಪ್ರೆಸ್ ಸಂಸ್ಥೆಯ ರಾಷ್ಟಿçÃಯ ಮುಖ್ಯಸ್ಥ ಅಶ್ವಿನ್ ಕುಮಾರ್ ಗುಪ್ತ ಮಾತನಾಡಿ, ಲಾಜಿಸ್ಟಿಕ್ ಸೇವೆ ಇಂದಿನ ಕಾಲಘಟ್ಟದಲ್ಲಿ ಪ್ರಯೋಜನಕಾರಿಯಾಗಿದೆ. ಒಂದು ವಸ್ತುವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕಳುಹಿಸುವುದು ಇದೀಗ ಸುಲಭಗೊಂಡಿದೆ. ‘ಸ್ಟಾರ್ಟ್ ಅಪ್'ಗಳು ದೇಶದ ಆರ್ಥಿಕತೆಯನ್ನು ಹೆಚ್ಚಿಸುತ್ತಿವೆ. ಯುವ ಉದ್ಯಮಿಗಳು ಛಲ ಕಳೆದುಕೊಳ್ಳದೆ ಉತ್ಸಾಹದಿಂದ ಕೆಲಸ ಮಾಡಿದರೆ ಗುರಿ ಮುಟ್ಟಲು ಸಾಧ್ಯ. ಯಶಸ್ವಿ ಉದ್ಯಮಿಗಳು ಕೂಡ ಮಾರ್ಗದರ್ಶನ ನೀಡಬೇಕು. ಹಿಂದೂ ಎಕನಾಮಿಕ್ ಫೋರಂ ಉದ್ಯಮಿಗಳಿಗೆ ಸಹಕಾರಿಯಾಗಲಿದೆ. ಈ ರೀತಿಯ ಕಾರ್ಯಕ್ರಮದಿಂದ ಆಲೋಚನೆಗಳು ಮೂಡುತ್ತವೆ ಎಂದು ತಿಳಿಸಿದರು. ಸಂಘಟನೆಯ ಅಧ್ಯಕ್ಷ ಡಾ.ಶ್ಯಾಂ ಅಪ್ಪಣ್ಣ, ಉದ್ಯಮಿ ಹಾಗೂ ವಿಶ್ವ ಹಿಂದೂ ಪರಿಷತ್ ಅಂರ‍್ರಾಷ್ಟಿçÃಯ ಸಮಿತಿ ಸದಸ್ಯೆ ಛಾಯ ನಂಜಪ್ಪ ಹಾಜರಿದ್ದರು.
ಪದಾಧಿಕಾರಿಗಳ ಆಯ್ಕೆ
ಸಂಘಟನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಡಾ. ಶ್ಯಾಂ ಅಪ್ಪಣ್ಣ, ಉಪಾಧ್ಯಕ್ಷರಾಗಿ ಸುರೇಶ್ ಮುತ್ತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಮಚ್ಚಮಾಡ ಅನೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಮಲ್ಲೇಂಗಡ ಸೋಮಣ್ಣ, ಖಜಾಂಚಿಯಾಗಿ ಕುಪ್ಪಂಡ ರಾಜಪ್ಪ ಆಯ್ಕೆಗೊಂಡರು.
ಉಳಿದಂತೆ ಆಡಳಿತ ಮಂಡಳಿ ಸದಸ್ಯರಾಗಿ ಕಿಶೋರ್ ಬಿದ್ದಪ್ಪ, ಸುಧೀರ್, ಲಕ್ಷ್ಮಿರೆಡ್ಡಿ, ನಾಗೇಶ್, ಚಂಗಪ್ಪ, ರಂಗಸ್ವಾಮಿ ನೇಮಕಗೊಂಡರು.