ವೀರಾಜಪೇಟೆ, ಆ. ೧೯: ವೀರಾಜಪೇಟೆ ನಗರದ ಮಲ್ಬಾರ್ ರಸ್ತೆಯ ಖಾಸಗಿ ಕಟ್ಟಡದಲ್ಲಿ ಕೊಡಗು ಮಲಯಾಳಿ ನಿಧಿ ಲಿಮಿಟೆಡ್ ಬ್ಯಾಂಕ್ ಲೋಕಾರ್ಪಣೆ ಸಮಾರಂಭ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬ್ಯಾಂಕ್ ಪಾಲುದಾರರಾದ ಪಿ.ಜೆ. ವಿಶ್ವನಾಥ್ ಅವರು, ಬ್ಯಾಂಕ್ ಕೇಂದ್ರ ಸರ್ಕಾರದ ಕಾರ್ಪೋರೇಟ್ ವ್ಯವಹಾರಗಳ ನಿಧಿ ಸಚಿವಾಲಯದಿಂದ ಅಂಗೀಕಾರ ಪಡೆದಿದ್ದು, ಎಲ್ಲಾ ಸಮುದಾಯಗಳ ವ್ಯಕ್ತಿಗಳು ಬ್ಯಾಂಕ್ನಲ್ಲಿ ವ್ಯವಹರಿಸಬಹುದಾಗಿದೆ. ಮೊದಲ ಹಂತದಲ್ಲಿ ೧೦೦ ರೂ ಮುಖ ಬೆಲೆಯ ಷೇರುಗಳು ಲಭ್ಯವಿದ್ದು. ಷೇರುಗಳನ್ನು ಪಡೆದುಕೊಂಡು ಸಹಕಾರ ನೀಡಬೇಕು. ಬ್ಯಾಂಕ್ ವ್ಯವಹಾರಗಳಿಂದ ಬರುವ ಶೇಕಡ ೫ರಷ್ಟು ಲಾಭಾಂಶವನ್ನು ಜನಪರ ಉಪಯೋಗಕ್ಕೆ ವಿನಿಯೋಗ ಮಾಡಲಾಗುತ್ತದೆ ಎಂದು ಹೇಳಿದರು.
ಉದ್ಯಮಿಗಳಾದ ವಿನೋದ್ ತರ್ಮಲ್, ಓರೇಂಜ್ ವ್ಯಾಲಿ ಖಾಸಗಿ ರೆಸಾರ್ಟ್ನ ಮಾಲೀಕ ಮನೋಜ್ ಕುಮಾರ್ ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರಮುಖರಿಂದ ಬ್ಯಾಂಕ್ ಕಚೇರಿ ಉದ್ಘಾಟನೆಗೊಂಡಿತು. ಪಾಲುದಾರರಾದ ಭಗವತಿ ಆಟೋ ವರ್ಕ್ಸ್ನ ಮಾಲೀಕ ಸುಮೇಶ್, ಬಿ.ಎಸ್.ಎನ್.ಎಲ್, ಮಾಜಿ ಸಿಬ್ಬಂದಿಗಳಾದ ಪದ್ಮನಾಭ ಕಚೇರಿ ಬ್ಯಾಂಕಿAಗ್ ವಿಭಾಗವನ್ನು ಉದ್ಘಾಟಿಸಿದರು. ಪುರಸಭೆಯ ಸದಸ್ಯರಾದ ಹೆಚ್.ಎಸ್. ಮತೀನ್ ೧೦೦೦ ರೂ. ನೀಡಿ ಬ್ಯಾಂಕ್ನ ಪ್ರಪ್ರಥಮ ಷೇರನ್ನು ಖರೀದಿಸಿ ಶುಭಕೋರಿದರು.
ಉದ್ಯಮಿಗಳಾದ ಕಾಣತಂಡ ಜಗದೀಶ್, ಪುರಸಭೆಯ ಸದಸ್ಯರಾದ ಅಗಸ್ಟೀನ್ ಬೆನ್ನಿ, ಸಿ.ಕೆ. ಪ್ರಥ್ವಿನಾಥ್, ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯದ ಅಧ್ಯಕ್ಷ ಟಿ.ಕೆ. ರಾಜನ್, ಮುತ್ತಪ್ಪ ಓಣಂ ಆಚರಣಾ ಸಮಿತಿಯ ಅಧ್ಯಕ್ಷ ಪದ್ಮನಾಭ ಟಿ.ಕೆ, ಹಿಂದೂ ಮಲಯಾಳಿ ಅಸೋಶಿಯೇಷನ್ ಅಧ್ಯಕ್ಷ ಎ. ವಿನೂಪ್ ಕುಮಾರ್, ಎಸ್.ಎನ್.ಡಿ.ಪಿ ವೀರಾಜಪೇಟೆ ಶಾಖೆಯ ಅಧ್ಯಕ್ಷ ಟಿ.ಎ. ನಾರಾಯಣ ಮತ್ತು ಹಿಂದೂ ಮಲಯಾಳಿ ಮಹಿಳಾ ಅಸೋಶಿಯೇಷನ್ನ ಅಧ್ಯಕ್ಷ ಶೀಭಾ ಪ್ರಥ್ವಿನಾಥ್, ಬ್ಯಾಂಕ್ನ ಸಿಬ್ಬಂದಿಗಳು ಆಡಳಿತ ಮಂಡಳಿಯ ಸದಸ್ಯರು, ಸಾರ್ವಜನಿಕರು ಬ್ಯಾಂಕ್ ಉದ್ಘಾಟನೆ ವೇಳೆಯಲ್ಲಿ ಹಾಜರಿದ್ದರು.