ಮಡಿಕೇರಿ, ಆ. ೧೮: ಕರ್ನಾಟಕ ಜನಪದ ಅಕಾಡೆಮಿ ಪ್ರಶಸ್ತಿಗೆ ಯವಕಪಾಡಿಯ ಜನಪದ ಹಾಡುಗಾರ್ತಿ ಕುಡಿಯರ ಸಿ. ದೇವಕಿ ಅವರು ಆಯ್ಕೆಯಾಗಿದ್ದಾರೆ.

ಕೊಡವ, ಕನ್ನಡ ಭಾಷೆ ಸೇರಿದಂತೆ ಜನಪದ ಹಾಡುಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ದೇವಕಿ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿರುವ ರಾಜ್ಯದ ಹಲವು ಕಲಾವಿದರ ಪೈಕಿ ಒಬ್ಬರಾಗಿದ್ದಾರೆ. ಈ ಪ್ರಶಸ್ತಿ ನಗದು ಹಾಗೂ ಪಾರಿತೋಷಕವನ್ನು ಒಳಗೊಂಡಿದ್ದು, ಸದ್ಯದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಜನಪದ ಅಕಾಡೆಮಿ ಸದಸ್ಯೆ ಕುಡಿಯರ ಬೋಜಕಿ ಅವರು ತಿಳಿಸಿದ್ದಾರೆ.