ಮಡಿಕೇರಿ, ಆ. ೨೧: ಇತ್ತೀಚೆಗೆ ಅಮ್ಮತ್ತಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿನಿಯರಾದ ೭ನೇ ತರಗತಿಯ ಎಂ.ಜಿ. ಕಾವೇರಮ್ಮ ಹಾಗೂ ದೀಪ್ತಿ ತಂಗಮ್ಮ ಬಿ.ಬಿ. ಶಟಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಬಾಲಕರ ವಿಭಾಗದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ವಿದ್ಯಾರ್ಥಿಗಳಾದ ೭ನೇ ತರಗತಿಯ ಮೋಹಿಸ್ಸಿನ್ನೂರ್, ವೃಷಾಂಕ್ ದೇವಯ್ಯ ಹಾಗೂ ೬ನೇ ತರಗತಿಯ ಮುತ್ತಣ್ಣ ಕೆ.ಜಿ. ಇವರುಗಳು ಸ್ಪರ್ಧಿಸಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಪಾಲಿಬೆಟ್ಟ ಲೂರ್ಡ್ಸ್ ಶಾಲೆಯಲ್ಲಿ ನಡೆದ ಪ್ರೌಢಶಾಲಾ ವಿಭಾಗದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಬಾಲಕರ ವಿಭಾಗದ ಥ್ರೋಬಾಲ್ ಹಾಗೂ ಖೋ-ಖೋ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಆಗಿರುತ್ತಾರೆ
ದೈಹಿಕ ಶಿಕ್ಷಕಿಯರಾದ ಸರಿತಾ ಬಿ.ಯು. ಹಾಗೂ ಮೋನಿಕಾ ಕಾವೇರಿ ಎಂ.ಪಿ. ಅವರು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿರುತ್ತಾರೆ.