ವಿವಿಧ ಸಮಾಜಗಳ ಮಠ, ದೇವಸ್ಥಾನ, ಸಂಘ-ಸAಸ್ಥೆಗಳು, ಟ್ರಸ್ಟ್ಗಳ ಸಮುದಾಯ ಚಟುವಟಿಕೆಗಳು, ಅಭಿವೃದ್ಧಿ, ಜೀರ್ಣೋದ್ಧಾರ ಕಾರ್ಯಗಳಿಗೆ ರಾಜ್ಯ ಸರಕಾರವು ಆರ್ಥಿಕ ಇಲಾಖೆ ನೀಡಿರುವ ಸಹಮತಿಯಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಗೆ ರೂ.೧೪೨.೫೯ ಕೋಟಿ ಹಣವನ್ನು ಆಡಳಿತಾತ್ಮಕ ಮಂಜೂರಾತಿ ನೀಡಿ ಆದೇಶಿಸಿದೆ. ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ-ಕಂದಾಯ ಇಲಾಖೆ (ಧಾರ್ಮಿಕ ದತ್ತಿ) ಎಂ.ಎಲ್ ವರಲಕ್ಷಿö್ಮÃ ಅವರು ಆದೇಶ ಹೊರಡಿಸಿದ್ದಾರೆ. ಈ ಮೂಲಕ ಕೊಡಗು ಜಿಲ್ಲೆಯ ಮಠ- ದೇವಸ್ಥಾನಗಳಿಗೆ ಒಟ್ಟು ರೂ.೨.೫ ಕೋಟಿ ಮಂಜೂರಾತಿಯಾಗಿದೆ.

ರಾಜ್ಯದಲ್ಲಿನ ೧೭೮ ಮಠಗಳಿಗೆ ರೂ.೧೦೮.೨೪ ಕೋಟಿ, ೫೯ ದೇವಸ್ಥಾನಗಳಿಗೆ ರೂ.೨೧.೩೫ ಕೋಟಿ ಹಾಗೂ ೨೬ ಸಂಘ ಸಂಸ್ಥೆಗಳಿಗೆ, ಟ್ರಸ್ಟ್ಗಳಿಗೆ ರೂ.೧೩ ಕೋಟಿ ಅನುದಾನದೊಂದಿಗೆ ಒಟ್ಟು ರೂ.೧೪೨.೫೯ ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ಮರಳುಸಿದ್ದೇಶ್ವರ ಸ್ವಾಮಿ ವಿರಕ್ತಮಠಕ್ಕೆ ರೂ.೫೦ ಲಕ್ಷ, ಶನಿವಾರಸಂತೆ ಸಿಡಿಗಳಲೆ ಮಠಕ್ಕೆ ರೂ. ೨೫ ಲಕ್ಷ, ಕೊಡ್ಲಿಪೇಟೆ ಕಲ್ಲುಮಠಕ್ಕೆ ರೂ.೨೫ ಲಕ್ಷ, ಕಿರಿಕೊಡ್ಲಿ ಮಠಕ್ಕೆ ರೂ.೨೫ ಲಕ್ಷ, ವೀರಾಜಪೇಟೆ ಅರಮೇರಿ ಕಳಂಚೇರಿ ಮಠಕ್ಕೆ ರೂ.೭೫ ಲಕ್ಷ ಹಾಗೂ ಆಲೂರು ಸಿದ್ದಾಪುರದ ಬಂಡಿಯಮ್ಮ ದೇವಸ್ಥಾನಕ್ಕೆ ರೂ.೫೦ ಲಕ್ಷ ಅನುದಾನ ಮಂಜೂರಾಗಿದೆ.