ಗೋಣಿಕೊಪ್ಪಲು, ಆ. ೨೧: ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ, ಹೆಚ್ಚುವರಿ ದೋಣಿಗಳನ್ನು ಬಳಸಿ ರಾಫ್ಟಿಂಗ್ ಮಾಡಿಸುತ್ತಿದ್ದ ವೇಳೆ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ದಿಢೀರ್ ದಾಳಿ ನಡೆಸಿ ಮೂರು ಹೆಚ್ಚುವರಿ ದೋಣಿಗಳನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ದಾಳಿ ನಡೆಸಿದ ಪೊನ್ನಂಪೇಟೆ ತಹಶೀಲ್ದಾರ್ ಪ್ರಶಾಂತ್ ಅವರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಸಂದರ್ಭ ಇಲಾಖೆಯ ನಿಯಮ ಮೀರಿ ಹೆಚ್ಚುವರಿ ಮೂರು ದೋಣಿಗಳು ಕಾರ್ಯನಿರ್ವಹಣೆ ಮಾಡುತ್ತಿರುವುದು ಬೆಳಕಿಗೆ ಬಂದಿವೆ.
ಶ್ರೀಮAಗಲ ಹೋಬಳಿಯ ವೆಸ್ಟ್ನೆಮ್ಮಲೆ ಗ್ರಾಮದ ಬರಪೊಳೆಯಲ್ಲಿ ಹೆಚ್ಚುವರಿ ದೋಣಿ ಬಳಸಿ ರಾಫ್ಟಿಂಗ್ ನಡೆಸುತ್ತಿದ್ದು ೩ ಹೆಚ್ಚುವರಿ ದೋಣಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇಲಾಖೆಯ ನಿಯಮಗಳನ್ನು ಮೀರಿ ಈ ರೀತಿಯ ರಾಫ್ಟಿಂಗ್ ದಂಧೆ ಹಲವೆಡೆ ನಡೆಯುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ಪ್ರಶಾಂತ್ ಮಾಹಿತಿ ಒದಗಿಸಿದ್ದಾರೆ.
- ಹೆಚ್.ಕೆ. ಜಗದೀಶ್