ಶನಿವಾರಸಂತೆ, ಆ. ೨೧: ಶನಿವಾರಸಂತೆ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ಚದುರಂಗ ಆಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫರ್ಜಾನ ಶಾಹಿದ್ ನೆರವೇರಿಸಿದರು. ತೀರ್ಪುಗಾರರಾಗಿ ಶಿಕ್ಷಕರಾದ ಅಶ್ವತ್ ಹಾಗೂ ನಾಗೇಶ್ ಕಾರ್ಯನಿರ್ವಹಿಸಿದ್ದರು.
ಚದುರಂಗ ಸ್ಪರ್ಧೆಯಲ್ಲಿ ಸಬ್ ಜೂನಿಯರ್ಸ್ ವಿದ್ಯಾರ್ಧಿಗಳು ಒಟ್ಟು ೧೨ ಹಾಗೂ ಜೂನಿಯರ್ಸ್ Ä ವಿದ್ಯಾರ್ಥಿಗಳು ಒಟ್ಟು ೧೫ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಬ್ ಜೂನಿಯರ್ಸ್ ವಿದ್ಯಾರ್ಥಿಗಳಲ್ಲಿ ಪ್ರಗತಿ ಕೆ.ಕೆ. ಪ್ರಥಮ ಸ್ಥಾನ ಹಾಗೂ ರೋಹಿತ್ ಹೆಚ್.ಡಿ. ದ್ವಿತೀಯ ಸ್ಥಾನ ಪಡೆದಿರುತ್ತಾರೆ ಮತ್ತು ಜೂನಿಯರ್ಸ್ ವಿದ್ಯಾರ್ಥಿಗಳಲ್ಲಿ ಮೌಲ್ಯ ಕೆ.ಕೆ. ಪ್ರಥಮ ಸ್ಥಾನ ಹಾಗೂ ಸುಜನ್ ಎಸ್.ಜೆ. ದ್ವಿತೀಯ ಸ್ಥಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.