ಗೋಣಿಕೊಪ್ಪಲು, ಆ. ೧೮: ಇತ್ತೀಚೆಗೆ ಸುರಿದ ಭಾರೀ ಮಳೆ ಗಾಳಿಯಿಂದ ಕೊಡಗಿನ ವಿವಿಧ ಭಾಗಗಳಲ್ಲಿ ಅತಿವೃಷ್ಟಿಯಿಂದ ಹಾನಿ ಸಂಭವಿಸಿರುವ ಪ್ರದೇಶಗಳಿಗೆ ಭೇಟಿ ನೀಡುವ ಸಲುವಾಗಿ ಕರ್ನಾಟಕ ರಾಜ್ಯದ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿಗೆ ಭೇಟಿ ನೀಡಿದ್ದು, ಕಾಂಗ್ರೆಸ್ ಪಕ್ಷದ ಮುಖಂಡರು ಆನೆಚೌಕೂರಿನಲ್ಲಿ ಬರಮಾಡಿ ಕೊಂಡರು.
ಕೊಡಗು ಜಿಲ್ಲಾ ಕಾಂಗ್ರೆಸ್ ಹಾಗೂ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೀತಿರ ಧರ್ಮಜ ಹಾಗೂ ಮೀದೇರಿರ ನವೀನ್ ಮುಂದಾಳತ್ವದಲ್ಲಿ ಗೇಟ್ ಬಳಿ ಜಮಾವಣೆಗೊಂಡಿದ್ದ ನೂರಾರು ಕಾರ್ಯಕರ್ತರನ್ನು ಕಂಡು ಸಂತೋಷಗೊAಡ ಸಿದ್ದರಾಮಯ್ಯ ಅವರು ಕಾರಿನಿಂದ ಇಳಿದು ನಂತರ ಕಾರಿನ ಮೇಲೇರಿ ಕಾರ್ಯಕರ್ತರಿಂದ ಹೂವಿನ ಹಾರವನ್ನು ಸ್ವೀಕರಿಸಿ ಹಸ್ತಲಾಘವ ಮಾಡಿದರು. ಕಾಂಗ್ರೆಸ್ ಆನೆಚೌಕೂರಿನಲ್ಲಿ ಬರಮಾಡಿ ಕೊಂಡರು.
ಕೊಡಗು ಜಿಲ್ಲಾ ಕಾಂಗ್ರೆಸ್ ಹಾಗೂ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೀತಿರ ಧರ್ಮಜ ಹಾಗೂ ಮೀದೇರಿರ ನವೀನ್ ಮುಂದಾಳತ್ವದಲ್ಲಿ ಗೇಟ್ ಬಳಿ ಜಮಾವಣೆಗೊಂಡಿದ್ದ ನೂರಾರು ಕಾರ್ಯಕರ್ತರನ್ನು ಕಂಡು ಸಂತೋಷಗೊAಡ ಸಿದ್ದರಾಮಯ್ಯ ಅವರು ಕಾರಿನಿಂದ ಇಳಿದು ನಂತರ ಕಾರಿನ ಮೇಲೇರಿ ಕಾರ್ಯಕರ್ತರಿಂದ ಹೂವಿನ ಹಾರವನ್ನು ಸ್ವೀಕರಿಸಿ ಹಸ್ತಲಾಘವ ಮಾಡಿದರು. ಕಾಂಗ್ರೆಸ್ (ಮೊದಲ ಪುಟದಿಂದ) ಕಡೇಮಾಡ ಕುಸುಮಾ, ಪಿ.ಆರ್. ಪಂಕಜ, ಆಲೀರ ರಶೀದ್, ಎರ್ಮು ಹಾಜಿ, ಶಾಜಿ ಅಚ್ಚುತ್ತನ್, ಅಬ್ದುಲ್ ರೆಹಮಾನ್ ಬಾಪು, ಶಿವಣ್ಣ, ಮುಕ್ಕಾಟೀರ ಸಂದೀಪ್, ಚೇರಂಡ ಜಗನ್, ಕೆ.ಕೆ.ರೋಶನ್, ಅಬ್ದುಲ್ ಸಮ್ಮದ್, ಟಾಟೂ ಮೊಣ್ಣಪ್ಪ, ಕರ್ತಮಾಡ ರಮ್ಯ, ಚುಬ್ರು, ನರೇನ್ ಕಾರ್ಯಪ್ಪ, ಉಮೇಶ್ ಕೇಚಮಯ್ಯ, ಪ್ರಮೋದ್ ಗಣಪತಿ, ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
ಸಿದ್ದರಾಮಯ್ಯ ಅವರು ವಾಣಿಜ್ಯ ನಗರ ಗೋಣಿಕೊಪ್ಪಕ್ಕೆ ಆಗಮಿಸುತ್ತಿದ್ದಂತೆಯೇ ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷÀ ನಾಮೇರ ಅಂಕಿತ್ ಪೊನ್ನಪ್ಪ ಮುಂದಾಳತ್ವದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ವೇಳೆ ಸಿದ್ದರಾಮಯ್ಯನವರಿಗೆ ಯುವ ಕಾಂಗ್ರೆಸ್ ವತಿಯಿಂದ ಬೃಹತ್ ಹೂವಿನ ಮಾಲೆ ಅರ್ಪಿಸಲಾಯಿತು. ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಪಕ್ಷದ ಕಾರ್ಯಕರ್ತರು, ಮುಖಂಡರುಗಳು ಸಿದ್ದರಾಮಯ್ಯನವರಿಗೆ ಹೂ ಗುಚ್ಚ ನೀಡಿದರು. ಈ ಸಂದರ್ಭ ಯುವ ಕಾಂಗ್ರೆಸ್‌ನ ಉಪಾಧ್ಯಕ್ಷ ಕೇಚಮಾಡ ರಿಷಬ್ ದೇವಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೂವಣ್ಣ, ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಪಿ.ಕೆ. ಪ್ರವೀಣ್, ಮಲ್ಲಂಡ ಪ್ರಕಾಶ್, ಶರತ್‌ಕಾಂತ್, ಎಂ. ಮಂಜುಳ, ಮುಂತಾದವರು ಹಾಜರಿದ್ದರು.
ಸೋಮವಾರಪೇಟೆಯಲ್ಲಿ ಸ್ವಾಗತ
ಸೋಮವಾರಪೇಟೆ : : ರಾಜ್ಯ ವಿರೋಧ ಪಕ್ಷದ ನಾಯಕ, ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರಪೇಟೆಗೆ ಆಗಮಿಸಿದ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು.
ಇಲ್ಲಿನ ವಿವೇಕಾನಂದ ವೃತ್ತದ ಬಳಿಯಿರುವ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಆಗಮಿಸುತ್ತಿದ್ದಂತೆ ಹೂಮಳೆ ಸುರಿದು ಸ್ವಾಗತಿಸಿದ ಕಾರ್ಯಕರ್ತರು, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜೈ ಎಂದು ಘೋಷಣೆ ಕೂಗಿದರು.
ನೂರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಹರ್ಷೋದ್ಗಾರ ಮೊಳಗಿಸಿದರು. ನಂತರ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ತೆರಳಿದ ಸಿದ್ದರಾಮಯ್ಯ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಸೇರಿದಂತೆ ಇತರ ಮುಖಂಡರು ಪೇಟೆ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು. ಕೆಲ ನಿಮಿಷ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಯಾರೇ ಅಭ್ಯರ್ಥಿಯಾದರೂ ಅವರುಗಳ ಗೆಲುವಿಗೆ ಕಾರ್ಯಕರ್ತರು ಶ್ರಮಿಸುವಂತೆ ಕರೆ ನೀಡಿದರು.
ಈ ಸಂದರ್ಭ ವಿಧಾನ ಸಭಾ ಚುನಾವಣೆಯ ಪ್ರಬಲ ಟಿಕೆಟ್ ಆಕಾಂಕ್ಷಿಗಳಾದ ಡಾ. ಮಂಥರ್‌ಗೌಡ, ಅಜ್ಜಿಕುಟ್ಟೀರ ಪೊನ್ನಪ್ಪ, ಬಿ.ಎ. ಜೀವಿಜಯ ಸೇರಿದಂತೆ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.
ವೀರಾಜಪೇಟೆಯಲ್ಲಿ ಸ್ವಾಗತ
ವೀರಾಜಪೇಟೆ: ಗೋಣಿಕೊಪ್ಪ ಮಾರ್ಗವಾಗಿ ವೀರಾಜಪೇಟೆ ನಗರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾದ ಎ.ಎಸ್ ಪೊನ್ನಣ್ಣ, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ರಂಜಿ ಪೂಣಚ್ಚ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಂಜರಪೇಟೆಯಲ್ಲಿ ಸ್ವಾಗತಿಸಿದರು.
ತದನಂತರ ನಗರದ ಪ್ರವಾಸಿ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರ ಜೊತೆಗೆ ಮಾತುಕತೆ ನಡೆಸಿದ ಸಿದ್ದರಾಮಯ್ಯ ಅವರು, ವೀರಾಜಪೇಟೆ ನಗರದ ಅಭಿವೃದ್ಧಿ ಬಗ್ಗೆ ಹಾಗೂ ಮಳೆಗಾಲದಲ್ಲಿ ಆಗಿರುವ ಹಾನಿ ಮತ್ತು ಇನ್ನಿತರ ವಿಚಾರಗಳ ಬಗ್ಗೆ ಆಡಳಿತ ಪಕ್ಷ ನಿರ್ಲಕ್ಷö್ಯವಹಿಸಿದೆ ಎಂದು ಹೇಳಿದರು.
ಅತಿಯಾದ ಮಳೆಯಿಂದ ಕಾಫಿ, ಭತ್ತ ಬೆಳೆಗಳು ಹಾಳಾಗಿದ್ದು ಬಹಳಷ್ಟು ನಷ್ಟವಾಗಿದೆ. ಇದಕ್ಕೆ ಸೂಕ್ತ ಪರಿಹಾರ ದೊರಕಿಸುವಂತೆ ಚಲ್ಲುವಂಡ ಕಾವೇರಪ್ಪ ಮನವಿ ಮಾಡಿದರು. ಪಕ್ಷದಲ್ಲಿ ವೈಮನಸ್ಸು ಬಿಟ್ಟು ಮುಂದಿನ ಚುನಾವಣೆಗೆ ಒಗ್ಗಟ್ಟಾಗಿ ಪಕ್ಷ ಸಂಘಟಿಸಿ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಸಿದ್ದರಾಮಯ್ಯ ಕರೆ ನೀಡಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಮಹಮ್ಮದ್ ರಾಫಿ, ಸಿ.ಕೆ. ಪೃಥ್ವಿನಾಥ್, ಆಗಸ್ಟಿನ್ ಬೆನ್ನಿ, ಮಹಿಳಾ ಬ್ಲಾಕ್ ಅಧ್ಯಕೆÀ್ಷ ಪೊನಕ್ಕಿ, ವಕೀಲ ಡಿ.ಸಿ. ಧ್ರುವ ಕುಮಾರ್, ಕಾಂಗ್ರೆಸ್ ಮಾಜಿ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಜರಿದ್ದರು.