ಕೊಡ್ಲಿಪೇಟೆ, ಆ. ೧೭: ಹೊಳೆನರಸೀಪುರದಲ್ಲಿ ತುರ್ತು ವಿದ್ಯುತ್ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿAದ ಶನಿವಾರಸಂತೆ ಮತ್ತು ಯಸಳೂರು ವಿದ್ಯುತ್ ವಿತರಣಾ ಕೇಂದ್ರಗಳಿಗೆ ತಾ.೧೮ರಂದು (ಇಂದು) ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ಇಲ್ಲಿಂದ ವಿತರಣೆಯಾಗುವ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಬೆಳಿಗ್ಗೆ ೯ ರಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಕೊಡ್ಲಿಪೇಟೆ ಉಪ ಕೇಂದ್ರದ ಅಭಿಯಂತರ ಹಿರೇಮಠ್ ತಿಳಿಸಿದ್ದಾರೆ.