ಕುಶಾಲನಗರ, ಆ.೧೯ : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಗುಡ್ಡೆಹೊಸೂರು ಬಳಿ ಅಡ್ಡಿಪಡಿಸಿದ ಪ್ರಕರಣ ಸಂಬAಧ ೧೫ ಜನರ ಮೇಲೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಗುರುವಾರ ೯ ಮಂದಿಯನ್ನು ಸ್ಥಳದಲ್ಲಿಯೇ ಬಂಧಿಸಲಾಗಿದ್ದು, ತಡರಾತ್ರಿಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.

ಕೆ.ಜಿ. ಮನು, ಭಾಸ್ಕರ ನಾಯಕ್, ಎಂ.ಡಿ. ಕೃಷ್ಣಪ್ಪ, ಮಣಿಕಂಠ, ಪ್ರವೀಣ, ಮಂಜುನಾಥ್, ನಿತ್ಯಾನಂದ, ಗೌತಮ್, ಲಕ್ಷಿö್ಮ ನಾರಾಯಣ್ ಅವರುಗಳನ್ನು ಜಾಮೀನು ಮೇಲೆ ಬಿಡುಗq ೆಗೊಳಿಸಲಾಗಿದೆ. ಉಳಿದಂತೆ ಸೋಮವಾರಪೇಟೆಯ ಸಂಪತ್, ಮಂಜುಳ, ನವನೀತ್, ಸುಮನ್, ಚಂದ್ರಶೇಖರ್, ಸಂತೋಷ್ ಅವರುಗಳನ್ನು ಸೇರಿದಂತೆ ಒಟ್ಟು ೧೫ ಜನರ ಮೇಲೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.

ರಾತ್ರಿ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದರು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಮೈಸೂರು, ದಕ್ಷಿಣ ವಲಯ ಪೊಲೀಸ್ ನಿರೀಕ್ಷಕರಾದ ಡಾ. ಪ್ರವೀಣ್ ಮಧುಕರ್ ಪವಾರ್ ಅವರು, ಕುಶಾಲನಗರಕ್ಕೆ ಭೇಟಿ ನೀಡಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ ವಿಷಯ ತಿಳಿಯುತ್ತಿದಂತೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ ಅಪ್ಪಚ್ಚು ರಂಜನ್, ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ಪಕ್ಷದ ಪ್ರಮುಖರು ಕುಶಾಲನಗರ ಠಾಣೆಗೆ ಭೇಟಿ ನೀಡಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ರಂಜನ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚೋದನಕಾರಿ ಹೇಳಿಕೆ ನೀಡಿ ಇಂತಹ ಘಟನೆಗಳು ಸಂಭವಿಸಲು ಕಾರಣವಾಗುತ್ತಿವೆ. ಟಿಪ್ಪು ಜಯಂತಿ ಮೂಲಕ ಜಿಲ್ಲೆಯಲ್ಲಿ ಅಶಾಂತಿ ಮೂಡಿಸಿರುವುದು, ಮುಸ್ಲಿಂ ಏರಿಯ ಇಂತಹ ಅನವಶ್ಯಕ ಗೊಂದಲ ಮೂಡಿಸುವ ಹೇಳಿಕೆಗಳನ್ನು ನೀಡದಂತೆ ಸಲಹೆ ನೀಡಿದರು. ಪ್ರತಿಭಟನೆ ಸಂದರ್ಭ ಪೊಲೀಸರು ಅವರ ಕರ್ತವ್ಯ ನಿಭಾಯಿಸಿದ್ದಾರೆ. ಅಮಾಯಕರ ಮೇಲೆ ವಿನಾಕಾರಣ ಮೊಕದ್ದಮೆ ಹೂಡುವುದು ಸರಿಯಲ.್ಲ ಪ್ರತಿಭಟನೆಯ ಮಾಹಿತಿ ದೊರೆತ ಬೆನ್ನಲ್ಲೇ ಮುನ್ನೆಚ್ಚರಿಕೆಯಾಗಿ ಪೊಲೀಸರು ವಶಕ್ಕೆ ತೆಗೆದುಕೊಳ್ಳಬೇಕಿತ್ತು ಎಂದರು.

ಮಡಿಕೇರಿಯಲ್ಲೂ ಮೊಕದ್ದಮೆ

ನಿನ್ನೆ ಮಡಿಕೇರಿಯಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬAಧಿಸಿದAತೆ ಹಿಂದೂ ಸಂಘಟನೆಗಳ ೯ ಮಂದಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದ್ದು, ೯ ಮಂದಿ ಬಿಜೆಪಿ, ಹಿಂದೂಪರ ಸಂಘಟನೆ ಕಾರ್ಯಕರ್ತರ ಮೇಲೆ ಮೊಕದ್ದಮೆ ದಾಖಲಾಗಿದೆ.

ಕಾಂಗ್ರೆಸ್‌ನ ಪ್ರಕಾಶ್ ಆಚಾರ್ಯ ನೀಡಿದ ದೂರಿನ ಆಧಾರದಲ್ಲಿ ಕವನ್ ಮೇದಪ್ಪ, ಉಮೇಶ್ ಸುಬ್ರಮಣಿ, ಸತ್ಯ ಕರ್ಕೆರ, ಮಹೇಶ್ ಜೈನಿ, ನವೀನ್ ಪೂಜಾರಿ, ಅರುಣ್ ಶೆಟ್ಟಿ, ಸಬಿತಾ, ಶ್ವೇತಾ, ಭರತ್, ಮತ್ತಿತರರ ಮೇಲೆ ಮೊಕದ್ದಮೆ ದಾಖಲಾಗಿದೆ.