ಪಾಲಿಬೆಟ್ಟ, ಆ. ೧೮: ರಾಜ್ಯಮಟ್ಟದ ಉತ್ತಮ ಸಿಆರ್‌ಪಿ ಪ್ರಶಸ್ತಿ ಪಡೆದ ಸುಶಾ ಅವರನ್ನು ಅಮ್ಮತ್ತಿ ಸಮೀಪದ ಒಂಟಿಯAಗಡಿ ಶಾಲಾ ಸಭಾಂಗಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಅಮ್ಮತ್ತಿ ಒಂಟಿಯAಗಡಿ ಕ್ಲಸ್ಟರ್‌ಗೆ ಒಳಪಡುವ ಎಲ್ಲಾ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಸೇರಿ ರಾಜ್ಯ ಪ್ರಶಸ್ತಿ ವಿಜೇತೆ ಸುಶಾ ಹಾಗೂ ಮಗ್ಗುಲ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ನಿವೃತ್ತಿ ಹೊಂದಲಿರುವ ನಸೀಮಾ ಅಕ್ತರ್ ಅವರಿಗೆ ಸನ್ಮಾನಿಸಿ ಗೌರವಿಸಿದರು.

ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ವನಜಾಕ್ಷಿ ಮಾತನಾಡಿ, ಪ್ರತಿಯೊಬ್ಬರು ಮತ್ತಷ್ಟು ವಿಶೇಷ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹೆಚ್ಚು ಪ್ರಶಸ್ತಿಗಳು ವೀರಾಜಪೇಟೆ ತಾಲೂಕಿಗೆ ಸಿಗುವಂತಾಗಲಿ ಎಂದರು.

ಈ ಸಂದರ್ಭ ಶಿಕ್ಷಣ ಸಂಯೋಜಕ ಮಾರ್ಗರೇಟ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಗೀತಾಂಜಲಿ, ವಾಮನ, ಪುಷ್ಪ, ಅಜಿತ, ಕ್ಷೇತ್ರ ಸಂಯೋಜಕರಾದ ಶ್ರೀನಿವಾಸ್, ಪ್ರವೀಣ್ ಕುಮಾರ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಸುಬ್ರಮಣ್ಯ, ಶಾಲೆಯ ಶಿಕ್ಷಕಿಯರಾದ ನಿರ್ಮಲ, ಅಶ್ವಿನಿ, ರಧೀನ, ಪದ್ಮ ಸೇರಿದಂತೆ ಮತ್ತಿತರರು ಹಾಜರಿದ್ದರು.