ಸಿದ್ದಾಪುರ/ಪಾಲಿಬೆಟ್ಟ ಆ ೧೯: ಕಡವೆಯನ್ನು ಬೇಟೆ ಮಾಡಿ ಸಾಯಿಸಿ ಮಾಂಸ ಮಾಡಿದ ಈರ್ವರನ್ನು ಬಂಧಿಸುವಲ್ಲಿ ವೀರಾಜಪೇಟೆ ಹಾಗೂ ಮಡಿಕೇರಿ ವಲಯ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ವೀರಾಜಪೇಟೆ ತಾಲೂಕು ವ್ಯಾಪ್ತಿಗೆ ಒಳಪಡುವ ಐಕೊಳ ಗ್ರಾಮದ ಅಬ್ದುಲ್ ಅಜೀಜ್ ಎಂಬವರ ಮನೆಯ ಹಿಂಭಾಗದ ಕುರುಚಲು ಕಾಡಿನಲ್ಲಿ ಶುಕ್ರವಾರದಂದು ಬೆಳಗ್ಗೆ ೯ ಗಂಟೆಯ ಸಮಯಕ್ಕೆ ಕಾಣಿಸಿಕೊಂಡಿದ್ದ ವನ್ಯ ಪ್ರಾಣಿ ಕಡವೆಯನ್ನು ಅಜೀಜ್ ಎಂಬಾತ ಗುಂಡು ಹಾರಿಸಿ ಸಾಯಿಸಿದ್ದಾನೆ. ನಂತರ ತನ್ನ ಸಹಚರ ಹಮೀದ್ ಜೊತೆ ಸೇರಿ ಕಡವೆಯನ್ನು ಮಾಂಸ ಮಾಡಿ ದಾಸ್ತಾನು ಮಾಡಿದ್ದಾರೆ.
ಈ ಬಗ್ಗೆ ಖಚಿತ ಸುಳಿವಿನ ಮೇರೆಗೆ ಧಾಳಿ ನಡೆಸಿದ ವೀರಾಜಪೇಟೆ ಹಾಗೂ ಮಡಿಕೇರಿ ಅರಣ್ಯ ವಲಯ ಅಧಿಕಾರಿಗಳು ಅಂದಾಜು ೬೦ ಕೆ.ಜಿ ಕಡವೆ ಮಾಂಸವನ್ನು ವಶಪಡಿಸಿಕೊಂಡು ಅಜೀಜ್ ಹಾಗೂ ಹಮೀದ್ ಈರ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿAದ ಕೃತ್ಯಕ್ಕೆ ಬಳಸಿದ ಒಂಟಿ ನಳಿಗೆ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣವನ್ನು ಮಡಿಕೇರಿ ಪ್ರಾದೇಶಿಕ ವಲಯಕ್ಕೆ ಹಸ್ತಾಂತರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾದ ಡಿ.ಎನ್ ಮೂರ್ತಿ ರವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ತಾಲೂಕು ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ
ಬಾಬು ಹಾಗೂ ಮಡಿಕೇರಿ ಉಪಸಂರಕ್ಷಣಾಧಿಕಾರಿ ಎ.ಟಿ ಪೂವಯ್ಯ, ವೀರಾಜಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ. ನೆಹರು, ಮಧುಸೂಧನ್ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ತಾಲೂಕು ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿ, ಸಂದೀಪ್ ಸೋಮಯ್ಯ, ಶ್ರೀಶೈಲಾ, ಮಲ್ಲಪ್ಪ ಮಾಲಿಗೌಡ್ರ, ಸಚಿನ್, ಆನಂದ, (ಮೊದಲ ಪುಟದಿಂದ) ಮೋನಿಶಾ, ಸಿಬ್ಬಂದಿಗಳಾದ ಅಕ್ಕಮ್ಮ, ಚಂದ್ರಶೇಖರ ಅಮರಗೋಳಾ, ಮಾಲತೇಶ್, ಅರುಣಾ ಸಿ., ನಾಗರಾಜ್, ಅನಿಲ್, ವಿಕಾಸ್, ಸುರೇಶ, ಚಾಲಕ ಅಶೋಕ್ ಹಾಗೂ ಮಡಿಕೇರಿ ವಲಯದ ಉಪ ವಲಯಾರಣ್ಯಾಧಿಕಾರಿ ಬಾಬು ರಾಥೋಡ, ಭವ್ಯ, ವಾಸು, ನಿಕಿಲ್ ಪಾಲ್ಗೊಂಡಿದ್ದರು. -ವರದಿ: ವಾಸು, ಪುತ್ತಂ ಪ್ರದೀಪ್