‘ಬಿಜೆಪಿ ಸೇರುವುದು ಸೇರಿದಂತೆ ಎಲ್ಲಾ ಆಯ್ಕೆಗಳು ಮುಕ್ತ': ಆರ್‌ಸಿಪಿ ಸಿಂಗ್

ಪಾಟ್ನಾ, ಆ. ೧೮: ಬಿಹಾರದಲ್ಲಿ ರಾಜಕೀಯ ಬಿರುಗಾಳಿಯ ನಡುವೆ ಜೆಡಿಯು ಮಾಜಿ ರಾಷ್ಟಿçÃಯ ಅಧ್ಯಕ್ಷ ಆರ್‌ಸಿಪಿ ಸಿಂಗ್ ಅವರು ಬಿಜೆಪಿ ಸೇರುವುದು ಸೇರಿದಂತೆ ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಬಿಜೆಪಿ ಜತೆ ಮೈತ್ರಿ ಮುರಿದುಕೊಂಡು ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ "ಮಹಾಘಟಬಂಧನ್"ನೊAದಿಗೆ ಮತ್ತೆ ಸರ್ಕಾರ ರಚಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಕೇಂದ್ರ ಸಚಿವ, ಜೆಡಿಯು ಹಿರಿಯ ನಾಯಕ ಆರ್ ಸಿಪಿ ಸಿಂಗ್, ಅವರು ಈ ಜನ್ಮ ಅಲ್ಲ ಇನ್ನೂ ಏಳು ಜನ್ಮ ಎತ್ತಿದರೂ ಪ್ರಧಾನಿಯಾಗಲ್ಲ ಎಂದಿದ್ದಾರೆ. ನೀವು ಬಿಜೆಪಿ ಸೇರಲು ಬಯಸುತ್ತೀರಾ? ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಂಗ್, ಯಾಕೆ ಸೇರಬಾರದು? "ನನಗೆ ಎಲ್ಲಾ ಆಯ್ಕೆಗಳಿವೆ" ಎಂದು ಹೇಳಿದರು. ಜೆಡಿಯು ಮತ್ತೊಂದು ಅವಧಿಗೆ ರಾಜ್ಯಸಭಾ ಸ್ಥಾನ ನಿರಾಕರಿಸಿದ ನಂತರ ಆರ್ ಸಿಪಿ ಸಿಂಗ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಚಂದ್ರಶೇಖರ್, ಹೆಚ್.ಡಿ. ದೇವೇಗೌಡ, ಐ.ಕೆ. ಗುಜರಾಲ್ ಮುಂತಾದವರು ಪ್ರಧಾನಿಯಾಗಿ ಅಲ್ಪಾವಧಿಯ ಆನಂದ ಅನುಭವಿಸಿದಂತಹ ರಾಜಕೀಯ ಅಸ್ಥಿರತೆ ಈಗ ದೇಶದಲ್ಲಿ ಇಲ್ಲ ಎಂದು ಸಿಂಗ್ ಹೇಳಿದ್ದಾರೆ.

ರಾಯಘಡ ಬೀಚ್‌ನಲ್ಲಿ ಪತ್ತೆಯಾದ ಶಂಕಿತ ಬೋಟ್ ಆಸಿಸ್ ಮಹಿಳೆಗೆ ಸೇರಿದ್ದು

ಮುಂಬೈ, ಆ. ೧೮: ಶಸ್ತಾçಸ್ತçಗಳ ಸಹಿತ ಮಹಾರಾಷ್ಟçದ ರಾಯಘಡ ಬೀಚ್‌ನಲ್ಲಿ ಪತ್ತೆಯಾಗಿದ್ದ ಶಂಕಿತ ವಿಹಾರ ಬೋಟ್ ಆಸ್ಟೆçÃಲಿಯಾ ಮಹಿಳೆಗೆ ಸೇರಿದ್ದಾಗಿದ್ದು, ಭಯೋತ್ಪಾದಕ ಕೃತ್ಯ ಭಯ ಬೇಡ ಎಂದು ಮಹಾರಾಷ್ಟç ಸರ್ಕಾರ ಸ್ಪಷ್ಟಪಡಿಸಿದೆ. ಮುಂಬೈ ಬಳಿಯ ರಾಯಘಡ ಕರಾವಳಿಗೆ ತೇಲಿ ಬಂದಿದ್ದ ೧೬ ಮೀಟರ್ ಉದ್ದದ ವಿಹಾರ ನೌಕೆಯು ಆಸ್ಟೆçÃಲಿಯಾದ ಮಹಿಳೆಯೊಬ್ಬರ ಒಡೆತನದ್ದಾಗಿದ್ದು, ಇದು ಯಾವುದೇ ಭಯೋತ್ಪಾದಕ ಕೃತ್ಯವಲ್ಲ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಈ ಕುರಿತು ಸ್ವತಃ ಗೃಹ ಖಾತೆಯನ್ನು ಹೊಂದಿರುವ ಮಹಾರಾಷ್ಟç ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮಾಹಿತಿ ನೀಡಿದ್ದು, 'ನೌಕೆಯಲ್ಲಿ ಮೂರು ಎಕೆ-೪೭ ರೈಫಲ್‌ಗಳು ಮತ್ತು ಬುಲೆಟ್‌ಗಳು ಪತ್ತೆಯಾಗಿದ್ದರಿಂದ ಇದು ಉಗ್ರರ ಸಂಚಿರಬಹುದೆAದು ಶಂಕಿಸಲಾಗಿತ್ತು. ಹಡಗಿನ ಮಾಲೀಕರು ಆಸ್ಟೆçÃಲಿಯಾದ ಮಹಿಳೆಯಾಗಿದ್ದು, ಅವರ ಪತಿ ಆಕೆಯ ಪತಿ ಜೇಮ್ಸ್ ಹರ್ಬರ್ಟ್ ಬೋಟ್‌ನ ಕ್ಯಾಪ್ಟನ್ ಎಂದು ವಿಧಾನಸಭೆಗೆ ತಿಳಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಭಯೋತ್ಪಾದಕ ಕೃತ್ಯವೆಂದು ಹೇಳಲು ಬರುವುದಿಲ್ಲ. ಆದರೆ, ತನಿಖೆ ನಡೆಯುತ್ತಿದೆ. ಯಾವುದೇ ಕೋನವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ನಾನು ಪ್ರಾಥಮಿಕ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳುತ್ತಿದ್ದೇನೆ. ಸ್ಥಳೀಯ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳವು ತನಿಖೆ ನಡೆಸುತ್ತಿದೆ. ನಾಲ್ಕು ಮೀಟರ್ ಅಗಲವಿರುವ ಈ ವಿಹಾರ ನೌಕೆ ಜೂನ್‌ನಲ್ಲಿ ಮಸ್ಕತ್‌ನಿಂದ ಯುರೋಪ್‌ಗೆ ತೆರಳುತ್ತಿದ್ದಾಗ ಹವಾಮಾನ ವೈಪರೀತ್ಯಕ್ಕೆ ಸಿಲುಕಿತು. ಎಂಜಿನ್ ದೋಷ ಕಂಡು ಬಂದ ನಂತರ ಆಸ್ಟೆçÃಲಿಯಾದ ದಂಪತಿ ಅದನ್ನು ಅಲ್ಲಿಯೇ ಬಿಟ್ಟು ಕೊರಿಯನ್ ಬೋಟ್ ಮೂಲಕ ಅವರನ್ನು ರಕ್ಷಿಸಿ ರವಾನಿಸಲಾಗಿದೆ. ಆಂದಿನಿAದ ಈ ಬೋಟ್ ಸಮುದ್ರದಲ್ಲೇ ಇದ್ದು, ಇದೀಗ ಹರಿಹರೇಶ್ವರ ಬೀಚ್ ತಲುಪಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಎಲ್ಲ ಶಾಲೆ, ಪಿ.ಯು. ಕಾಲೇಜುಗಳಲ್ಲಿ ರಾಷ್ಟçಗೀತೆ ಕಡ್ಡಾಯ

ಬೆಂಗಳೂರು, ಆ. ೧೮: ರಾಜ್ಯದ ಎಲ್ಲಾ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪ್ರತಿದಿನ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆಯ ವೇಳೆ ರಾಷ್ಟçಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಗಸ್ಟ್ ೧೭ ರ ಈ ಆದೇಶವು ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಅನ್ವಯಿಸುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ. ಆದೇಶದ ಪ್ರಕಾರ, ಈ ಬಗ್ಗೆ ಸರ್ಕಾರದ ಆದೇಶ ಜಾರಿಯಲ್ಲಿದ್ದರೂ, ಬೆಂಗಳೂರಿನ ಕೆಲವು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬೆಳಗ್ಗೆ ಪ್ರಾರ್ಥನೆಯ ಸಮಯದಲ್ಲಿ ರಾಷ್ಟçಗೀತೆಯ ಸಾಮೂಹಿಕ ಗಾಯನವನ್ನು ಅಭ್ಯಾಸ ಮಾಡುತ್ತಿಲ್ಲ ಮತ್ತು ಈ ಬಗ್ಗೆ ಸರ್ಕಾರಕ್ಕೆ ದೂರುಗಳು ಬಂದಿವೆ. ದೂರುಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಉತ್ತರ ಮತ್ತು ದಕ್ಷಿಣ ವಿಭಾಗದ ಉಪನಿರ್ದೇಶಕರು ಸಂಬAಧಪಟ್ಟ ಶಾಲೆಗಳಿಗೆ ಭೇಟಿ ನೀಡಿ ಬೆಳಗ್ಗೆ ಪ್ರಾರ್ಥನೆಯಲ್ಲಿ ರಾಷ್ಟçಗೀತೆ ಹಾಡುವ ಕಾರ್ಯ ನಡೆಯುತ್ತಿಲ್ಲ ಎಂದು ಖಚಿತಪಡಿಸಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕರ್ನಾಟಕ ಶಿಕ್ಷಣ ಕಾಯ್ದೆ ೧೯೮೩ರ ಪ್ರಕಾರ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟçಗೀತೆ ಹಾಡುವುದು ಕಡ್ಡಾಯ. ಕೆಲವು ಶಾಲೆಗಳಲ್ಲಿ ನಿಯಮ ಉಲ್ಲಂಘಿಸಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಅದಕ್ಕೆ ಅವಕಾಶ ನೀಡಬಾರದು ಎಂದು ತಾಕೀತು ಮಾಡಲಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಮೈದಾನದ ಕೊರತೆ ಇದ್ದರೆ, ಕೊಠಡಿಗಳಲ್ಲೇ ರಾಷ್ಟçಗೀತೆ ಹಾಡಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಶಾಲೆಗೆ ತಡವಾಗಿ ಬರುವ ಶಿಕ್ಷಕರ ವಿರುದ್ಧ ಕ್ರಮ: ಸಚಿವ ನಾಗೇಶ್

ಬೆಂಗಳೂರು, ಆ. ೧೮: ಶಾಲಾ ಅವಧಿಯಲ್ಲಿ ಅನಧಿಕೃತವಾಗಿ ಗೈರು ಹಾಜರಾಗುವ, ತಡವಾಗಿ ತರಗತಿಗಳಿಗೆ ಬರುವ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಮಿತಿ ಸಚಿವ ಬಿ.ಸಿ. ನಾಗೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶಾಲೆಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ರಾಜ್ಯದ ಶಿಕ್ಷಕರಿಗೆ ಸೂಚಿಸಿದ್ದಾರೆ ವಿನಾಕಾರಣ ತಡವಾದರೆ ಮಕ್ಕಳಿಗೆ ಶಾಲೆಯ ಹೊರಗಡೆ ಕಾಯಿಸಿದರೆ ಈ ಒಂದು ವಿಚಾರ ಕುರಿತು ಮಾಹಿತಿ, ವರದಿಗಳು ಬಂದರೆ ಕೂಡಲೇ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದಾರೆ. ರಾಜ್ಯದ ಶಿಕ್ಷಕರ ಕಾರ್ಯ ವೈಖರಿ ಕುರಿತು ಶಿಕ್ಷಣ ಸಚಿವರು ಮೆಚ್ಚುಗೆ ಯನ್ನು ವ್ಯಕ್ತಪಡಿಸಿದ್ದಾರೆ ಈ ನಡುವೆ ಶಾಲೆಗಳಿಗೆ ತಡವಾಗಿ ಬರುವ ಶಿಕ್ಷಕರಿಗೆ ಇದೇ ವೇಳೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಈ ಹಿಂದೆ ಅನಿರೀಕ್ಷಿತವಾಗಿ ಶಾಲೆಯೊಂದಕ್ಕೆ ಭೇಟಿ ನೀಡಿದ ಸಚಿವ ಬಿ.ಸಿ. ನಾಗೇಶ್ ಈ ಒಂದು ಸೂಚನೆಯನ್ನು ರಾಜ್ಯದ ಶಿಕ್ಷಕರಿಗೆ ನೀಡಿದ್ದಾರೆ. ನಾಗಮಂಗಲ ತಾಲೂಕು ನೆಲ್ಲಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈಚೆಗೆ ಭೇಟಿ ಕೊಟ್ಟಾಗ ಯಾವ ಶಿಕ್ಷಕರೂ ಶಾಲೆಗೆ ಬಂದಿರಲಿಲ್ಲ. ಮಕ್ಕಳು ಶಾಲಾ ಆವರಣದಲ್ಲೇ ಕುಳಿತಿದ್ದರು. ಸುಮಾರು ೧೦.೩೦ ಆದರೂ ಮಕ್ಕಳು ಅಲ್ಲಿಯವರೆಗೂ ಶಾಲೆಯಿಂದ ಹೊರಗೆ ಕಾಯುತ್ತಿದ್ದರು. ಇಂತಹ ಘಟನೆಗಳು ಶಿಕ್ಷಕರಿಗೆ ಶೋಭೆ ತರುವುದಿಲ್ಲ. ರಾಜ್ಯದ ಯಾವ ಶಾಲೆಗಳಲ್ಲೂ ಇಂತಹ ಘಟನೆಗಳು ಮರುಕಳಿಸಬಾರದು. ಮಕ್ಕಳ ಬೋಧನೆ, ಸುರಕ್ಷತೆಗೆ ಅಡ್ಡಿಯಾಗುವ ಶಿಕ್ಷಕರ ನಡೆ ಕ್ಷಮಿಸಲು ಸಾಧ್ಯವಿಲ್ಲ. ಶಿಸ್ತುಕ್ರಮ ಜರುಗಿಸಬೇಕು ಎಂದು ತಾಕೀತು ಮಾಡಿದ್ದಾರೆ. ಶಿಕ್ಷಣದಿಂದ ವಂಚಿತರಾಗುವುದಲ್ಲದೆ ಮಕ್ಕಳ ಸುರಕ್ಷತೆಗೂ ಧಕ್ಕೆಯಾಗಿದೆ. ಹೀಗಾಗಿ ಈ ನಿರ್ದೇಶನ ನೀಡಲಾಗುತ್ತಿದೆ ಎಂದು ನಾಗೇಶ್ ತಿಳಿಸಿದರು.

ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ; ಧರ್ಮಗುರು ಸೇರಿ ೨೧ ಸಾವು

ಕಾಬೂಲ್, ಆ. ೧೮: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಪ್ರಾರ್ಥನೆಯ ವೇಳೆ ನಡೆದ ಬಾಂಬ್ ದಾಳಿಯಲ್ಲಿ ಪ್ರಮುಖ ಧರ್ಮಗುರು ಸೇರಿದಂತೆ ಕನಿಷ್ಟ ೨೦ ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ೪೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಸಂಜೆಯ ಪ್ರಾರ್ಥನೆಯ ಸಮಯದಲ್ಲಿ ಮಸೀದಿಯೊಂದರಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಪ್ರಮುಖ ಧರ್ಮಗುರು ಸೇರಿದಂತೆ ಕನಿಷ್ಟ ೨೧ ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಟ ೪೦ ಮಂದಿ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಪೊಲೀಸರು ಗುರುವಾರ ತಿಳಿಸಿದ್ದಾರೆ. ಇದೊಂದು ಆತ್ಮಾಹುತಿ ದಾಳಿಯಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದು, ಘಟನೆಯಲ್ಲಿ ಮುಸ್ಲಿಂ ಧರ್ಮಗುರು ಮುಲ್ಲಾ ಅಮೀರ್ ಮೊಹಮ್ಮದ್ ಕಾಬೂಲಿ ಮೃತಪಟ್ಟಿದ್ದಾರೆ. ಕಾಬೂಲ್‌ನ ತಾಲಿಬಾನ್ ಪೊಲೀಸ್ ಮುಖ್ಯಸ್ಥರ ವಕ್ತಾರ ಖಾಲಿದ್ ಜದ್ರಾನ್ ಅವರು ನಗರದ ಖೇರ್ ಖನ್ನಾ ನೆರೆಹೊರೆಯಲ್ಲಿರುವ ಸಿದ್ದಿಕಿಯಾ ಮಸೀದಿಯಲ್ಲಿ ಬಾಂಬ್ ಸ್ಫೋಟದ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊAಡಿದ್ದಾರೆ. ಗಾಯಾಳುಗಳಲ್ಲಿ ಬಹುತೇಕ ಮಕ್ಕಳಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉತ್ತರ ಕಾಬೂಲ್‌ನ ಖೈರ್ ಖಾನಾ ಪ್ರದೇಶದಲ್ಲಿರುವ ಮಸೀದಿಯಲ್ಲಿ ಸಂಭವಿಸಿದ ಸ್ಫೋಟದ ತೀವ್ರತೆ ಹತ್ತಿರದ ಕಟ್ಟಡಗಳಿಗೂ ಹಾನಿಯಾಗಿವೆ.