ಚೆಟ್ಟಳ್ಳಿ, ಆ. ೧೮: ನರೇಗಾ ಯೊಜನೆಯಡಿ ಉ¥ Àಬೆಳೆಗಳ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಳ್ಳಲು ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಯೋಜನೆ ಜಂಟಿ ಕಾರ್ಯದೊಂದಿಗೆ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಕೇಂದ್ರಕ್ಕೆ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಆಯುಕ್ತರಾದ ಶಿಲ್ಪನಾಗ್ ಭೇಟಿ ನೀಡಿ ಮಾಹಿತಿ ಪಡೆದರು. ಗ್ರಾಮೀಣ ಮಟ್ಟದಲ್ಲಿ ಉಪ ಬೆಳೆಯ ಅಭಿವೃದ್ಧಿಗೆ ವಿವಿಧ ಯೋಜನೆಗಳ ಮೂಲಕ ಕ್ರಮ ವಹಿಸುವುದಾಗಿ ತಿಳಿಸಿದರು.

ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಯೋಜನೆ ವ್ಯವಸ್ಥಾಪಕ ನಿರ್ದೇಶಕಿ ಮಂಜುಶ್ರೀ ಮಾತನಾಡಿ, ಮಹಿಳೆಯರು ಸ್ವಸಹಾಯ ಗುಂಪುಗಳ ಮೂಲಕ ತೋಟಗಾರಿಕಾ ಇಲಾಖಾ ಮಾರ್ಗ ದರ್ಶನದಂತೆ ಉಪಬೆಳೆಗಳ ಅಭಿವೃದ್ಧಿಗೆ ಸಹಕಾರಿಯಾಗ ಬೇಕೆಂದರು.ಕೇAದ್ರದ ಉಪನಿರ್ದೇಶಕ ಡಾ. ರಾಜೇಂದ್ರನ್ ಹಾಗೂ ವಿಜ್ಞಾನಿ ಡಾ. ಮುರಳೀಧರ್ ಕೇಂದ್ರದ ವಿವಿಧ ಬೆಳೆಗಳ ಬಗ್ಗೆ ಆಯುಕ್ತರಿಗೆ ಮಾಹಿತಿ ನೀಡಿದರು. ಜಿಲ್ಲೆಯ ಹೆಚ್ಚಿನ ಬೆಳೆಗಾರರಿಗೆ ನರೇಗಾ ಯೋಜನೆ ಪ್ರಯೋಜನಕಾರಿಯಾಗುತಿಲ್ಲವೆಂದು ಸ್ಥಳೀಯ ಬೆಳೆಗಾರ ಪೇರಿಯನ ಉದಯ ಗಮನಕ್ಕೆ ತಂದರು. ೨೦೨೧-೨೦೨೨ನೇ ಸಾಲಿನ ನರೇಗಾ ಯೋಜನೆಯಲ್ಲಿ ಫಲಾನುಭವಿಗಳ ಮಾಹಿತಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜಿ.ಪಂ. ಯೋಜನಾ ನಿರ್ದೇಶಕ ಜಗದೀಶ್ ಎಸ್., ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಸಿ. ಅಪ್ಪಣ್ಣ, ಉದ್ಯೋಗ ಖಾತರಿ ಯೋಜನೆ ಸಹಾಯಕ ನಿರ್ದೇಶಕ ರವೀಶ್, ಚೆಟ್ಟಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್, ಕೃಷಿ ವಿಜ್ಞಾನಿಗಳು, ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿವರ್ಗ, ಬೆಳೆಗಾರ ಪುತ್ತರಿರ ಶಿವು ನಂಜಪ್ಪ ಹಾಜರಿದ್ದರು.