ಶನಿವಾರಸಂತೆ, ಆ. ೧೮: ಸಮೀಪದ ಕೊಡ್ಲಿಪೇಟೆ ಊರುಮಠದ ಉತ್ತರಾಧಿಕಾರಿಯಾಗಿ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಯವರನ್ನು ತುಮಕೂರು ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿಯವರು ರಾಜ್ಯದ ವಿವಿಧ ಮಠಾಧೀಶರ ಸಮ್ಮುಖದಲ್ಲಿ ನೇಮಕ ಮಾಡಿದರು.
ನೂರಾರು ವರ್ಷಗಳ ಇತಿಹಾಸವಿರುವ ಊರುಮಠದ ಸ್ವಾಮೀಜಿಯಾಗಿದ್ದ ಸಿದ್ಧಲಿಂಗ ಸ್ವಾಮೀಜಿ (೯೨) ತಿಂಗಳ ಹಿಂದೆ ಲಿಂಗೈಕ್ಯರಾಗಿದ್ದರು. ನಿಧನರಾಗುವ ಮುನ್ನ ಸ್ವಾಮೀಜಿ ಮರಣಶಾಸನ ಬರೆದಿಟ್ಟಿದ್ದರು. ಅದರಲ್ಲಿ ಮಠದ ಸ್ಥಿರ, ಚರ ಆಸ್ತಿಗೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿಯವರನ್ನೇ ಉತ್ತರಾಧಿಕಾರಿಯಾಗಿ ನೇಮಿಸುವಂತೆ ಬರೆದಿದ್ದರು.
ಗುರುವಾರ ಊರುಮಠದ ಆವರಣದಲ್ಲಿ ನಡೆದ ಲಿಂಗೈಕ್ಯ ಸ್ವಾಮೀಜಿಯವರ ತಿಂಗಳ ಪುಣ್ಯಾರಾಧನಾ ಕಾರ್ಯಕ್ರಮದಲ್ಲಿ ಸಿದ್ಧಗಂಗಾಮಠದ ಪೀಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಮಠಾಧೀಶರ ಸಮ್ಮುಖದಲ್ಲಿ ಮಠದ ಉತ್ತರಾಧಿಕಾರಿಯನ್ನಾಗಿ ಘೋಷಣೆ ಮಾಡಿದರು.
ನಂತರ ಸ್ವಾಮೀಜಿ ಮಾತನಾಡಿ, ಊರುಮಠದ ಸ್ವಾಮೀಜಿಯವರ ಸದಿಚ್ಛೆಯಂತೆ ಉತ್ತರಾಧಿಕಾರಿಯನ್ನು ನೇಮಿಸಲಾಗಿದೆ. ಅವರಿಗೆ ಎಲ್ಲರ ಸಹಕಾರವಿರಲಿ. ಮಠದ ಆಸ್ತಿ, ಕೃಷಿ ಚಟುವಟಿಕೆ ನಡೆಯದೆ ಪಾಳುಬಿದ್ದಿದೆ. ಆದರೂ ಹಿಂದಿನ ಸ್ವಾಮೀಜಿ ಅವುಗಳನ್ನು ಜೋಪಾನ ಮಾಡಿದ್ದಾರೆ. ಮುಂದೆ ಅವುಗಳನ್ನು ಅಭಿವೃದ್ಧಿಪಡಿಸ ಬೇಕಾದ ಜವಾಬ್ದಾರಿ ಉತ್ತರಾಧಿಕಾರಿ ಯವರ ಮೇಲಿದೆ ಎಂದರು.
ಇಲ್ಲಿ ಕೃಷಿಯೇ ಪ್ರಧಾನವಾಗಿ ದ್ದರೂ ಯುವ ಜನಾಂಗ ಉದ್ಯೋಗ ಅರಸಿ ಪಟ್ಟಣಕ್ಕೆ ತೆರಳುತ್ತಿರುವುದರಿಂದ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗುತ್ತಿದೆ. ಭೂಮಿ ಪಾಳು ಬೀಳುವಂತಾಗಿದೆ ಎಂದು ವಿಷಾದಿಸಿದರು.
ಮಠಮಾನ್ಯಗಳು ಧಾರ್ಮಿಕ ಶ್ರದ್ಧಾಕೇಂದ್ರಗಳಾಗಿದ್ದು, ಶಿಕ್ಷಣ, ವಸತಿ, ದಾಸೋಹದೊಂದಿಗೆ ದೀನ ದುರ್ಬಲರ ಆಶ್ರಯ ಕೇಂದ್ರಗಳಾಗಿವೆ. ಅವುಗಳ ಅಭಿವೃದ್ಧಿಯಾದರೆ ಸಮಾಜಕ್ಕೆ ಮತ್ತಷ್ಟು ಸೇವೆ ದೊರಕುತ್ತದೆ ಎಂದು ಬೇಕಾದ ಜವಾಬ್ದಾರಿ ಉತ್ತರಾಧಿಕಾರಿ ಯವರ ಮೇಲಿದೆ ಎಂದರು.
ಇಲ್ಲಿ ಕೃಷಿಯೇ ಪ್ರಧಾನವಾಗಿ ದ್ದರೂ ಯುವ ಜನಾಂಗ ಉದ್ಯೋಗ ಅರಸಿ ಪಟ್ಟಣಕ್ಕೆ ತೆರಳುತ್ತಿರುವುದರಿಂದ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗುತ್ತಿದೆ. ಭೂಮಿ ಪಾಳು ಬೀಳುವಂತಾಗಿದೆ ಎಂದು ವಿಷಾದಿಸಿದರು.
ಮಠಮಾನ್ಯಗಳು ಧಾರ್ಮಿಕ ಶ್ರದ್ಧಾಕೇಂದ್ರಗಳಾಗಿದ್ದು, ಶಿಕ್ಷಣ, ವಸತಿ, ದಾಸೋಹದೊಂದಿಗೆ ದೀನ ದುರ್ಬಲರ ಆಶ್ರಯ ಕೇಂದ್ರಗಳಾಗಿವೆ. ಅವುಗಳ ಅಭಿವೃದ್ಧಿಯಾದರೆ ಸಮಾಜಕ್ಕೆ ಮತ್ತಷ್ಟು ಸೇವೆ ದೊರಕುತ್ತದೆ ಎಂದು