ಮಡಿಕೇರಿ, ಆ. ೧೯: ನೆಹರೂ ಯುವ ಕೇಂದ್ರ, ಕೊಡಗು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಹಾಗೂ ತಾಲೂಕು ಯುವ ಒಕ್ಕೂಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ, ಹಾಕತ್ತೂರು ಗ್ರಾ.ಪಂ., ವಾಹನ ಮಾಲೀಕರ - ಚಾಲಕರ ಸಂಘ ಹಾಕತ್ತೂರು, ಕುವೆಂಪು ಮಾದರಿ ಪ್ರಾಥಮಿಕ ಶಾಲೆ, ತೊಂಭತ್ತುಮನೆ ಸರ್ಕಾರಿ ಪ್ರಾಥಮಿಕ ಶಾಲೆ, ಕಾವೇರಿ ಯುವಕ ಸಂಘ, ಕಗ್ಗೋಡ್ಲು, ಸ್ತಿçÃಶಕ್ತಿ, ಸ್ವ-ಸಹಾಯ ಸಂಘ ಹಾಗೂ ತೊಂಭತ್ತುಮನೆ ತ್ರಿನೇತ್ರ ಯುವಕ ಸಂಘದ ಆಶ್ರಯದಲ್ಲಿ ಸಂಘದ ಬೆಳ್ಳಿ ಮಹೋತ್ಸವ ಹಾಗೂ ಸ್ವಾತಂತ್ರö್ಯ ದಿನಾಚರಣೆಯನ್ನು ವಿಜೃಂಭಣೆಯಿAದ ಆಚರಿಸಲಾಯಿತು.

ಗ್ರಾಮ ಪಂಚಾಯಿತಿ ಆವರಣದಲ್ಲಿ ಅಧ್ಯಕ್ಷೆ ಸವಿತಾ ಧ್ವಜಾರೋಹಣ ನೆರವೇರಿಸಿದ ನಂತರ ನಡೆದ ವೀರ ಸೇನಾನಿಗಳಿಗೆ ಗೌರವ ಸಲ್ಲಿಕೆಯ ಸಮರ್ಪಣಾ ಜಾಥಾಕ್ಕೆ ನಿವೃತ್ತ ಕ್ಯಾಪ್ಟನ್ ತುಂತಜಿರ ದಯಾನಂದ ಚಾಲನೆ ನೀಡಿದರು. ವಿದ್ಯಾರ್ಥಿಗಳು, ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿದ್ದ ಜಾಥಾವು ಹಾಕತ್ತೂರು ಮುಖ್ಯ ರಸ್ತೆಯ ಮೂಲಕ ವೀರರಿಗೆ ಜಯಘೋಷ ದೊಂದಿಗೆ ಸಾಗಿ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಸಮರ್ಪಣಗೊಂಡಿತು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ವೀರಾಜಪೇಟೆ ಶಾಸಕರು, ಸರಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೊಂಬಾರನ ಜಿ. ಬೋಪಯ್ಯ ಅವರು ಉದ್ಘಾಟಿಸಿ ಮಾತನಾಡುತ್ತಾ, ಯುವಕ ಸಂಘದ ಬೆಳ್ಳಿ ಮಹೋತ್ಸವದ ಸುಸಂದರ್ಭದಲ್ಲಿ ಅರ್ಥಪೂರ್ಣವಾಗಿ ಸ್ವಾತಂತ್ರö್ಯದ ಅಮೃತ ಮಹೋತ್ಸವ ಆಚರಿಸು ತ್ತಿರುವುದು ಜಿಲ್ಲೆಗೆ ಮಾದರಿ ಯಾಗಿದೆ. ಸಂಘವು ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಸಮಾಜಕ್ಕೆ ಮಾದರಿಯಾಗಿ ರಾಷ್ಟçದಲ್ಲಿ ಹೆಸರುಗಳಿಸುವಂತಾಗಲಿ ಎಂದರು.

ಮುಖ್ಯ ಭಾಷಣಕಾರರಾಗಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಹಾಗೂ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡುತ್ತಾ, ಯುವ ಶಕ್ತಿಯೇ ದೇಶದ ಶಕ್ತಿ. ಇಂದಿನ ಮಕ್ಕಳು ವೈಜ್ಞಾನಿಕ ಯುಗದಲ್ಲಿ ದೇಶ ರಕ್ಷಣೆಗೆ, ಸೇವೆಗೆ ತಮ್ಮನ್ನು ಅರ್ಪಿಸುವಂತಾಗಬೇಕು. ದೇಶದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ನಾವೆಲ್ಲರೂ ಭಾರತಾಂಭೆಯ ಮಕ್ಕಳು. ದೇಶದ ಅಭಿವೃದ್ಧಿಗೆ ಒಗ್ಗಟ್ಟಾಗಿ, ಒಂದೇ ತಂದೆ - ತಾಯಿಯ ಮಕ್ಕಳಂತೆ, ಒಗ್ಗಟ್ಟಾಗಿ ಶ್ರಮಿಸುವಲ್ಲಿ ಕೈಜೋಡಿಸು ವಂತಾಗಬೇಕು. ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳನ್ನು ನೆನಪಿಸಿಕೊಳ್ಳುವುದರ ಮೂಲಕ ‘ಆಜಾದಿಕಾ ಅಮೃತ ಮಹೋತ್ಸವ’ ವನ್ನು ಸಂಭ್ರಮಿಸೋಣವೆAದು ಕಿವಿಮಾತು ಹೇಳಿದರು. ಮೇ|| ಬಿದ್ದಂಡ ನಂದಾ ನಂಜಪ್ಪ, ದೇವಣಿರ ತಿಲಕ್ ಪೊನ್ನಪ್ಪ, ದೇವಜನ ನಾಣಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಾಕತ್ತೂರು ಗ್ರಾ.ಪಂ. ಅಧ್ಯಕ್ಷೆ ಸವಿತಾ, ಮೇಕೇರಿ ಗ್ರಾ.ಪಂ. ಅಧ್ಯಕ್ಷ ದಿನೇಶ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚಂಗಪ್ಪ, ಮರಗೋಡು ವಿ.ಎಸ್.ಎಸ್.ಎನ್. ಬ್ಯಾಂಕಿನ ಅಧ್ಯಕ್ಷ ಕಾಂಗೀರ ಸತೀಶ್, ಹಾಕತ್ತೂರು ವಿ.ಎಸ್.ಎಸ್.ಎನ್. ಬ್ಯಾಂಕಿನ ಅಧ್ಯಕ್ಷ ಮಂಞೆÃರ ಸಾಬು ತಿಮ್ಮಯ್ಯ, ನಿರ್ದೇಶಕ ಉಳುವಾರನ ಪಳಂಗಪ್ಪ, ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಹೇಮಾವತಿ, ಮುಖ್ಯ ಶಿಕ್ಷಕಿ ನೀತಾ ಕುಮಾರಿ, ನಿವೃತ್ತ ಮುಖ್ಯ ಶಿಕ್ಷಕರಾದ ರಾಮಚಂದ್ರ, ಕುವೆಂಪು ಶಾಲಾ ಮುಖ್ಯ ಶಿಕ್ಷಕ ಸ್ವಾಮಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಚಂದ್ರಿಕಾ, ಇಸ್ರೋ ವಿಜ್ಞಾನಿ ಪಾಣತ್ತಲೆ ಉತ್ತಯ್ಯ, ಸ್ಥಳೀಯರಾದ ಬೊಪ್ಪಂಡ ವೀಣಾ, ಶ್ರೀಪತಿ ಹೆಬ್ಬಾರ್ ಭಾಗವಹಿಸಿದ್ದರು. ತ್ರಿನೇತ್ರ ಯುವಕ ಸಂಘದ ಅಧ್ಯಕ್ಷ ನಂದಾ ನಂಜಪ್ಪ, ದೇವಣಿರ ತಿಲಕ್ ಪೊನ್ನಪ್ಪ, ದೇವಜನ ನಾಣಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಾಕತ್ತೂರು ಗ್ರಾ.ಪಂ. ಅಧ್ಯಕ್ಷೆ ಸವಿತಾ, ಮೇಕೇರಿ ಗ್ರಾ.ಪಂ. ಅಧ್ಯಕ್ಷ ದಿನೇಶ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚಂಗಪ್ಪ, ಮರಗೋಡು ವಿ.ಎಸ್.ಎಸ್.ಎನ್. ಬ್ಯಾಂಕಿನ ಅಧ್ಯಕ್ಷ ಕಾಂಗೀರ ಸತೀಶ್, ಹಾಕತ್ತೂರು ವಿ.ಎಸ್.ಎಸ್.ಎನ್. ಬ್ಯಾಂಕಿನ ಅಧ್ಯಕ್ಷ ಮಂಞÉÃರ ಸಾಬು ತಿಮ್ಮಯ್ಯ, ನಿರ್ದೇಶಕ ಉಳುವಾರನ ಪಳಂಗಪ್ಪ, ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಹೇಮಾವತಿ, ಮುಖ್ಯ ಶಿಕ್ಷಕಿ ನೀತಾ ಕುಮಾರಿ, ನಿವೃತ್ತ ಮುಖ್ಯ ಶಿಕ್ಷಕರಾದ ರಾಮಚಂದ್ರ, ಕುವೆಂಪು ಶಾಲಾ ಮುಖ್ಯ ಶಿಕ್ಷಕ ಸ್ವಾಮಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಚಂದ್ರಿಕಾ, ಇಸ್ರೋ ವಿಜ್ಞಾನಿ ಪಾಣತ್ತಲೆ ಉತ್ತಯ್ಯ, ಸ್ಥಳೀಯರಾದ ಬೊಪ್ಪಂಡ ವೀಣಾ, ಶ್ರೀಪತಿ ಹೆಬ್ಬಾರ್ ಭಾಗವಹಿಸಿದ್ದರು. ತ್ರಿನೇತ್ರ ಯುವಕ ಸಂಘದ ಅಧ್ಯಕ್ಷ ಸುಕುಮಾರ್ ಪಿ.ಪಿ. ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸದ್ಭಾವನಾ ದಿನದ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಹಾಕತ್ತೂರು ಗ್ರಾ.ಪಂ. ವ್ಯಾಪ್ತಿಯ ೪೩ ನಿವೃತ್ತ ಸೇನಾನಿಗರಿಗೆ, ಆಶಾ ಕಾರ್ಯಕರ್ತರಿಗೆ ಹಾಗೂ ಸ್ಥಳೀಯ ಪ್ರೌಢಶಾಲೆ ೧೦ನೇ ತರಗತಿಯಲ್ಲಿ ಶೇ.೧೦೦ರಷ್ಟು ಫಲಿತಾಂಶವನ್ನು ತಂದುಕೊಡುವಲ್ಲಿ ಪ್ರಯತ್ನಿಸಿದ ಎಲ್ಲಾ ಶಿಕ್ಷಕರಿಗೂ, ಸಿಬ್ಬಂದಿ ವರ್ಗದವರಿಗೂ ನೆನಪಿನ ಕಾಣಿಕೆ ನೀಡಿ, ಗೌರವ ಅರ್ಪಿಸ ಲಾಯಿತು ಹಾಗೂ ನಿವೃತ್ತ ಶಿಕ್ಷಕರಾದ ಸುಲೋಚನ, ರಾಮಚಂದ್ರ, ಗ್ರಾಮೀಣ ಬ್ಯಾಂಕಿನ ನಿವೃತ್ತ ಉದ್ಯೋಗಿ ಉತ್ತಯ್ಯ ಅವರುಗಳನ್ನು ಸನ್ಮಾನಿಸ ಲಾಯಿತು. ಸಂಘದ ಕಾರ್ಯದರ್ಶಿ ಅಬೂಬಕ್ಕರ್ ಸ್ವಾಗತಿಸಿ, ನಿರೂಪಿಸಿದರು. ಸ್ಥಾಪಕ ಅಧ್ಯಕ್ಷ ದಿವಾಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸಂಜೆ ಕುಶಾಲನಗರ ಮಂಜು ಭಾರ್ಗವಿ ತಂಡದಿAದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ವಿದೂಷಕಿ ಕಾವ್ಯಶ್ರೀ ಅವರಿಂದ ಭರತನಾಟ್ಯ, ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಬಗೆಯ ಮನೋರಂಜನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

-ಸಾಬ ಸುಬ್ರಮಣಿ