ಚೆಟ್ಟಳ್ಳಿ, ಆ. ೨೧: ಮೈಸೂರಿನ ಚಾಮುಂಡಿ ವಿಹಾರದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಷ್ಟçಮಟ್ಟದ ೫೦ ಕೆ.ಜಿ. ಮೇಲ್ಪಟ್ಟ ಕರಾಟೆಯ ಬ್ಯಾಕ್‌ಬೆಲ್ಟ್ನಲ್ಲಿ ಚೆಟ್ಟಳ್ಳಿಯ ಬಲ್ಲಾರಂಡ ಹರ್ಶಿಕಾ ತಿಮ್ಮಯ್ಯ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಈರಳೆ ಗ್ರಾಮ ಚೆಟ್ಟಳ್ಳಿಯವರಾದ ಬಲ್ಲಾರಂಡ ತಿಮ್ಮಯ್ಯ ಹಾಗೂ ಶೈನಿ ತಿಮ್ಮಯ್ಯ ದಂಪತಿಗಳ ಪುತ್ರಿ ಮೈಸೂರಿನ ಶ್ರೀ ವಿವೇಕಾನಂದ ಎಜುಕೇಶನಲ್ ಇಂನ್ಟೂಸ್ನಲ್ಲ್ ಪಬ್ಲಿಕ್ ಸ್ಕೂಲ್‌ನಲ್ಲಿ ೧೦ನೇ ತರಗತಿಯಲ್ಲಿ ಓದುತ್ತಿರುವ ಹರ್ಶಿಕಾ ತಿಮ್ಮಯ್ಯ ಖ್ಯಾತ ಕರಾಟೆ ತರಬೇತುದಾರ ಮೈಸೂರಿನ ರೆನ್ಸಿ ಚಿದಾನಂದ ಅವರಲ್ಲಿ ಕಳೆದ ೫ ವರ್ಷಗಳಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.