ಶ್ರೀಮಂಗಲ, ಆ. ೧೯: ಭಾರತ ಸ್ವತಂತ್ರವಾದ ೭೫ ವರ್ಷಗಳು ಕಳೆದ ಸಂಭ್ರಮದ ಸಂದರ್ಭದಲ್ಲಿ ಹಾಗೂ ಕೊಡಗನ್ನು ಬಲವಂತದಿAದ ಕರ್ನಾಟಕಕ್ಕೆ ವಿಲೀನಗೊಳಿಸಿಕೊಂಡ ೬೮ ವರ್ಷಗಳ ಕರಾಳ ನೆನಪಿನ ಹೊಸ್ತಿಲಲ್ಲಿ, ರಾಜ್ಯ ಸರ್ಕಾರವು ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ನೀಡಿದ ಜಾಹಿರಾತಿನಲ್ಲಿ ಕೊಡಗಿನ ಯಾವುದೇ ನೈಜ ಸ್ವಾತಂತ್ರ‍್ಯ ಹೋರಾಟಗಾರರ ಹೆಸರನ್ನು ಪ್ರಕಟಿಸದೆ, ಕೊಡಗಿನ ಸಮಸ್ತ ಸ್ವಾತಂತ್ರ‍್ಯ ಹೋರಾಟಗಾರರಿಗೆ ಉದ್ದೇಶ ಪೂರ್ವಕವಾಗಿ ಅಪಮಾನ ಮಾಡುವ ಮೂಲಕ ತಮ್ಮ ಅವಿವೇಕತನವನ್ನು ಪ್ರದರ್ಶಿಸಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಕೊಡವರಿಗೆ ವಿಶ್ವಾಸ ದ್ರೋಹ ಎಸಗಿರುವ ಇಲ್ಲಿನ ಮೂವರೂ ಜನಪ್ರತಿನಿಗಳ ನಡೆಯನ್ನು ಯುನೈಟೆಡ್ ಕೊಡವ ಆರ್ಗನೈ ಜೇಷನ್ - ಯುಕೊ ತೀವ್ರವಾಗಿ ಖಂಡಿಸುತ್ತದೆ ಹಾಗೂ ಸರ್ಕಾರವು ಕೂಡಲೇ ಈ ವಿಷಯದಲ್ಲಿ ಕ್ಷಮೆಯಾಚಿಸಬೇಕು ಹಾಗೂ ಜಾಹೀ ರಾತನ್ನು ಹಿಂಪಡೆ ಯಬೇಕು. ಅಲ್ಲದೆ ಜನಪ್ರತಿನಿಧಿಗಳು ಉತ್ತರಿಸಬೇಕು ಎಂದು ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಲಿಖಿತ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ದೇಶದ ಸ್ವಾತಂತ್ರ‍್ಯ ಹೋರಾಟದ ಇತಿಹಾಸದಲ್ಲಿ ಕೊಡಗು ಒಂದು ಅಳಿಸಲಾಗದ ಅಧ್ಯಾಯ ಎಂಬುವು ದನ್ನು ಈ ರಾಜ್ಯ ಸರ್ಕಾರ ಮರೆ ತಂತಿದೆ. ರಾಷ್ಟಿçÃಯತೆಯನ್ನೇ ರಕ್ತದಲ್ಲಿ ಹಂಚಿಕೊAಡು ಹುಟ್ಟಿರುವವರು ಕೊಡವರು. ಆದರೆ ಕೇವಲ ಕೊಡವರು ಎನ್ನುವ ಕಾರಣಕ್ಕೆ ಕೊಡಗಿನ ಸ್ವಾತಂತ್ರ‍್ಯ ಹೋರಾಟ ಗಾರರನ್ನು ನೇರವಾಗಿ ಕಡೆಗಣನೆ ಮಾಡಲಾಗುತ್ತಿದೆ, ಇದು ಇಂದಿನ ಸರ್ಕಾರದ ಮನೋಸ್ಥಿತಿಗೆ ಹಾಗೂ ಇಲ್ಲಿನ ಜನಪ್ರತಿನಿಧಿಗಳ ಬೇಜವಾ ಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಅಭಿಪ್ರಾಯಪಟಿದ್ದಾರೆ. ಕೊಡಗಿನ ಗಾಂಧಿ ಎಂದೇ ಪರಿಚಿತರಾದ, ತಮ್ಮ ಬದುಕು ಹಾಗೂ ಸಂಸಾರವನ್ನೇ ದೇಶದ ಸ್ವಾತಂತ್ರ‍್ಯಕ್ಕಾಗಿ ಸಮರ್ಪಿಸಿದ ಮಹಾನ್ ತ್ಯಾಗಿ ಪಂದ್ಯAಡ ಬೆಳ್ಯಪ್ಪ ಹಾಗೂ ಸೀತಾ ಬೆಳ್ಯಪ್ಪ ದಂಪತಿ, ಹುಬ್ಬಳ್ಳಿ ಹುಲಿ ಎಂದೇ ಖ್ಯಾತರಾಗಿ ಬ್ರಿಟಿಷರ ನಿದ್ದೆಗೆಡಿಸಿದ್ದ ಚೆಕ್ಕೇರ ಮೊಣ್ಣಯ್ಯ, ಕೆಚ್ಚೆದೆಯ ಮಲ್ಲೇಂಗಡ ಚಂಗಪ್ಪ, ಕೊಳ್ಳಿಮಾಡ ಕರುಂಬಯ್ಯ ಮುಂತಾದವರ ನಾಯಕತ್ವದಲ್ಲಿ ಇಲ್ಲಿನ, ಅಮ್ಮಕೊಡವ, ಹೆಗ್ಗಡೆ, ಕೋಯವ, ಐರಿ ಜನಾಂಗದವರು ಸೇರಿದಂತೆ ಮುಸ್ಲಿಮರು, ಎರವರು ಕುಡಿಯ ರಾದಿಯಾಗಿ ಇಲ್ಲಿನ ಮೂಲನಿವಾಸಿ ಜನಾಂಗದವರೇ ಇಲ್ಲಿನ ಸ್ವಾತಂತ್ರ‍್ಯ ಹೋರಾಟದ ಮುಂಚೂಣಿ ಯಲ್ಲಿದ್ದವರು. ಹದಿಹರೆಯದಲ್ಲೇ ಸ್ವಾತಂತ್ರ‍್ಯ ಕ್ಕಾಗಿ ದೇಹ ತ್ಯಾಗವನ್ನೇ ಮಾಡುವಷ್ಟರ ಮಟ್ಟಿಗೆ ಸ್ವಾತಂತ್ರ‍್ಯದ ಕಿಚ್ಚನ್ನು ತಮ್ಮ ಒಡಲಲ್ಲಿ ಧರಿಸಿದ್ದ ಕೋಳೆರ ಕಾವೇರಿ ಹಾಗು ಪೋಡಮಾಡ ಜಾನಕಿ ಎಂಬ ಪುಟ್ಟ ಹೆಣ್ಣುಮಕ್ಕಳ ತ್ಯಾಗ ಬಲಿದಾನ ಮರೆಯಲಾಗದ್ದು. ಈ ಕುರಿತಂತೆ ಯುಕೊ ಸಂಘಟನೆ ಜನಜಾಗೃತಿ ಅಭಿಯಾನ ಕೈಗೊಳ್ಳಲಿದ್ದು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಮೊದಲ ಹಂತದಲ್ಲಿ, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮುಂದಿನ ತಾ. ೨೨ ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಿಗ್ಗೆ ೯ ಗಂಟೆಯಿAದ ಸಂಜೆ ೫ ಗಂಟೆಯ ವರೆಗೆ ಸಾಂಕೇತಿಕವಾಗಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಳ್ಳ ಲಾಗುವುದು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟವನ್ನು ರೂಪಿಸಲಾಗುವುದು. ಅವಶ್ಯಕತೆ ಬಂದರೆ ಕಾನೂನು ಹೋರಾಟವನ್ನೂ ಸಹ ನಡೆಸಲಾಗುವುದೆಂದು ಮಾಹಿತಿ ನೀಡಿದರು.