ನಾಪೋಕ್ಲು, ಆ. ೨೧: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವತಿಯಿಂದ ಡಿಜಿಟಲ್ ಗ್ರಂಥಾಲಯ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಚದುರಂಗ ಆಟ ಸ್ಪರ್ಧೆಯ ಹಿರಿಯರ ಭಾಗದಲ್ಲಿ ನೇತಾಜಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ರವಿಕುಮಾರ್ ಹಾಗೂ ಪೂಜ ಪ್ರಥಮ ಸ್ಥಾನಗಳಿಸಿ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾದರು.

ದ್ವಿತೀಯ ಸ್ಥಾನವನ್ನು ಪೇರೂರು ಗ್ರಾಮದ ಪಿ.ಎ. ಮೊಣ್ಣಪ್ಪ ಗಳಿಸಿದರು. ವಿಜೇತರಿಗೆ ಪ್ರಥಮ ಬಹುಮಾನ ರೂ. ೧೦೦೦ ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ ರೂ. ೫೦೦ ಮತ್ತು ಟ್ರೋಫಿ ವಿತರಿಸಲಾಯಿತು.

ಕಿರಿಯ ವಿಭಾಗದಲ್ಲಿ ಯಶ್ವಿನ್ಸಿ ಯು. ಮತ್ತು ದಿಲನ್ ತಿಮ್ಮಯ್ಯ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದರೆ, ಸಬ್ ಜೂನಿಯರ್ ಭಾಗದಲ್ಲಿ ಸ್ಪಂದನ ವೈ.ಎಸ್. ಪ್ರಥಮ ಮತ್ತು ದರ್ಶನ್ ದ್ವಿತೀಯ ಸ್ಥಾನ ಪಡೆದರು. ಪ್ರತಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಿಗಳು ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಿಡಿಒ ಪೂಣಚ್ಚ ತಿಳಿಸಿದರು.