ಮಡಿಕೇರಿ, ಆ. ೨೧: ಮಡಿಕೇರಿ ತಾಲೂಕು ಸವಿತಾ ಸಮಾಜದ ವಾರ್ಷಿಕ ಮಹಾಸಭೆ ಮಡಿಕೇರಿಯ ಬಾಲ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಮುಂದಿನ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಎಂ.ಟಿ. ಮಧು ಪುನರಾಯ್ಕೆಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಬಲ್ಯದ ಜಯಶಂಕರ. ಕಾರ್ಯದರ್ಶಿಯಾಗಿ ಬಲ್ಯದ ಚರಣ್, ಸಹ ಕಾರ್ಯದರ್ಶಿಯಾಗಿ ನಿಶಾಂತ್, ಖಜಾಂಚಿಯಾಗಿ ಅವಿನಾಶ್ ಬೊಟ್ಲಪ್ಪ.
ಮಹಿಳಾ ಅಧ್ಯಕ್ಷರಾಗಿ ವಸಂತಿ ಆರ್.ಬಿ., ಮಹಿಳಾ ಉಪಾಧ್ಯಕ್ಷರಾಗಿ ಪ್ರಿಯಾ ಹರೀಶ್, ಮಹಿಳಾ ಕಾರ್ಯದರ್ಶಿಯಾಗಿ ನಂದಿತಾ ಚರಣ್, ಮಹಿಳಾ ಸಹ ಕಾರ್ಯದರ್ಶಿಯಾಗಿ ಅಶ್ವಿನಿ ಮಧು, ಗೌರವ ಅಧ್ಯಕ್ಷರಾಗಿ ಸುಂದರಮ್ಮ ಹಾಗೂ ಈರಪ್ಪ. ನಗರ ಅಧ್ಯಕ್ಷರಾಗಿ ಸಂದೇಶ್, ಕ್ರೀಡಾ ಸಮಿತಿ ಅಧ್ಯಕ್ಷರಾಗಿ ಮಧು ಚೆಟ್ಟಿಮಾನಿ ಆಯ್ಕೆಯಾದರು.
ವಾರ್ಷಿಕ ಮಹಾಸಭೆಯ ಮೊದಲಿಗೆ ಹಡಪದ ಅಪ್ಪಣ್ಣ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ನಂತರ ಸಭೆಯಲ್ಲಿ ವಾರ್ಷಿಕ ವರದಿಯನ್ನು ಅವಿನಾಶ್ ಬೊಟ್ಲಪ್ಪ ಮಂಡಿಸಿದರು. ವಾರ್ಷಿಕ ಲೆಕ್ಕಪತ್ರವನ್ನು ಸುಗು ಮಂಡಿಸಿದರು.
ಕೊಡಗು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಕೆ.ಎಸ್. ದೊರೇಸ್ ಭಾಗವಹಿಸಿದ್ದರು.