ಮಡಿಕೇರಿ, ಆ. ೨೩: ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-೨೦೧೫ ಹಾಗೂ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಾದರಿ ನಿಯಮ -೨೦೧೬ರನ್ವಯ ಕೊಡಗು ಜಿಲ್ಲೆಯಿಂದ ಮಕ್ಕಳ ಕಲ್ಯಾಣ ಸಮಿತಿಗೆ ಅಧ್ಯಕ್ಷರು-೧ ಮತ್ತು ಸದಸ್ಯರು-೪ ಹುದ್ದೆಗಳಿಗೆ ಹಾಗೂ ಬಾಲನ್ಯಾಯ ಮಂಡಳಿಗೆ ಸದಸ್ಯರು-೨ ಹುದ್ದೆಗಳಿಗೆ ಮೂರು ವರ್ಷಗಳ ಕಾಲಾವಧಿಗೆ ಅರ್ಜಿ ಆಹ್ವಾನಿಸಲಾಗಿದೆ.
ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲನ್ಯಾಯ ಮಂಡಳಿಗೆ ಪ್ರತ್ಯೇಕ ಅರ್ಜಿ ನಮೂನೆಗಳನ್ನು (ಅರ್ಜಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿದೆ) ಸೂಚನೆಗಳು, ಅಫೀಡವಿಟ್‌ಗಳು ಮಕ್ಕಳ ರಕ್ಷಣಾ ನಿರ್ದೇಶನಾಲಯದ ವೆಬ್‌ಸೈಟ್ ತಿತಿತಿ.iಛಿಠಿs.ಞಚಿಡಿಟಿಚಿಣಚಿಞಚಿ.gov.iಟಿ ರಲ್ಲಿ ಲಭ್ಯವಿದ್ದು, ಅರ್ಜಿದಾರರು ಮಕ್ಕಳ ಕಲ್ಯಾಣ ಸಮಿತಿ ಅಥವಾ ಬಾಲನ್ಯಾಯ ಮಂಡಳಿ ಎರಡರಲ್ಲಿ ಯಾವುದಾದರೂ ಒಂದಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ ಸದರಿ ಅರ್ಜಿಯನ್ನು ಮಾತ್ರ ದ್ವಿಪ್ರತಿಯಲ್ಲಿ ಸಲ್ಲಿಸುವದು.
ಒಂದು ವೇಳೆ ಅರ್ಜಿದಾರರು ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲನ್ಯಾಯ ಮಂಡಳಿ ಎರಡಕ್ಕೂ ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ ಭರ್ತಿ ಮಾಡಿದ ಪ್ರತ್ಯೇಕ ಅರ್ಜಿಗಳನ್ನು ದ್ವಿಪ್ರತಿಯಲ್ಲಿ ರಿಜಿಸ್ಟರ್ ಅಂಚೆಯ ಮೂಲಕ (ಆರ್‌ಪಿಎಡಿ) ಅಥವಾ ಮುದ್ದಾಂ ಸೆಪ್ಟೆಂಬರ್ ೧ ಸಂಜೆ ೫ ಗಂಟೆಯೊಳಗೆ ಸದಸ್ಯ ಕಾರ್ಯದರ್ಶಿಗಳು, ರಾಜ್ಯ ಮಟ್ಟದ ಆಯ್ಕೆ ಸಮಿತಿ ಹಾಗೂ ನಿರ್ದೇಶಕರು, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮೂರನೇ ಮಹಡಿ, ವಿಶ್ವೇಶ್ವರಯ್ಯ ಮಿನಿ ಗೋಪುರ, ಡಾ.ಅಂಬೇಡ್ಕರ್ ವೀಧಿ, ಬೆಂಗಳೂರು-೫೬೦೦೦೧ ಇವರಿಗೆ ಸಲ್ಲಿಸುವುದು.
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸುವ ಅಗತ್ಯತೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರ ಕಾರ್ಯಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಲ್ಯಾಣ ಮಂಟಪದ ಮುಂಭಾಗ, ಓಂಕಾರೇಶ್ವರ ದೇವಸ್ಥಾನ ರಸ್ತೆ ಮಡಿಕೇರಿ, ದೂರವಾಣಿ ಸಂಖ್ಯೆ ೦೮೨೭೨-೨೨೮೮೦೦ ನ್ನು ಸಂಪರ್ಕಿಸಬಹುದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರು ತಿಳಿಸಿದ್ದಾರೆ.