ಸೋಮವಾರಪೇಟೆ, ಆ. ೧೮: ಕೊಡಗು ಜಿಲ್ಲಾ ಪೊಲೀಸರ ವಿರುದ್ಧ ಇಂದಿಲ್ಲಿ ತೀವ್ರ ವಾಗ್ದಾಳಿ ನಡೆಸಿದ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪೊಲೀಸರ ವೈಫಲ್ಯವನ್ನು ಖಂಡಿಸಿ ತಾ. ೨೬ರಂದು ಎಸ್.ಪಿ. ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಅಂದು ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಬರಬೇಕೆಂದು ಕರೆ ನೀಡಿದರು.

ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮಳೆಯಿಂದ ಹಾನಿಗೀಡಾದ ಕೊಡಗಿನ ಪ್ರದೇಶಗಳನ್ನು ವೀಕ್ಷಿಸಲು ಆಗಮಿಸಿದ ಸಂದರ್ಭ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಪ್ರತಿಭಟನೆ ನಡೆಸುತ್ತಿದ್ದಾರೆ. ತಾವು ತೆರಳುವ ಕಡೆಗಳಲ್ಲಿ ಪ್ರತಿಭಟಿಸುತ್ತಿದ್ದರೂ ಕೊಡಗಿನ ಪೊಲೀಸ್ ವ್ಯವಸ್ಥೆ ಕಣ್ಮುಚ್ಚಿ ಕುಳಿತಿದೆ.

(ಮೊದಲ ಪುಟದಿಂದ) ಇದನ್ನು ಖಂಡಿಸಿ ತಾ. ೨೬ರಂದು ಮಡಿಕೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇನೆ. ತಾವೆಲ್ಲರೂ ಬರಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು. ‘ತಾನು ಭೇಟಿ ನೀಡಿದ ಸಂದರ್ಭ ಆರ್‌ಎಸ್‌ಎಸ್‌ನವರು ಗೂಂಡಾ ರೀತಿ ವರ್ತಿಸಿದ್ದಾರೆ. ಪೊಲೀಸರು ಅವರೊಂದಿಗೆ ಶಾಮೀಲಾಗಿದ್ದಾರೆ.

ತಿತಿಮತಿಯಲ್ಲಿ, ಮಡಿಕೇರಿ, ಕುಶಾಲನಗರದಲ್ಲಿ ಪ್ರತಿಭಟಿಸಿದ್ದಾರೆ. ಪೊಲೀಸರು ಏನ್ ಮಾಡ್ತಿದ್ದರು. ಅವರನ್ನು ಅರೆಸ್ಟ್ ಮಾಡೋಕೆ ಆಗಲ್ವಾ ಇವರಿಗೆ. ಪೊಲೀಸರು ಏನ್ ತಿಳ್ಕೊಂಡಿದ್ದಾರೆ ನಮ್ಮನ್ನ?’ ಎಂದು ಕೆಂಡಾಮAಡಲರಾದರು.

‘ಬಿಜೆಪಿಯವರೇನು ಅಧಿಕಾರದಲ್ಲಿ ಗೂಟ ಹೊಡೆದುಕೊಂಡು ರ‍್ತಾರಾ? ಆರೇಳು ತಿಂಗಳಾದ್ಮೇಲೆ ನಾವೇ ರ‍್ತೀವಿ. ನಮಗೆ ಗೊತ್ತಿದೆೆ ಏನು ಮಾಡಬೇಕೂಂತ, ಕಾನೂನು ಪರಿಪಾಲನೆ ಪೊಲೀಸರ ಕರ್ತವ್ಯ. ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಬೀದಿಯಲ್ಲಿ ಬಿಟ್ಟು ಆಟ ಆಡ್ತಿದ್ದೀರಾ? ನಮ್ ಕಾರ್ಯಕರ್ತರಿಗೆ ಹಾಗೆ ಮಾಡೋಕೆ ಬರೋದಿಲ್ವಾ? ಅವರ ಮಿನಿಸ್ಟರ್ ಬರುವಾಗ ನಮ್ ಕಾರ್ಯಕರ್ತರಿಗೆ ಹೀಗೆ ಮಾಡೋಕೆ ಗೊತ್ತಿಲ್ವಾ?’ ಎಂದು ಕಿಡಿಕಾರಿದರು. ‘ನಾನು ವಿರೋಧ ಪಕ್ಷದ ನಾಯಕ, ನನಗೆ ಹೇಗೆ ಭದ್ರತೆ ಕೊಡ್ಬೇಕೂಂತ ಪೊಲೀಸರಿಗೆ ಗೊತ್ತಿಲ್ವಾ? ತಾ. ೨೬ರಂದು ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕ್ತೀನಿ. ಎಸ್‌ಪಿ ವಿರುದ್ಧ ಪ್ರತಿಭಟನೆ ಮಾಡ್ತೀವಿ.

ಬಿಜೆಪಿಯವರೊಂದಿಗೆ ಪೊಲೀಸರು ಶಾಮೀಲಾಗಿ ಗಲಾಟೆ ಮಾಡೋಕೆ ಬಿಟ್ಟಿದ್ದಾರೆ. ಕೊಡ್ಲಿಪೇಟೆಯಲ್ಲಿ, ಸೋಮವಾರಪೇಟೆಯಲ್ಲಿ ಗಲಾಟೆ ಮಾಡೋಕೆ ನಿಂತಿದ್ದಾರೆ. ನೀವೆಲ್ಲಾ ನಡೀರಿ ಅಲ್ಲಿಗೆ. ಏನ್ ಆಗುತ್ತೋ ನೋಡೇ ಬಿಡೋಣ’ ಎಂದು ಸವಾಲು ಹಾಕಿದರು. ‘ಆರ್‌ಎಸ್‌ಎಸ್‌ನವರ ಗೊಡ್ಡು ಬೆದರಿಕೆಗೆ ನಾವ್ ಹೆದರಲ್ಲ. ಕಾಂಗ್ರೆಸ್ ಕಾರ್ಯಕರ್ತರು ಬಳೆ ತೊಟ್ಟುಕೊಂಡಿಲ್ಲ. ಪೊಲೀಸರು ಕಾನೂನು ಪ್ರಕಾರ ಕೆಲಸ ಮಾಡಬೇಕು.

ಇಲ್ಲಾಂದ್ರೆ ಏನ್ ಮಾಡ್ಬೇಕೂಂತ ನಮಗೂ ಗೊತ್ತಿದೆ; ನಾವ್ ಸುಮ್ನೆ ಕೂತರ‍್ತೀವಾ.., ಇಡೀ ರಾಜ್ಯದಲ್ಲಿ ಬೆಂಕಿ ಹಚ್ತೀವಿ’ ಎಂದು ಸಿದ್ದರಾಮಯ್ಯ ಅವರು ಪೊಲೀಸ್ ಇಲಾಖೆ, ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ಕಿಡಿಕಾರಿದರು. ನೂರಕ್ಕೆ ನೂರು ಬಿಜೆಪಿಯವರು ಮುಂದಿನ ಚುನಾವಣೆಯಲ್ಲಿ ಸೋಲ್ತಾರೆ, ಕೊಡಗಿನ ಎರಡೂ ಕ್ಷೇತ್ರದಲ್ಲಿ ನಾವೇ ಗೆಲ್ತೀವಿ. ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಸಂಕಲ್ಪ ಮಾಡಬೇಕು’ ಎಂದು ಕರೆ ನೀಡಿದರು.