ಗೋಣಿಕೊಪ್ಪ ವರದಿ, ಆ. ೧೯: ಗೋಣಿಕೊಪ್ಪ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ಸ್ಪಿರಿಟ್ ಆಫ್ ಫ್ರೀಡಂ ರನ್ ರಸ್ತೆ ಓಟದಲ್ಲಿ ಸುಮಾರು ೬೦೦ ಓಟಗಾರರು ಪಾಲ್ಗೊಂಡು ದೇಶಾಭಿಮಾನ ಮೂಡಿಸಿದರು.

ಪೊನ್ನಂಪೇಟೆ ಮುಖ್ಯ ವೃತ್ತದಿಂದ ಗೋಣಿಕೊಪ್ಪದವರೆಗೆ ಓಟ ನಡೆಯಿತು. ೬ ಕಿ. ಮೀ. ಓಡಿ ಗಮನ ಸೆಳೆದರು. ಸಣ್ಣಮಕ್ಕಳು ಸೇರಿದಂತೆ ಹಿರಿಯರು ಪಾಲ್ಗೊಂಡು ಗಮನ ಸೆಳೆದರು. ಅಂತಾರಾಷ್ಟಿçÃಯ ಹಿರಿಯ ಓಟಗಾರ ಪೆಮ್ಮಂಡ ಅಪ್ಪಯ್ಯ ಓಡಿ ಮಕ್ಕಳಿಗೆ ಸ್ಪೂರ್ತಿಯಾದರು.

ಗೋಣಿಕೊಪ್ಪ ಉಮಾಮಹೇಶ್ವರಿ ಪೆಟ್ರೋಲಿಯಂ ಮಾಲೀಕ ಗಯ ಕಾವೇರಪ್ಪ ಉಪಹಾರ ನೀಡಿ ಪ್ರೋತ್ಸಾಹ ನೀಡಿದರು.

ವಿಜೇತರುಗಳು : ಸಾರ್ವಜನಿಕ ವಿಭಾಗದಲ್ಲಿ ಎ. ಎಂ ಗೌತಮ್, ಮೋನಿಶ್ ಮಂದಣ್ಣ, ಬಿ. ಸಿ. ಲಿಖಿತ್, ಮಹಿಳೆಯರಲ್ಲಿ ರೋಶಿಕ, ತಾನ್ಯ, ರೆಶಿತ್, ಹಿರಿಯರಲ್ಲಿ ಎನ್. ಯು. ಭೀಮಯ್ಯ, ಎಂ. ಬಿ. ರಮೇಶ್, ಕರ್ನಲ್ ಚೆಪ್ಪುಡೀರ ಮುತ್ತಣ್ಣ (ನಿವೃತ್ತ). ಲೋವರ್ ಪ್ರೆöÊಮರಿ ವಿಭಾಗದಲ್ಲಿ ಲೇಖಕ್ ಚೆಂಗಪ್ಪ, ಲಿಕಿತ್ ಚಿಣ್ಣಪ್ಪ, ರುಶೀಲ್ ತಿಮ್ಮಯ್ಯ, ಬಾಲಕಿಯರಲ್ಲಿ ಪಿ.ಪಿ. ಪ್ರತಿಕ್ಷಾ, ಕೆ.ಕೆ. ವಂಶಿಕ, ಸಾನ್ವಿ, ಹಿರಿಯ ಪ್ರಾಥಮಿಕ ಬಾಲಕರಲ್ಲಿ ಪಿ. ಕೆ. ಮುತ್ತ, ಗವಿನ್, ರಂಜಿತ್, ಬಾಲಕಿಯರಲ್ಲಿ ಎಂ.ಸಿ. ಶಿವಾನಿ, ಚರಿಷ್ಮಾ, ಗ್ರೀಷ್ಮಾ, ಪ್ರೌಢ ಬಾಲಕರಲ್ಲಿ ನಿಶಾಂತ್, ಗಣಪತಿ, ಮನ್ವಿತಾ, ಬಾಲಕಿಯರಲ್ಲಿ ಅರ್ಚನಾ, ಮನ್ಸಿ÷್ವ, ಶೈಲ್, ಮುಕ್ತ ವಿಭಾಗದಲ್ಲಿ ಯಶ್ವಂತ್, ಆಶಿತ್, ಸಚಿನ್, ಮಹಿಳೆಯರಲ್ಲಿ ದಿಶಾ ಪೊನ್ನಮ್ಮ, ಕೆ. ಟಿ. ಚೋಂದಮ್ಮ, ಲಕ್ಷö್ಯ ಪಡೆದುಕೊಂಡರು.

ಗೋಣಿಕೊಪ್ಪ ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ. ಅಮ್ಮಂಡ ಚಿಣ್ಣಪ್ಪ, ಕಾರ್ಯದರ್ಶಿ ಲೋಕೇಶ್ ಕಾರ್ಯಪ್ಪ, ಖಜಾಂಚಿ ಚೆಟ್ಟಿಮಾಡ ಅಪ್ಪಣ್ಣ ಇದ್ದರು. ಪೊನ್ನಂಪೇಟೆ ಪೊಲೀಸ್ ಉಪ ನಿರೀಕ್ಷಕ ಕುಮಾರ್ ಓಟ ಸ್ಪರ್ಧೆಗೆ ಹಸಿರು ನಿಶಾನೆ ಮೂಲಕ ಉದ್ಘಾಟಿಸಿದರು.