ಗೋಣಿಕೊಪ್ಪಲು, ಆ. ೨೦: ಕರ್ನಾಟಕ ಜೀವ ವೈವಿಧ್ಯ ಮಂಡಳಿ ಯಿಂದ ರಾಜ್ಯದಲ್ಲಿ ಪರಿಣಾಮಕಾರಿ ಕಾರ್ಯಕ್ರಮ ಅನುಷ್ಠಾನಗೊಳ್ಳ ಬೇಕಾಗಿದೆ. ಈ ಭೂಮಿ ಮೇಲೆ ಪ್ರತಿ ಜೀವಿಗೂ ಬದುಕುವ ಹಕ್ಕಿದೆ. ಅವುಗಳನ್ನು ನಾಶ ಮಾಡಿ ನಾವು ಬದುಕುವದು ಸಾಧ್ಯವಿಲ್ಲ. ವಿನಾಶದ ಹಂಚಿನಲ್ಲಿರುವ ಕಾಡು ಹಣ್ಣುಗಳು, ಔಷಧಿ ಸಸ್ಯಗಳು, ವಿವಿಧ ಪ್ರಭೇದದ ಮರಗಿಡಗಳ ಸಂರಕ್ಷಣೆ ಆಗಬೇಕಾಗಿದೆ. ಜೀವ ವೈವಿಧ್ಯ ಸಂರಕ್ಷಣೆಗೆ ಗ್ರಾ.ಪಂ. ಮಟ್ಟದಲ್ಲಿಯೂ ಸಮಿತಿ ರಚನೆ ಅಗತ್ಯವಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ನೂತನ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ನುಡಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಶಿವಮೊಗ್ಗ, ಅರಣ್ಯ ಮಹಾ ವಿದ್ಯಾಲಯ ಪೊನ್ನಂಪೇಟೆ ಹಾಗೂ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಪೊನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ಇಂದು ಜರುಗಿದ ಕೊಡಗಿನ ಕಾಡುಹಣ್ಣುಗಳ ಸಂರಕ್ಷಣೆ ಕುರಿತಾದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ಕರ್ನಾಟಕ ಜೀವ ವೈವಿಧ್ಯ ಮಂಡಳಿಯಲ್ಲಿ ನಾಲ್ಕು ಮಂದಿ ಐಎಎಸ್, ಐಎಫ್‌ಎಸ್ ಆಗಿರುವ ಸದಸ್ಯರು, ನಾಲ್ವರು ಜೀವ ವೈವಿಧ್ಯದ ವಿಷಯ ತಜ್ಞರು ಇದ್ದು, ತಾನು ಅಧಿಕಾರ ವಹಿಸಿಕೊಂಡ ಮೂರು ವಾರದಲ್ಲಿ ಹಲವು ಕಡೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ಹೇಳಿದರು.ಕೊಡಗು ಜಿಲ್ಲೆಯಲ್ಲಿ ಅರಣ್ಯ ಕಾಲೇಜು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದೆ ಕೊಡಗು ಜಿಲ್ಲೆಯಲ್ಲಿ ವಿನಾಶದ ಅಂಚಿನಲ್ಲಿರುವ ಕಾಡು ಹಣ್ಣುಗಳೂ ಒಳಗೊಂಡAತೆ, ಸಸ್ಯ ಪ್ರಭೇದಗಳು, ಕೊಡಗಿನ ಜೇನು ಇತ್ಯಾದಿ ಸಂರಕ್ಷಿಸುವ ಕೆಲಸ ಚುರುಕುಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಗಿಡಮೂಲಿಕೆ ಸಂರಕ್ಷಣೆ ಮತ್ತು ದಾಖಲೀಕರಣ ಆಗಬೇಕು. ಕೊಡಗು ಜಿಲ್ಲೆಯಲ್ಲಿರುವ ಪಾರಂಪರಿಕ ವೈದ್ಯರನ್ನೂ ಒಗ್ಗೂಡಿಸಿ ಸಸ್ಯವನ ನಿರ್ಮಾಣ ಹಾಗೂ ಪುನಶ್ಚೇತನಕ್ಕೆ ಅರಣ್ಯ ಕಾಲೇಜು ವಿದ್ಯಾರ್ಥಿಗಳು, ಗ್ರಾ.ಪಂ.ಮಟ್ಟದ ಜೀವವೈವಿಧ್ಯ ಸಮಿತಿ,ಜನತಾ ಜೀವ ವೈವಿಧ್ಯ ದಾಖಲಾತಿ ಆಂದೋಲನ ಕಾರ್ಯಕ್ರಮವನ್ನು ಮುಂದೆ ಅಳವಡಿಸಿಕೊಳ್ಳಲಾಗುವದು ಎಂದರು.

ಅರಣ್ಯ ಮಹಾವಿದ್ಯಾಲಯದ ಡೀನ್ ಮತ್ತು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಸದಸ್ಯ ಡಾ. ಸಿ.ಜಿ. ಕುಶಾಲಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅರಣ್ಯ ಕಾಲೇಜಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳಿದ್ದು ತಮ್ಮ ತಮ್ಮ ಗ್ರಾಮಗಳಲ್ಲಿ ಜೀವ ವೈವಿಧ್ಯ ಸಮಿತಿಗಳ ಮೂಲಕ ಸ್ಥಳೀಯ ಸಸ್ಯಗಳು, ಕಾಡುಹಣ್ಣುಗಳು, ಮರಗಿಡಗಳನ್ನು ಬೆಳೆಸುವ ಮೂಲಕ ದಾಖಲೀಕರಣ, ನಿರ್ವಹಣೆ ಹಾಗೂ ಸಂರಕ್ಷಣೆಗೆ ಮುಂದಾಗಬೇಕು. ಕೊಡಗಿನ ಅರಣ್ಯ ಅಭಿವೃದ್ಧಿ, ನೆರಳಿನ ಮರಗಳು, ವಿಭಿನ್ನ ಸಸ್ಯ ಪ್ರಭೇದಗಳ ಅಧ್ಯಯನದೊಂದಿಗೆ ಕಾಡುಹಣ್ಣುಗಳನ್ನು ದೇವರಕಾಡು ಇತ್ಯಾದಿ ಸ್ಥಳಗಳಲ್ಲಿ ಬೆಳಸಿ ಉಳಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ತಜ್ಞರ ತಂಡ ಗ್ರಾಮಗಳಿಗೆ ಭೇಟಿ ನೀಡಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲು ಸಿದ್ಧವಿದೆ ಎಂದರು. ಕೊಡಗಿನ ಸಸ್ಯಪ್ರಭೇದಗಳ ಸಂರಕ್ಷಣೆಯೊAದಿಗೆ ಅದನ್ನು ಬೆಳೆಸಿದ ರೈತನಿಗೂ ಸಂಪನ್ಮೂಲ ಸಿಗುವ ನಿಟ್ಟಿನಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ಹೇಳಿದರು.

ಅರಣ್ಯ ಸಂಪನ್ಮೂಲ ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಎಂ. ದೇವಗಿರಿ ಅವರು ಮಾತನಾಡಿ, ಜೀವ ವೈವಿಧ್ಯ ಸಮಿತಿ ಮೂಲಕ ಗ್ರಾಮಗಳಲ್ಲಿ ರೈತರಿಗೆ ಲಾಭದಾಯಿಕ ಕಾರ್ಯಕ್ರಮ ಹಾಕಿಕೊಳ್ಳಬಹುದು. ಬಹುರಾಷ್ಟಿçÃಯ ಕಂಪೆನಿಗಳು ಪೇಟೆಂಟ್ ಇತ್ಯಾದಿ ಮೂಲಕ ರಾಷ್ಟçದ ಜೀವ ವೈವಿಧ್ಯ ಸಂಪತ್ತಿನಿAದ ಲಾಭ ಮಾಡಿಕೊಳ್ಳುತ್ತಿದೆ. ಇದರ ಲಾಭ ಸ್ಥಳೀಯರಿಗೆ ಸಿಗುವಂತೆ ಮಾಡುವದು ನಮ್ಮ ಉದ್ಧೇಶ. ಲ್ಯಾಂಪ್ ಸೊಸೈಟಿಗಳು ಜೇನು ಸಂಗ್ರಹ, ಸೀಗೆಕಾಯಿ ಇತ್ಯಾದಿ ಸಂಗ್ರಹ ಮಾಡುವಂತೆ ಆಯಾಯ ಗ್ರಾಮಗಳಲ್ಲಿ ಪರಿಸರ ಸಮತೋಲನ ಕಾಪಾಡುವದ ರೊಂದಿಗೆ ಸ್ಥಾನಿಕ ಸಂಪನ್ಮೂಲ ಕ್ರೋಢೀಕರಣ ಸಾಧ್ಯ ಎಂದರು.

ಅರಣ್ಯ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ವಿನಾಶದತ್ತ ಸಾಗಿರುವ ಕೊಡಗಿನ ಕಿತ್ತಳೆ ಸಂರಕ್ಷಣೆ, ಜೇನು ಸಂರಕ್ಷಣೆ,ಕಾಡು ಹಣ್ಣುಗಳನ್ನು ಅಧಿಕವಾಗಿ ಬೆಳೆಯುವ ಬಗ್ಗೆ ಚರ್ಚೆ ನಡೆಯಿತು. ಇದೇ ಸಂದರ್ಭ ಭಾಗಮಂಡಲದಲ್ಲಿರುವ ಔಷಧಿ ಸಸ್ಯ ಕ್ಷೇತ್ರ ಪುನಶ್ಚೇತನದ ಬಗ್ಗೆಯೂ ಮಂಡಳಿ ಅಧ್ಯಕ್ಷ ರವಿ ಕಾಳಪ್ಪ ಅವರ ಗಮನ ಸೆಳೆಯಲಾಯಿತು.

ಸಂವಾದದಲ್ಲಿ ಕೃಷಿ ಅರಣ್ಯ ವಿಭಾಗದ ಮುಖ್ಯಸ್ಥ ಡಾ.ರಾಮಕೃಷ್ಣ ಹೆಗಡೆ, ಕೃಷಿ, ಜೀವ ವೈವಿಧ್ಯ ಶಾಸ್ತçದ ಪ್ರಾಧ್ಯಾಪಕ ಡಾ. ಜಡೇಗೌಡ ಮಾತನಾಡಿದರು. ಸ್ವಾಗತ ಡೀನ್ ಡಾ. ಸಿ.ಜಿ. ಕುಶಾಲಪ್ಪ, ಪ್ರಾರ್ಥನೆ ವಿದ್ಯಾ ಜಗದೀಶ್ ಹಾಗೂ ಸಹಾಯಕ ಪ್ರಾಧ್ಯಾಪಕ ಬಿ.ಎನ್. ಸತೀಶ್ ವಂದಿಸಿದರು.

ದೇವರಕಾಡಿನಲ್ಲಿ ೧೦೦೦ ಸಸಿ ನೆಡುವ ಕಾರ್ಯಕ್ರಮ

ಸಂವಾದ ಕಾರ್ಯಕ್ರಮದ ಬಳಿಕ ಅರಣ್ಯ ಕಾಲೇಜು ವಿದ್ಯಾರ್ಥಿಗಳನ್ನು ಅರುವತ್ತೊಕ್ಕಲು ಗ್ರಾಮದ ಕಾಡ್ಲಯ್ಯಪ್ಪ ದೇವರ ಕಾಡಿಗೆ ಕರೆದೊಯ್ಯಲಾಯಿತು. ಕಾಡು ಹಣ್ಣು, ವಿಭಿನ್ನ ಪ್ರಭೇದದ ಮರಗಿಡಗಳೂ ಒಳಗೊಂಡAತೆ ೪೦೦ ಸಸಿಗಳನ್ನು ಸದರಿ ದೇವರ ಕಾಡಿನಲ್ಲಿ ನೆಡುವುದಾಗಿ ಡಾ. ಸಿ.ಜಿ. ಕುಶಾಲಪ್ಪ ಮಾಹಿತಿ ನೀಡಿದರು. ಇದೇ ಸಂದರ್ಭ ಅರಣ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಮಹೇಶ್ವರಪ್ಪ ಅವರು ಚೆನ್ನಂಗೊಲ್ಲಿ ಮಾನಿಲ್ ಅಯ್ಯಪ್ಪ ದೇವರಕಾಡು, ಮಾಯಮುಡಿ ಕಮಟೆ ದೇವಸ್ಥಾನ ಆವರಣದಲ್ಲಿ ಒಟ್ಟು ೧೦೦೦ ಸಸಿಗಳನ್ನು ನೆಡುವ ಉದ್ಧೇಶವಿದೆ ಎಂದರು. ಕಾಡ್ಲಯ್ಯಪ್ಪ ದೇವಸ್ಥಾನದ ಅಧ್ಯಕ್ಷ ಕಾಡ್ಯಮಾಡ ಪಿ.ದೇವಯ್ಯ (ಅಶೋಕ್) ಅವರು ಸಸಿ ನೆಡುವ ವಿಧಾನ, ಗುಂಡಿ ತೆಗೆಯುವ ವಿಧಾನ ವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು. ದೇವಸ್ಥಾನ ನಿರ್ದೇಶಕರಾದ ಕೆ.ಕೆ. ನಂಜಪ್ಪ ಉಪಸ್ಥಿತರಿದ್ದರು. ಕಾಡ್ಲಯ್ಯಪ್ಪ ದೇವರಕಾಡಿನಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಸದಸ್ಯರಾದ ಡಾ. ಸಿ.ಜಿ. ಕುಶಾಲಪ್ಪ, ಡಾ. ಜಿ.ಎಂ. ದೇವಗಿರಿ, ಡಾ. ರಾಮಕೃಷ್ಣ ಹೆಗ್ಗಡೆ ಮುಂತಾದವರು ಪಾಲ್ಗೊಂಡಿದ್ದರು.