ಲೋಕದಲ್ಲಿ ಅನ್ಯಾಯ, ಅನಾಚಾರ ಅತಿಯಾದಾಗ ಪರಮಾತ್ಮನು ಅವತಾರ ಎತ್ತಿ ದುಷ್ಟಶಿಕ್ಷಕನಾಗಿ ಸಂಹಾರ ಮಾಡಿ ಲೋಕ ಕಲ್ಯಾಣಕ್ಕೆ ಕಾರಣನಾಗುವನು.

ದಶಾವತಾರಗಳಲ್ಲಿ ಶ್ರೀ ಕೃಷ್ಣ ಪರಿಪೂರ್ಣ ಅವತಾರವೆನಿಸಿ ಶ್ರಾವಣ ಬಹುಳ ಅಷ್ಟಮಿಯಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸುವರು. ದೈತ್ಯರ ಸಂಹಾರಕ್ಕಾಗಿ ಹತ್ತು ಅವತಾರವೆತ್ತಿದ ಕೃಷ್ಣನ ಜನ್ಮಾಷ್ಟಮಿಯನ್ನು ಗೋಕುಲಾಷ್ಟಮಿ ಎಂದೂ ಕರೆಯುವರು.

ಶ್ರೀ ಕೃಷ್ಣನು ಕಂಸನನ್ನು ಸಂಹರಿಸಿ ಮಥುರಾ ಸಾಮ್ರಾಜ್ಯವನ್ನು ಆತನ ಬಂಧನದಿAದ ಮುಕ್ತಿಗೊಳಿಸಿದನು. ದ್ರೌಪದಿಯ ವಸ್ತಾçಪಹರಣದಲ್ಲಿ ಆಕೆಗೆ ವಸ್ತçವನ್ನು ನೀಡುವನು. ಕೃಷ್ಣನು ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನಿಗೆ ಸಾರಥಿಯಾಗಿ ದುಷ್ಟರನ್ನು ಸಂಹರಿಸಲು ಕಾರಣನಾಗುವನು.

ಶ್ರೀ ಕೃಷ್ಣನು ರಾಮಾಯಣದಲ್ಲಿ ರಾಮನಾಗಿ ಅವತಾರ ತಾಳುವನು. ಶ್ರೀ ಕೃಷ್ಣನ ಜನ್ಮದಿನದಂದು ಭಾರತದಲ್ಲಿ ಅತೀ ಸಂಭ್ರಮ ಸಂತಸದಿAದ ಕೃಷ್ಣ ಜನ್ಮಾಷ್ಟಮಿ ಆಚರಿಸುವರು. ಮಥುರಾ, ದ್ವಾರಕ, ಉಡುಪಿಯಲ್ಲಿ ಕೃಷ್ಣಾಷ್ಟಮಿಯನ್ನು ಸಂಭ್ರಮದಿAದ ಆಚರಿಸುವರು.

ಭಕ್ತರ ಪಾಲಿನ ಆರಾಧ್ಯ ದೈವ ಶ್ರೀ ಕೃಷ್ಣ. ಭಕ್ತರ ಸಕಲ ಕಷ್ಟಗಳನ್ನು ನಿವಾರಿಸಿ ಆಶೀರ್ವದಿಸುವ ಶ್ರೀ ಕೃಷ್ಣ, ಮಹಾವಿಷ್ಣುವಾಗಿ, ಶ್ರೀ ರಾಮನಾಗಿ ಲೋಕೋದ್ಧಾರ ಮಾಡಿರುವನು.

ಬಾಲ್ಯದಲ್ಲಿ ತುಂಟ ಕೃಷ್ಣನಾಗಿ, ಬೆಣ್ಣೆ ಕಳ್ಳನಾಗಿ, ಗೋಪಿಕಾ ಸ್ತಿçÃಯರ ವಸ್ತç ಅಪಹರಿಸುವನು. ಪೂತನಿಯನ್ನು ಸಂಹರಿಸಿ, ಕಾಳಿಂಗ ಮರ್ಧನ ಮಾಡಿ ಗೋವರ್ಧನ ಗಿರಿಯನ್ನು ಧಾರಣೆ ಮಾಡಿ ಧರ್ಮ ರಕ್ಷಣೆ ಮಾಡಿ ದುಷ್ಟ ಸಂಹಾರ ಮಾಡುವನು.

ಕೃಷ್ಣ ಜನ್ಮಾಷ್ಟಮಿಯ ಆಚರಣೆ ಇಹ-ಪರ ಸಾಮಾಜಿಕ ಐಕ್ಯ, ಸಾಮರಸ್ಯ ತರುವುದೆಂಬ ನಂಬಿಕೆ. ಈ ಜನ್ಮಾಷ್ಟಮಿಯನ್ನು ಸಂತಸದಿAದ ಭಕ್ತಿಯಿಂದ ಎಲ್ಲರೂ ಆಚರಿಸೋಣ.

- ಚೊಟ್ಟೆಯಂಡಮಾಡ ಲಲಿತಾ ಕಾರ್ಯಪ್ಪ, ಟಿ. ಶೆಟ್ಟಿಗೇರಿ.