ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತಿದೆ. ಬರವಣಿಗೆಯ ಮೂಲಕ ಅಭಿವ್ಯಕ್ತಿಸುವ ವಿಷಯಗಳನ್ನು ಕೇವಲ ಒಂದು ಛಾಯಾಚಿತ್ರದಲ್ಲಿ ವಿವರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಒಂದು ಘಟನೆಯ ಅತ್ಯಮೂಲ್ಯ ದಾಖಲೆಯಾಗಿ ಛಾಯಾಚಿತ್ರ ಉಳಿದುಕೊಳ್ಳುತ್ತದೆ ಇಷ್ಟು ಮಾತ್ರವಲ್ಲ, ಗತಕಾಲದ ನೆನಪುಗಳು, ಸಂತಸದ ಕ್ಷಣಗಳು, ಸಂಭ್ರಮದ ಗಳಿಗೆಗಳು ಎಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡುವಲ್ಲಿ ಛಾಯಾಗ್ರಹಣದ ಪಾತ್ರ ಮಹತ್ವದ್ದು ಅಂತೆಯೇ ಛಾಯಾಗ್ರಾಹಕರಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನ .

ಛಾಯಾಚಿತ್ರದ ಮೂಲಕ ವಿಶ್ವವನ್ನು ಸಕಾರಾತ್ಮಕವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಆರಂಭವಾದ ವಿಶ್ವ ಛಾಯಾಗ್ರಹಣ ದಿನವನ್ನು ೧೯೩೯ರ ಆಗಸ್ಟ್ ೧೯ರಂದು ಮೊದಲ ಬಾರಿಗೆ ಆಚರಿಸಲಾಯಿತು. ಒಂದಲ್ಲ ಒಂದು ಕಾರಣಕ್ಕೆ ಪ್ರತಿಯೊಬ್ಬರು ಛಾಯಾಚಿತ್ರಗಾರರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಹಿಂದಿನ ದಿನಗಳಲ್ಲಿ ಇತ್ತು. ಉತ್ತಮ ಛಾಯಾಗ್ರಹಣಕ್ಕೆ ಒಂದು ಉತ್ತಮ ಕ್ಯಾಮರದ ಅವಶ್ಯಕತೆ ಇದೆ. ಇದೀಗ ವರ್ಣ ಚಿತ್ರಗಳ ಕಾಲ ಹಾಗೆಂದು ನೆರಳು ಬೆಳಕಿನ ಸಂಯೋಜನೆಯ ಕಪ್ಪು ಬಿಳುಪು ಚಿತ್ರಗಳಿಗೂ ಅಷ್ಟೇ ಮಹತ್ವವಿದೆ .ತಾಂತ್ರಿಕತೆಯಲ್ಲಿ ಬಹಳ ಮುಂದುವರೆದಿರುವುದರಿAದ ಹಿಂದೆ ದುಬಾರಿ ಬೆಲೆ ಕ್ಯಾಮರದಿಂದ ತೆಗೆದ ಫೋಟೋಕ್ಕಿಂತಲೂ ಇಂದಿನ ಕಡಿಮೆ ಬೆಲೆಯ ಮೊಬೈಲ್‌ನಲ್ಲಿ ತೆಗೆದ ಚಿತ್ರವು ಉತ್ತಮವಾಗಿರುತ್ತದೆ. ಛಾಯಾಗ್ರಹಣ ವಿಶೇಷ ಸಂಬAಧಗಳನ್ನು, ನೆನಪುಗಳನ್ನು ದಾಖಲೀಕರಿಸುವ ಒಂದು ಕಲೆ, ಛಾಯಾಗ್ರಹಣ ಆದಾಯ ತರುವ ವೃತ್ತಿ, ಇದು ಕಲೆಯೂ ಹೌದು ಹವ್ಯಾಸವೂ ಹೌದು, ಪ್ರತಿಭೆಯ ಸಮ್ಮೇಳನವು ಹೌದು ಫೋಟೋಗ್ರಾಫಿ ಕೆಲವರಿಗೆ ಹವ್ಯಾಸವಾದರೆ ಮತ್ತೆ ಕೆಲವರಿಗೆ ವೃತ್ತಿಯಾಗಿದೆ. ಹೀಗಾಗಿ ಇಬ್ಬರೂ ಪ್ರತ್ಯೇಕವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ. ಮದುವೆ ಇನ್ನಿತರೆ ಶುಭ ಸಮಾರಂಭಗಳÀಲ್ಲಿ ಪಾಲ್ಗೊಂಡು ಫೋಟೋ ತೆಗಿಯುವ ಫೋಟೋಗ್ರಾಫರ್, ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಫೋಟೋಗ್ರಾಫರ್‌ಗಳಲ್ಲಿ ವ್ಯತ್ಯಾಸಗಳಿವೆ. ಈ ಹಿಂದೆ ಕ್ಯಾಮರಾ ಹೊಂದಿದವರು ಮಾತ್ರ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದರು. ಇದೀಗ ಕಾಲ ಬದಲಾಗಿದೆ. ಎಲ್ಲರ ಕೈಯಲ್ಲೂ ಮೊಬೈಲ್ ಫೋನ್ ಇದೆ. ಇದರಿಂದÀ ಛಾಯಾಚಿತ್ರಗಳನ್ನು ತೆಗೆಯುವುದರ ಮೂಲಕ ಪ್ರತಿಯೊಬ್ಬರೂ ಛಾಯಾಚಿತ್ರಕರಾಗಿದ್ದಾರೆ. ಜಗತ್ತಿನ ವಿಸ್ಮಯ, ನೈಜ ಚಿತ್ರಣಗಳನ್ನು ಸೆರೆ ಹಿಡಿಯುವ ಛಾಯಾಗ್ರಹಣ ಅತ್ಯಂತ ಸವಾಲಿನ ಹಾಗೂ ಸೃಜನಾತ್ಮಕ ಕಲೆ ಸುಮಾರು ೧೦ ವರ್ಷಗಳ ಹಿಂದಿನವರೆಗೂ ಕ್ಯಾಮರಾ ವೃತ್ತಿಪರ ಸ್ವತ್ತಾಗಿತ್ತು. ಡಿಜಿಟಲ್ ತಂತ್ರಜ್ಞಾನದ ಮೂಲಕ ಇದು ಮೊಬೈಲ್‌ಗಳಿಗೆ ಇಳಿದದ್ದೇ ತಡ ದುಬಾರಿ ಕ್ಯಾಮರಾಗಳು ಮೂಲೆ ಗುಂಪಾದವು ಜನಸಾಮಾನ್ಯರ ಕೈಗೂ ಎಟುಕುವಂತಾದ ಬಳಿಕ ಇಲ್ಲದಂತಾಗಿದೆ ಇದರಿಂದಾಗಿ ವೃತ್ತಿಪರರು ಸಮಸ್ಯೆ ಎದುರಿಸುವಂತಾಗಿದೆ. ಎರಡು ವರ್ಷಗಳ ಕಾಲ ಕೋವಿಡ್ ಸಾಂಕ್ರಾಮಿಕ ಸೋಂಕಿನಿAದಾಗಿ ಛಾಯಾಗ್ರಾಹಕರು ಸಮಸ್ಯೆ ಎದುರಿಸಿದರು. ಕಾರ್ಯಕ್ರಮಗಳಿಲ್ಲದೆ ಛಾಯಾಚಿತ್ರ ತೆಗೆಯುವ ಕಾಯಕಕ್ಕೆ ಹೊಡೆತ ಬಿದ್ದಿದೆ. ಹಲವು ಛಾಯಾಗ್ರಾಹಕರು ತಮ್ಮ ವೃತ್ತಿಯನ್ನು ಬಿಟ್ಟು ಬೇರೆ ವೃತ್ತಿಯನ್ನು ಅವಲಂಬಿಸಿದ್ದಾರೆ.

ಹಾರ್ಡ್ ಡಿಸ್ಕ್ ನಂತಹ ಸಂಗ್ರಹಗಳ ಮೂಲಕ ಅಮೂಲ್ಯವಾದಂತಹ ಛಾಯಾಚಿತ್ರಗಳನ್ನು ಸಂಗ್ರಹಿಸಿ ಇಡುವುದು ಅಗತ್ಯ. ಛಾಯಾಚಿತ್ರ ಗ್ರಹಣದಲ್ಲಿ ಅನುಭವ ಬಹಳ ಮುಖ್ಯ. ಉತ್ತಮವಾದ ಛಾಯಾಚಿತ್ರ ಹೊರಬರಬೇಕಾದರೆ ಅತ್ಯಂತ ಕಾಳಜಿಯಿಂದ ಛಾಯಾಚಿತ್ರಗಳನ್ನು ತೆಗೆಯಬೇಕಾಗುತ್ತದೆ. ಕೆಲವು ಗ್ರಾಹಕರು ತುರ್ತು ಛಾಯಾಚಿತ್ರಗಳಿಗೆ ಮೊರೆ ಹೋಗುತ್ತಾರೆ. ಹಾಗೆಂದು ದಿಢೀರ್ ಆಗಿ ಛಾಯಾಚಿತ್ರಗಳನ್ನು ತೆಗೆದಲ್ಲಿ ಅದರ ಮೌಲ್ಯ ಕುಸಿಯುತ್ತದೆ. ಒಟ್ಟಿನಲ್ಲಿ ಛಾಯಾಗ್ರಹಣದ ಬದುಕು ಬದಲಾಗಿದೆ. ಪರಿಸ್ಥಿತಿ ಮುಂದಿನ ದಿನಗಳಲ್ಲಿ ಸುಧಾರಿಸಬಹುದು ಎಂಬ ಆಶಾಭಾವನೆ ನಮ್ಮದು.

- ಕುಯ್ಯಮುಡಿ ಸುನಿಲ್