ಶನಿವಾರಸಂತೆ, ಆ. ೧೯: ಮಲ್ಲಿಪಟ್ಟಣದ ಕಡೆಯಿಂದ ಎಂಸ್ಯಾAಡ್ (ಮರಳು) ತುಂಬಿಸಿಕೊAಡು ಶನಿವಾರಸಂತೆ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ (ಕೆಎ ೫೧ ಬಿ ೪೧೭೮) ಬೆಳಾರಳ್ಳಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ಮಗುಚಿಕೊಂಡಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

ಶನಿವಾರಸಂತೆಯ ಸೆಸ್ಕ್ ಲೈನ್‌ಮೆನ್‌ಗಳಾದ ಮಂಜುನಾಥ, ದೇವರಾಜು ಇವರಿಬ್ಬರು ಬೆಳಾರಳ್ಳಿ ಗ್ರಾಮದಲ್ಲಿ ವಿದ್ಯುತ್ ತೊಂದರೆಯನ್ನು ಸರಿಪಡಿಸಲು ಪ್ರತ್ಯೇಕವಾಗಿ ಎರಡು ಬೈಕ್‌ಗಳಲ್ಲಿ ಶನಿವಾರಸಂತೆಯಿAದ ಬೆಳಾರಳ್ಳಿ ಜಂಕ್ಷನ್‌ಗೆ ತಲುಪುವಾಗ ಎದುರುಗಡೆಯಿಂದ ಬಂದ ಟಿಪ್ಪರ್ ಲಾರಿ ರಸ್ತೆಯ ಬಲಭಾಗಕ್ಕೆ ಮಗುಚಿದೆ. ಮುಂಭಾಗದಲ್ಲಿ ಹೋಗುತ್ತಿದ್ದ ಸೆಸ್ಕ್ ಲೈನ್‌ಮೆನ್ ಮಂಜುನಾಥ ಹಾಗೂ ಮೋಟಾರ್ ಸೈಕಲ್ (ಕೆಎ ೧೩ ಇಪಿ ೭೬೬೫) ಮೇಲೆ ಲಾರಿಯಲ್ಲಿ ತುಂಬಿದ ಎಂಸ್ಯಾAಡ್ ಬಿದ್ದ ಪರಿಣಾಮ ಬೈಕ್ ಸಮೇತ ಮಂಜುನಾಥ ರಸ್ತೆಗೆ ಬಿದ್ದಿದ್ದಾರೆ.

ಲಾರಿ ಚಾಲಕ ನವೀನ್ ಹಾಗೂ ಮಂಜುನಾಥ ಇಬ್ಬರಿಗೂ ಪೆಟ್ಟಾಗಿದೆ. ಗಾಯಾಳುಗಳನ್ನು ಶನಿವಾರಸಂತೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಶನಿವಾರಸಂತೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಸಬ್‌ಇನ್ಸ್ಪೆಕ್ಟರ್ ಗೋವಿಂದ್ ರಾಜ್, ಸಹಾಯಕ ಠಾಣಾಧಿಕಾರಿ ಶಶಿಧರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಸೆಸ್ಕ್ ಲೈನ್‌ಮೆನ್ ದೇವರಾಜು ಅವರು ನೀಡಿದ ದೂರಿನ ಮೇರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.