ವೀರಾಜಪೇಟೆ, ಆ. ೧೯: ಹಣದ ಆಸೆಗಾಗಿ ಅಳಿವಿನ ಅಂಚಿನಲ್ಲಿರುವ ವನ್ಯ ಜೀವಿ ನಕ್ಷತ್ರ ಆಮೆಯನ್ನು ಗಿರಾಕಿಗಳಿಗೆ ಅಧಿಕ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ವೀರಾಜಪೇಟೆ ಸಿ.ಐ.ಡಿ ಪೊಲೀಸ್ ಅರಣ್ಯ

(ಮೊದಲ ಪುಟದಿಂದ) ಸಂಚಾರಿ ದಳದ ಸಿಬ್ಬಂದಿಗಳು ದಾಳಿ ನಡೆಸಿ ಸರ್ಕಾರದ ಪರವಾನಗಿ ಇಲ್ಲದೆ ಮಾರಾಟ ಮಾಡಲು ಇಟ್ಟಿದ್ದ ನಕ್ಷತ್ರ ಆಮೆ ಹಾಗೂ ಮಾರಾಟಕ್ಕೆ ಯತ್ನಿಸಿದ ಇಬ್ಬರು ವ್ಯಕ್ತಿಗಳನ್ನು ವೀರಾಜಪೇಟೆ ಚಿಕ್ಕಪೇಟೆ ಬಳಿ ವಶಕ್ಕೆ ಪಡೆದುಕೊಂಡು ವನ್ಯ ಜೀವಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಮಹಾ ನಿರೀಕ್ಷಕ ಕೆ.ವಿ. ಶರತ್ ಚಂದ್ರ ಐ.ಪಿ.ಎಸ್ ಅವರ ನಿರ್ದೇಶನದ ಮೇರೆಗೆ, ಸಿ.ಐ.ಡಿ ಪೊಲೀಸ್ ಅರಣ್ಯ ಘಟಕ ಮಡಿಕೇರಿಯ ಪೊಲೀಸ್ ಅಧೀಕ್ಷಕ ಕೆ.ಬಿ. ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪ್ರಭಾರ ಆರಕ್ಷಕ ಉಪನಿರೀಕ್ಷಕಿ ಸವಿ ಸಿ.ಯು., ಸಿಬ್ಬಂದಿಗಳಾದ ಟಿ.ಪಿ. ಮಂಜುನಾಥ್, ಕೆ.ಎಸ್. ದೇವಯ್ಯ, ಸಿ.ಬಿ.ಬೀನಾ, ಕುಶಾ, ಎಸ್.ಎಂ. ಯೋಗೇಶ್, ಪಿ.ಯು. ಮುನೀರ್, ಆರ್. ನಂದ ಕುಮಾರ್ ಭಾಗವಹಿಸಿದ್ದರು.