ಕೂಡಿಗೆ, ಆ. ೨೧: ಪ್ರವಾಸದಲ್ಲಿರುವ ಲೋಕಸಭಾ ಸ್ಧಾಯಿ ಸಮಿತಿಯ ತಂಡ ಕೂಡಿಗೆ ಯೂನಿಯನ್ ಬ್ಯಾಂಕ್ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದಲ್ಲಿ ತರಬೇತಿ ಪಡೆದು ಸ್ವ ಉದ್ಯೋಗ ಪ್ರಾರಂಭಿಸಿರುವ ಮಹಿಳಾ ಸ್ವಸಹಾಯ ಗುಂಪು ಆರಂಭಿಸಿರುವ ಅಂಗಡಿ ಮಳಿಗೆಗಳನ್ನು ಕೇಂದ್ರದ ಸಂಸದರ ಸಮಿತಿಯ ಅದ್ಯಕ್ಷ ಪ್ರತಾಪ್ ರಾವ್ ಜಾಧವ್ ಉದ್ಘಾಟಿಸಿದರು.

ನಂತರ ಕೇಂದ್ರ ಪುರಸ್ಕೃತ ಯೋಜನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಯೋಜನೆಗಳ ಅನುಷ್ಠಾನ ಮತ್ತು ಇತರೆ ವಿಷಯಗಳ ಪಗ್ರತಿ ಪರಿಶೀಲನೆ ನಡೆಸಿದರು.

ಸಮಿತಿಯ ಅಧ್ಯಕ್ಷ ಪ್ರತಾಪ್ ರಾವ್ ಜಾಧವ್ ಆಧ್ಯಕ್ಷತೆಯ ತಂಡದಲ್ಲಿ ೧೨ ಮಂದಿ ಸಂಸದರು ಸೇರಿದಂತೆ ಅಧಿಕಾರಿ ವರ್ಗದವರು ಪಾಲ್ಗೊಂಡಿದರು.

ನAತರ ತಂಡವು ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೬ನೇ ಹೊಸಕೋಟೆ ಗ್ರಾಮಕ್ಕೆ ಭೇಟಿ ನೀಡಿ ಅ ಗ್ರಾಮದಲ್ಲಿ ಪ್ರಧಾನ ಮಂತ್ರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಕೈಗೊಳ್ಳಲಾದ ಮನೆಗಳ ನಿರ್ಮಾಣದ ಕಾಮಗಾರಿಗಳ ವೀಕ್ಷಣೆ ಮತ್ತು ಸಂಪೂರ್ಣವಾದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು.

ಸಂಸದರು ಯೂನಿಯನ್ ಬ್ಯಾಂಕ್ ತರಬೇತಿ ಕೇಂದ್ರದ ಅವರಣದಲ್ಲಿ ಅವರವರ ಹೆಸರಿನಲ್ಲಿ ಒಂದೂAದು ಗಿಡಗಳನ್ನು ನೆಟ್ಟರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಅನುಷ್ಠಾನಗೊಂಡಿರುವ ಬಗ್ಗೆ ಜಿಲ್ಲಾಧಿಕಾರಿ ಡಾ, ಸತೀಶ್, ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ ಸಮಿತಿಯ ಸದಸ್ಯರಿಗೆ ಪಂಚಾಯಿತಿ ಮಟ್ಟದಲ್ಲಿ ಅನುದಾನ ಬಳಕೆಯಾದ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಲೋಕಸಭಾ ಸಚಿವಾಲಯದ ಸಂಸದೀಯ ಸಮಿತಿಯ ಸದಸ್ಯ ರು ಲೋಕಸಭಾ ಸದಸ್ಯರಾದ ಉತ್ತರ ಪ್ರದೇಶದ ರಾಜ್ ಮೀರ್, ವಿಜಯಕುಮಾರ್, ರಾಜಸ್ಥಾನದ ನರೇಂದ್ರ, ಗುಜರಾತಿನ ವಿಜೆ ಸಿಂಗ್ ಬಾಯಿ, ಉತ್ತರಾಖಂಡದ ಮಾಲ ರಾಜಲಕ್ಷಿö್ಮ, ಉತ್ತರ ಪ್ರದೇಶದ ಶ್ಯಾಮ್ ಸಿಂಗ್ ಹಾಗೂ ರಾಜ್ಯ ಸಭಾ ಸದಸ್ಯ ಶಾಂತಾಬೇತ್ರಿ, ಹಾಗೂ ಲೋಕಸಭಾ ಸಭಾ ಕಾರ್ಯಾಲಯದ ನಿರ್ದೇಶಕ ಡಾ, ಯುಮುನಾ, ಅರಣುಕುಮಾರ್, ಉಪ ಕಾರ್ಯದರ್ಶಿ ನಿಶಾಂತ್ ಮೆಹ್ತಾ, ಸಮಿತಿಯ ಅಧಿಕಾರಿ ಅರ್ಜುನ್ ಚೌದರಿ ಹಾಗೂ ಅಧ್ಯಕ್ಷ ಅಪ್ತ ಕಾರ್ಯದರ್ಶಿ ರಾಹುಲ್ ಸೊಲಂಕಿ, ಜಿಲ್ಲಾಧಿಕಾರಿ ಡಾ, ಸತೀಶ್, ಸಿಇಒ ಭಂನ್ವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ್, ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎಸ್. ಮಂಜುನಾಥ ಅಭಿವೃದ್ಧಿ ಅಧಿಕಾರಿ ಅರುಣ್ ಬಾಸ್ಕರ್, ಕೂಡಿಗೆ ಯೂನಿಯನ್ ಬ್ಯಾಂಕ್ ತರಬೇತಿ ಕೇಂದ್ರದ ನಿರ್ದೇಶಕ ಕೆ. ಪ್ರಕಾಶ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.