ಮಡಿಕೇರಿ, ಆ. ೧೯: ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ ಮೊದಲ ವಾರ ನಡೆಯುವ ಕರ್ನಾಟಕ ಯೂತ್ ಪ್ರಿಮಿಯರ್ ಲೀಗ್ ಪಂದ್ಯಾವಳಿಗೆ ನಕ್ಷತ್ರ ಅಕಾಡೆಮಿ ತಂಡಕ್ಕೆ ಆಯ್ಕೆ ಪ್ರಕ್ರಿಯೆ ತಾ.೨೧ರಂದು ಅಮ್ಮತ್ತಿ ಪ್ರೌಢ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಯುನೈಟೆಡ್ ಕೊಡಗು ಎಫ್.ಸಿ ಸಂಸ್ಥಾಪಕ ಹಾಗೂ ನಕ್ಷತ್ರ ಅಕಾಡೆಮಿ ಮುಖ್ಯಸ್ಥ ಎಚ್.ಎಚ್. ಹರೀಶ್ ತಿಳಿಸಿದ್ದಾರೆ. ಅಂಡರ್ ೧೩ ಹಾಗೂ ಅಂಡರ್ ೧೫ ವಯೋಮಾನದ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಂಡರ್ ೧೩ ಆಟಗಾರರು ೨೦೧೦ ಜನವರಿ ೧ ಹಾಗೂ ಅಂಡರ್ ೧೫ ಆಟಗಾರರು ೨೦೦೮ ಜನವರಿ ೧ರ ನಂತರ ಜನಿಸರಬೇಕು. ಅಂತಹ ಆಟಗಾರರು ಮಾತ್ರ ಆಯ್ಕೆ ಪ್ರಕ್ರಿಯೆಯಲ್ಲಿ ನೋಂದಣಿ ಮಾಡಲು ಅವಕಾಶವಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಆಟಗಾರರು ಹೆಚ್ಚಿನ ಮಾಹಿತಿಗಾಗಿ ೮೯೫೧೮೨೦೨೫೧ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.