ಮಡಿಕೇರಿ, ಆ. ೧೯: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣವು ಬಿಜೆಪಿಯ ಗೂಂಡಾ ವರ್ತನೆಯನ್ನು ತೋರಿಸುತ್ತದೆ ಎಂದಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ ಗಣೇಶ್, ಕೊಡಗಿನ ಶಾಸಕರ ಕುಮ್ಮಕ್ಕಿಂದಲೇ ಕೃತ್ಯ ನಡೆದಿದೆ ಎಂದು ಆರೋಪಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆ ರಾಷ್ಟçಮಟ್ಟದಲ್ಲಿ ಹೆಸರುವಾಸಿ ಯಾಗಿದೆ. ಕೊಡಗಿಗೆ ಯಾರೇ ಆಗಮಿಸಿದರೂ ಅತಿಥಿ ದೇವೋಭವ ಎಂಬAತೆ ಕಾಣಬೇಕು. ಆದರೆ ಮಾಜಿ ಮುಖ್ಯಮಂತ್ರಿಗಳು ಜಿಲ್ಲೆಯ ಮಳೆಹಾನಿ ಪ್ರದೇಶ ವೀಕ್ಷಣೆಗೆ ಬಂದಾಗ ಬಿಜೆಪಿ ಪಕ್ಷದವರು ನಡೆದುಕೊಂಡ ರೀತಿ ಖಂಡನೀಯ. ಮೊಟ್ಟೆ ಎಸೆಯುವುದು ಕೊಡಗಿನವರ ಸಂಸ್ಕೃತಿಯಲ್ಲ. ಇದು ಬಿಜೆಪಿ ಪಕ್ಷದ ಗೂಂಡಾಗಿರಿಯನ್ನು ತೋರಿಸುತ್ತದೆ. ಜಿಲ್ಲೆಯ ಕೀರ್ತಿಗೆ ಅಪಚಾರ ಉಂಟು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೃತ್ಯದಲ್ಲಿ ಭಾಗಿಯಾದವರೆಲ್ಲನ್ನೂ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಕರಣದ ಹಿಂದೆ ಜಿಲ್ಲೆಯ ಶಾಸಕರ ಕೈವಾಡವಿದ್ದು, ಅವರ ವಿರುದ್ದವೂ ಎಫ್ಐಆರ್ ದಾಖಲಾಗಬೇಕೆಂದು ಆಗ್ರಹಿಸಿದರು.
ರಾಷ್ಟಿçÃಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್, ಅಭಿವೃದ್ಧಿಯತ್ತ ಗಮನ ಹರಿಸುವುದನ್ನು ಬಿಟ್ಟು ಕಿತ್ತಾಟದಲ್ಲಿ ತೊಡಗಿಕೊಂಡಿದ್ದು ದುರದೃಷ್ಟ. ತಾ.೨೬ರಂದು ಕೊಡಗಿನಲ್ಲಿ ಮತ್ತೆ ಪ್ರತಿಭಟನೆಗೆ ಕಾಂಗ್ರೆಸ್ ಮುಂದಾಗಿರುವುದು ಸರಿಯಲ್ಲ. ಅದು ಜಿಲ್ಲೆಯ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.
ಈ ಸಂದರ್ಭ ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಶ್ವ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪುಷ್ಪಾವತಿ, ಜಿಲ್ಲಾ ವಕ್ತಾರೆ ಗುಲಾಬಿ ಜನಾರ್ದನ್, ಮಡಿಕೇರಿ ಪರಿಶಿಷ್ಟ ಘಟಕದ ಅಧ್ಯಕ್ಷ ರವಿಕುಮಾರ್, ನಗರ ಉಪಾಧ್ಯಕ್ಷ ಕುಮಾರ್ ವಿಲಾಸ್ ಮತ್ತಿತರರು ಇದ್ದರು.