ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಸೇರಿ ೧೫ ಮಂದಿ ವಿರುದ್ಧ ಮೊಕದ್ದಮೆ
ನವದೆಹಲಿ, ಆ. ೧೯: ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಕ್ಕೆ ಸಂಬAಧಿಸಿದAತೆ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ೧೫ ಮಂದಿ ವಿರುದ್ಧ ಮೊಕದ್ದಮೆ ದಾಖಲಿಸಿದೆ. ಹಗರಣಕ್ಕೆ ಸಂಬAಧಿಸಿದAತೆ ಸಿಬಿಐ ಇಂದು ಸಿಸೋಡಿಯಾ ಅವರ ನಿವಾಸ ಸೇರಿದಂತೆ ೨೧ ಸ್ಥಳಗಳಲ್ಲಿ ಶೋಧ ನಡೆಸಿದೆ. ಕಳೆದ ವರ್ಷ ನವೆಂಬರ್ನಲ್ಲಿ ಹೊರತಂದ ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಸಿಬಿಐ ೧೫ ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಈ ಸಂಬAಧ ಎಎಪಿ ನಾಯಕನ ಮನೆ, ಐಎಎಸ್ ಅಧಿಕಾರಿ ಮತ್ತು ಮಾಜಿ ಅಬಕಾರಿ ಆಯುಕ್ತ ಅರವ್ ಗೋಪಿ ಕೃಷ್ಣ ಅವರ ನಿವಾಸ ಮತ್ತು ಇತರ ೧೯ ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಇನ್ನಿಬ್ಬರು ಅಧಿಕಾರಿಗಳ ನಿವೇಶನಗಳನ್ನೂ ಶೋಧಿಸಲಾಗಿದೆ ಎಂದು ಅಧಿಕಾರಿ ಗಳು ಹೇಳಿದ್ದಾರೆ. ಸಿಬಿಐ ಅಧಿಕಾರಿಗಳು ಇಂದು ಬೆಳಿಗ್ಗೆ ಸಿಸೋಡಿಯಾ ಅವರ ನಿವಾಸವನ್ನು ತಲುಪುತ್ತಿದ್ದಂತೆ, ಸಿಬಿಐಗೆ ಸ್ವಾಗತ. ಆದರೆ ಪಿತೂರಿಗಳು ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ ಮತ್ತು ಉತ್ತಮ ಶಿಕ್ಷಣವನ್ನು ನೀಡುವ ಕೆಲಸದಲ್ಲಿ ಮುಂದುವರಿಯುವ ನಮ್ಮ ಸಂಕಲ್ಪವನ್ನು ತಡೆಯುವುದಿಲ್ಲ ಎಂದು ದೆಹಲಿ ಡಿಸಿಎಂ ಟ್ವೀಟ್ ಮಾಡಿದ್ದರು. ಮತ್ತೊಂದೆಡೆ, ಬಿಜೆಪಿ ಸಹ ದೆಹಲಿ ಉಪಮುಖ್ಯಮಂತ್ರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅಬಕಾರಿ ಖಾತೆ ಯನ್ನು ಹೊಂದಿರುವ ಸಿಸೋಡಿಯಾ ಅವರು "ಎಕ್ಸ್ಯೂಸ್ ಮಂತ್ರಿ" ಆಗಿದ್ದಾರೆ. "ಮದ್ಯ ಪರವಾನಗಿ ಮತ್ತು ಅದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ. ಕೇಜ್ರಿವಾಲ್ ಸರ್ಕಾರ ನೂರಾರು ಕೋಟಿ ರೂಪಾಯಿಗಳ ಮದ್ಯದ ಹಗರಣದಲ್ಲಿ ಭಾಗಿಯಾಗಿದೆ ಎಂದು ದೆಹಲಿ ಬಿಜೆಪಿ ಆರೋಪಿಸಿದೆ.
ಇತರ ಪಕ್ಷಗಳು ಬಯಸಿದರೆ ನಿತೀಶ್ ಪ್ರಧಾನಿ ಅಭ್ಯರ್ಥಿ: ಜೆಡಿಯು
ನವದೆಹಲಿ, ಆ. ೧೯: ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಎಂಬ ಊಹಾಪೋಹ ಹರಡಿರುವಂತೆಯೇ, ಒಂದುವೇಳೆ ಇತರ ಪಕ್ಷಗಳು ಬಯಸಿದರೆ ಇದು ಪರ್ಯಾಯ ಆಯ್ಕೆಯಾಗಬಹುದು ಎಂದು ಜೆಡಿಯು ಶುಕ್ರವಾರ ಹೇಳಿದೆ. ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳನ್ನು ಒಗ್ಗೂಡಿಸಲು ನಿತೀಶ್ ಕುಮಾರ್ ಗಮನ ಹರಿಸಿದ್ದಾರೆ. ಮುಂದಿನ ವಾರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವಿಶ್ವಾಸ ಮತ ಯಾಚನೆ ಬಳಿಕ ವಿವಿಧ ಪಕ್ಷಗಳ ಮುಖಂಡರ ಭೇಟಿಯಾಗಿ ನಿತೀಶ್ ಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಜೆಡಿಯು ಅಧ್ಯಕ್ಷ ಲಾಲನ್ ಸಿಂಗ್ ಹೇಳಿದ್ದಾರೆ. ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ ಹೆಚ್ಚಿನ ವರ್ಷ ಆಡಳಿತ ನಡೆಸಿದ್ದಾರೆ. ಆದರೆ, ಅವರು ಪ್ರತಿಪಕ್ಷಗಳ ಪ್ರಧಾನ ಮಂತ್ರಿ ಅಭ್ಯರ್ಥಿ ಅಲ್ಲ. ಇತರ ಪಕ್ಷಗಳು ಬಯಸಿದರೆ ನಂತರ ಪ್ರಧಾನಿ ಅಭ್ಯರ್ಥಿಯಾಗಬಹುದು ಎಂದು ಅವರ ಆಪ್ತರಾಗಿರುವ ಸಿಂಗ್ ತಿಳಿಸಿದರು. ಬಿಹಾರದಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡ ನಂತರ ಶರದ್ ಪವಾರ್, ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ಮಂದಿ ನಿತೀಶ್ ಕುಮಾರ್ಗೆ ಕರೆ ಮಾಡಿ ಅಭಿನಂದಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿಯನ್ನು ಎದುರಿಸಲು ಎಲ್ಲ ಪ್ರತಿಪಕ್ಷಗಳು ಒಟ್ಟಾಗಿ ಕುಳಿತು ನಾಯಕತ್ವದ ಬಗ್ಗೆ ನಿರ್ಧರಿಸಬೇಕಾಗಿದೆ ಎಂದರು. ಬಿಜೆಪಿಯನ್ನು ಸೋಲಿಸಲು ಎಲ್ಲಾ ಪ್ರತಿಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕಿದೆ. ನಂತರ ತಮ್ಮ ನಾಯಕ ಯಾರು ಎಂಬುದನ್ನು ನಿರ್ಧರಿಸಬೇಕಾಗಿದೆ. ಎರಡು ಆಯ್ಕೆಗಳಿವೆ. ಬಿಜೆಪಿ ವಿರುದ್ಧ ಹೋರಾಡಲು ಎಲ್ಲಾ ಪ್ರತಿಪಕ್ಷಗಳನ್ನು ಒಂದುಗೂಡಿಸುವ ಕಾರ್ಯವನ್ನು ನಿತೀಶ್ ಕುಮಾರ್ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಮುಂಬೈನಲ್ಲಿ ಅದ್ದೂರಿ ದಹಿಹಂಡಿ ಕಾರ್ಯಕ್ರಮ; ೨೪ ಮಂದಿಗೆ ಗಾಯ!
ಮುಂಬೈ, ಆ. ೧೯: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಹಾರಾಷ್ಟçದಲ್ಲಿ ಅದ್ದೂರಿಯಾಗಿ ದಹಿ ಹಂಡಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಮುಂಬೈನಲ್ಲಿ ಸಂಭ್ರಮಾಚರಣೆ ಎಂದಿಗಿAತಲೂ ಹೆಚ್ಚಾಗಿದೆ. ೨ ವರ್ಷಗಳ ಬಳಿಕ ಮೊದಲ ಬಾರಿಗೆ ದಹಿಹಂಡಿ ಉತ್ಸವ ನಡೆಯುತ್ತಿದ್ದು, ಯುವಕರು ಅಲಂಕಾರ ಮಾಡಿಕೊಂಡು, ಮೇಲೆ ಕಟ್ಟಿರುವ ಗಡಿಗೆಯನ್ನು ಮಾನವ ಪಿರಮಿಡ್ ಮೂಲಕ ಏರಿ ಒಡೆದು ಸಂಭ್ರಮಿಸುತ್ತಾರೆ. ಒಗ್ಗಟ್ಟಿನಲ್ಲಿ ವಿಜಯವಿದೆ ಎಂಬುದರ ಸಂಕೇತವಾಗಿ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಬಾರಿ ನಡೆದ ದಹಿಹಂಡಿ ಕಾರ್ಯಕ್ರಮದಲ್ಲಿ ಅವಘಡ ಉಂಟಾಗಿ ೨೪ ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಈ ಪೈಕಿ ೧೯ ಮಂದಿಯನ್ನು ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಮಾಡಲಾಗಿದ್ದರೆ, ಐವರು ಇನ್ನೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ, ಚಿಕಿತ್ಸೆ ಪಡೆಯುತ್ತಿ ರುವವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ದಹಿ ಹಂಡಿ ಒಡೆಯುವುದಕ್ಕೆ ಪೈಪೋಟಿ ಇರಲಿದ್ದು, ಬಹುಮಾನವನ್ನು ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ವೇಷ ಧರಿಸಿದ ಯುವಕರು ಕೃಷ್ಣ ಜನ್ಮಾಷ್ಟಮಿಯಂದು ದಹಿಹಂಡಿ ಒಡೆಯುವ ಕಾರ್ಯಕ್ರಮದಲ್ಲಿ ಸಂಭ್ರಮದಿAದ ಪಾಲ್ಗೊಳ್ಳುತ್ತಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಗಳು ಆರು ದಿನ ಎನ್ಐಎ ಕಸ್ಟಡಿಗೆ
ಮಂಗಳೂರು, ಆ. ೧೯: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ರಾಷ್ಟಿçÃಯ ತನಿಖಾ ದಳ ಐವರು ಪ್ರಮುಖ ಆರೋಪಿಗಳನ್ನು ಆರು ದಿನಗಳ ಕಾಲ ಕಸ್ಟಡಿಗೆ ಪಡೆದಿದೆ. ರಾಜ್ಯ ಪೊಲೀಸರು ಕಸ್ಟಡಿ ತನಿಖೆಯನ್ನು ಆಗಸ್ಟ್ ೧೬ ರಂದು ಪೂರ್ಣಗೊಳಿಸಿದ ನಂತರ, ಆಗಸ್ಟ್ ೨೩ ರವರೆಗೂ ಆರೋಪಿಗಳನ್ನು ತನ್ನ ವಶಕ್ಕೆ ನೀಡುವಂತೆ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ ೨೬ ರಂದು ನಡೆದಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳಾದ ನೌಪಾಲ್ (೨೮) ಸೈನುಲ್ ಅಬಿದ್ (೨೨), ಮೊಹಮ್ಮದ್ ಸೈಯದ್ (೩೨), ಅಬ್ದುಲ್ ಬಶೀರ್ (೨೯) ಮತ್ತು ರಿಯಾಜ್ (೨೭) ಅವರನ್ನು ಎನ್ಐಎ ಕಸ್ಟಡಿಗೆ ಪಡೆದುಕೊಂಡಿದೆ. ಕೊಲೆಗೆ ಸಂಬAಧಿಸಿದAತೆ ಸುಳ್ಯದ ಬೆಳ್ಳಾರೆ ಪೊಲೀಸರು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಲಾಗಿತ್ತು. ಜುಲೈ ೨೬ ರಂದು ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಚಿಕನ್ ಸ್ಟಾಲ್ ಮುಚ್ಚಿ ಮನೆಗೆ ಮರಳಲು ಮುಂದಾದಾಗ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಲಾಗಿತ್ತು.
‘ನನಗೆಷ್ಟು ಹಕ್ಕು ಇದೆಯೋ ನಿಮಗೂ ಅಷ್ಟೇ ಹಕ್ಕು ಇದೆ’: ಹಿಂದೂಗಳಿಗೆ ಬಾಂಗ್ಲಾ ಪ್ರಧಾನಿ
ಢಾಕಾ, ಆ. ೧೯: ಬಾಂಗ್ಲಾ ದೇಶದಲ್ಲಿರುವ ಹಿಂದೂ ಸಮುದಾಯಕ್ಕೆ ನನಗೆ ಇರುವ ಹಕ್ಕುಗಳೇ ಇವೆ ಎಂದು ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ದುರ್ಗಾಪೂಜೆ ಹಬ್ಬದ ಆಚರಣೆಯಲ್ಲಿ ಪಶ್ಚಿಮ ಬಂಗಾಳಕ್ಕಿAತಲೂ ಢಾಕಾದಲ್ಲಿ ಹೆಚ್ಚಿನ ಮಂಟಪಗಳಿರುತ್ತದೆ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಪ್ರತಿಪಾದಿಸಿದ್ದಾರೆ. ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಹಿಂದೂ ಸಮುದಾಯದೊಂದಿಗೆ ಸಂವಹನ ನಡೆಸಿರುವ ಹಸೀನಾ, ಸಮುದಾಯದ ಮಂದಿ ಅಲ್ಪಸಂಖ್ಯಾತರೆAದು ಭಾವಿಸಿಕೊಳ್ಳಬಾರದು ಬಾಂಗ್ಲಾದೇಶದಲ್ಲಿ ಧರ್ಮಗಳನ್ನು ಲೆಕ್ಕಿಸದೇ ಎಲ್ಲರೂ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ನಾವು ಎಲ್ಲಾ ಧರ್ಮ, ಮತೀಯರೂ ಸಮಾನ ಹಕ್ಕುಗಳನ್ನು ಹೊಂದಿರುವುದನ್ನು ಬಯಸುತ್ತೇವೆ. ನೀವು ಈ ದೇಶದ ಜನರು, ನನಗೆ ಎಷ್ಟು ಹಕ್ಕು ಇದೆಯೋ ಅಷ್ಟೇ ಹಕ್ಕು ಇಲ್ಲಿ ನಿಮಗೂ ಇದೆ ಎಂದು ಹಿಂದೂ ಸಮುದಾಯಕ್ಕೆ ಶೇಖ್ ಹಸೀನಾ ಹೇಳಿರುವುದನ್ನು ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. ಢಾಕಾದಲ್ಲಿರುವ ಢಾಕೇಶ್ವರಿ ಮಂದಿರದಲ್ಲಿ ಹಾಗೂ ಚಟ್ಟೋಗ್ರಾಮ್ನಲ್ಲಿರುವ ಜೆಎಂ ಸೇನ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಂಗ್ಲಾ ಪ್ರಧಾನಿ ವರ್ಚ್ಯುಯಲ್ ಆಗಿ ಭಾಗವಹಿಸಿದ್ದರು. ದುರ್ಗಾ ಪೂಜೆ ಹಬ್ಬದ ಆಚರಣೆಯಲ್ಲಿ ಪಶ್ಚಿಮ ಬಂಗಾಳ ಕ್ಕಿಂತಲೂ ಢಾಕಾದಲ್ಲಿ ಹೆಚ್ಚಿನ ಮಂಟಪಗಳಿರುತ್ತದೆ ಎಂದು ಹೇಳಿರುವ ಬಾಂಗ್ಲಾ ಪ್ರಧಾನಿ, ಯಾವುದೇ ಅಹಿತಕರ ಘಟನೆ ಸಂಭವಿಸಿದಾಗಲೆಲ್ಲಾ, ಅದನ್ನು ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಯಾವುದೇ ಹಕ್ಕುಗಳಿಲ್ಲ ಎಂಬAತೆ ತೋರಿಸಲಾಗುತ್ತದೆ ಎಂದು ಬಾಂಗ್ಲಾ ಪ್ರಧಾನಿ ವಿಷಾದ ವ್ಯಕ್ತಪಡಿಸಿದ್ದಾರೆ.