ಸೋಮವಾರಪೇಟೆ, ಆ. ೧೯: ಪ್ರಸಕ್ತ ವರ್ಷ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ಕಾಫಿ, ಕರಿಮೆಣಸು, ಏಲಕ್ಕಿ, ಭತ್ತ, ಬಾಳೆ ಸೇರಿದಂತೆ ಇನ್ನಿತರ ಬೆಳೆಗಳಿಗೆ ತೀವ್ರ ಹಾನಿಯಾಗಿದ್ದು, ತಕ್ಷಣ ಪರಿಹಾರ ವಿತರಿಸಲು ಜಿಲ್ಲಾಡಳಿತ ಮುಂದಾಗಬೇಕೆAದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್ ಅವರು, ಅತಿವೃಷ್ಟಿಯಿಂದಾಗಿ ಭಾರೀ ಪ್ರಮಾಣದಲ್ಲಿ ಬೆಳೆಹಾನಿ ಸಂಭವಿಸಿದೆ. ಗಾಳಿಯಿಂದಾಗಿ ತೋಟದಲ್ಲಿ ಮರ ಹಾಗೂ ಕೊಂಬೆಗಳು ಮುರಿದು ಬಿದ್ದು ನಷ್ಟವಾಗಿದೆ. ಅತಿ ಶೀತದಿಂದ ಫಸಲು ಉದುರಿದ್ದು ಕೊಳೆರೋಗವೂ ಆವರಿಸಿದೆ. ಅಡಿಕೆ, ತೆಂಗು ಬೆಳೆಯೂ ಹಾಳಾಗಿದೆ ಎಂದರು.

ತಕ್ಷಣ ಕಾಫಿ ಮಂಡಳಿ ಹಾಗೂ ಕಂದಾಯ ಇಲಾಖೆಯವರು ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಜಿಲ್ಲಾಡಳಿತದಿಂದ ಎಲ್ಲಾ ಭಾಗದ ರೈತರಿಗೆ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಅತಿವೃಷ್ಟಿ ಸಂಬAಧಿತ ಪರಿಹಾರ ಕಾರ್ಯಗಳಿಗೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ೩೫ ಕೊಟಿಗೂ ಅಧಿಕ ಅನುದಾನ ಇರುವುದಾಗಿ ಸ್ವತಃ ಜಿಲ್ಲಾಧಿಕಾರಿಗಳೇ ಹೇಳಿದ್ದಾರೆ. ಹೀಗಿದ್ದರೂ ನಷ್ಟಪರಿಹಾರ ಮಾತ್ರ ಬಿಡುಗಡೆಯಾಗುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಿ ರೈತರಿಗೆ ಪರಿಹಾರ ಬಿಡುಗಡೆ ಮಾಡಿಸಬೇಕೆಂದು ಆಗ್ರಹಿಸಿದರು.

ಅತಿವೃಷ್ಟಿಯೊಂದಿಗೆ ವನ್ಯಪ್ರಾಣಿಗಳ ಹಾವಳಿಯೂ ಮಿತಿಮೀರಿದೆ. ಕಾಡಾನೆ ಹಾವಳಿ ಯಿಂದಲೂ ಪಸಲು ನಷ್ಟವಾಗುತ್ತಿದೆ. ಮಾನವ-ವನ್ಯಪ್ರಾಣಿ ಹಾನಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಮುಂದಾಗಬೇಕೆAದರು.

ಜಿಲ್ಲೆಯ ರೈತರ ೧೦ ಹೆಚ್.ಪಿ.ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರೂ ಈವರೆಗೆ ಈಡೇರಿಲ್ಲ. ಇದೀಗ ಹಲವು ಷರತ್ತುಗಳನ್ನು ವಿಧಿಸಿ ರೈತರನ್ನು ಶೋಷಿಸಲಾಗುತ್ತಿದೆ. ಇದನ್ನು ಬಿಟ್ಟು ಬೇಷರತ್ತಾಗಿ ಎಲ್ಲಾ ರೈತರಿಗೂ ಉಚಿತ ವಿದ್ಯುತ್ ನೀಡಲು ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ರೈತರಿಂದ ೫೩ ಮತ್ತು ೫೭ ಅಡಿಯಲ್ಲಿ ಅರ್ಜಿ ಸ್ವೀಕರಿಸುತ್ತಿದ್ದರೂ ಸಮರ್ಪಕವಾಗಿ ವಿಲೇವಾರಿ ಯಾಗುತ್ತಿಲ್ಲ. ಸಾವಿರಾರು ಅರ್ಜಿಗಳು ತಾಲೂಕು ಕಚೇರಿಯಲ್ಲಿ ಕೊಳೆಯುತ್ತಿವೆ. ಇವುಗಳನ್ನು ತ್ವರಿತ ವಿಲೇವಾರಿ ಮಾಡಬೇಕೆಂದು ಸಂಘದ ಉಪಾಧ್ಯಕ್ಷ ಜಿ.ಎಂ. ಹೂವಯ್ಯ ಆಗ್ರಹಿಸಿದರು.

ಕಳೆದ ವರ್ಷಗಳಿಂದ ಆನೆ ಹಾವಳಿಯಿಂದ ನಷ್ಟಕ್ಕೊಳಗಾದ ಬೆಳೆಗಳಿಗೆ ಪರಿಹಾರ ನೀಡಿಲ್ಲ. ರೈಲ್ವೇ ಬ್ಯಾರಿಕೇಡ್‌ನ್ನು ಕಂಪೆನಿಗಳ ತೋಟಕ್ಕೆ ಅಳವಡಿಸಲಾಗಿದ್ದು, ಬಡ ರೈತರಿಗೆ ಇದರಿಂದ ಪ್ರಯೋಜನವಾಗುತ್ತಿಲ್ಲ. ಸಿಸಿಎಫ್ ಗಮನಕ್ಕೆ ತಂದರೂ ಸ್ಪಂದಿಸಿಲ್ಲ. ಮುಂದಿನ ದಿನಗಳಲ್ಲಿ ಅರಣ್ಯ ಭವನಕ್ಕೆ ಸಂಘದಿAದ ಮುತ್ತಿಗೆ ಹಾಕಲಾಗುವುದು ಎಂದು ನಿರ್ದೇಶಕ ಮಚ್ಚಂಡ ಅಶೋಕ್ ಹೇಳಿದರು.

ಜಿಲ್ಲೆಯಲ್ಲಿ ಅವೈಜ್ಞಾನಿಕ ಕ್ರಮಗಳ ಮೂಲಕ ವಿದ್ಯುತ್ ಕಂಬಗಳನ್ನು ಅಳವಡಿಸಿರುವುದರಿಂದ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಟ್ರಾನ್ಸ್ಫಾರ್ಮರ್‌ಗಳ ನಿರ್ವಹಣೆಯೂ ಇಲ್ಲವಾಗಿದೆ. ಇದರಿಂದಾಗಿ ಆಗಾಗ್ಗೆ ವಿದ್ಯುತ್ ವ್ಯತ್ಯಯ ಸಂಭವಿಸುತ್ತಿದ್ದು, ವೈಜ್ಞಾನಿಕ ಕ್ರಮಗಳ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ನಿರ್ದೇಶಕ ಎಸ್.ಜಿ. ಪುಟ್ಟಸ್ವಾಮಿ ಆಗ್ರಹಿಸಿದರು.

ಗೋಷ್ಠಿಯಲ್ಲಿ ಸಂಘದ ನಿರ್ದೇಶಕ ಯು.ಕೆ. ರಾಜಶೇಖರ್, ಗರಗಂದೂರು ಲಕ್ಷö್ಮಣ್, ಯಡೂರು ಕುಶಾಲಪ್ಪ, ದಿನೇಶ್ ಅವರುಗಳು ಉಪಸ್ಥಿತರಿದ್ದರು.