*ಗೋಣಿಕೊಪ್ಪ, ಆ. ೧೭: ನಾನು ರಾಧೆ, ನೀನು ಕೃಷ್ಣ ಎಂದು ವೇಷ ಭೂಷಣ ತೊಟ್ಟು ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕಿ ಪುಟಾಣಿಗಳು ಗೋಣಿಕೊಪ್ಪಲು ಶಾಖೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಯೋಜಿಸಿದ ರಾಧಾಕೃಷ್ಣ ವೇಷ ಭೂಷಣ ಸ್ಪರ್ಧೆಯಲ್ಲಿ ಗಮನಸೆಳೆದರು.

ಸುಮಾರು ೩೦ಕ್ಕೂ ಹೆಚ್ಚು ಮಕ್ಕಳು ರಾಧೆ. ಶ್ರೀ ಕೃಷ್ಣ ವೇಷಗಳಲ್ಲಿ ಕಾಣಿಸಿಕೊಂಡರು. ಕೃಷ್ಣನ ವೇಷಭೂಷಣದಲ್ಲಿ ಪ್ರಥಮ ಬಹುಮಾನವನ್ನು ಆತ್ಮೀಯ ದೀಪ್, ದ್ವಿತೀಯ ಬಹುಮಾನವನ್ನು ಮೃದುಲ್, ತೃತೀಯ ಬಹುಮಾನವನ್ನು ಗಹನ್ ಪೂಜಾರಿ ಹಾಗೂ ರಾಧ ವೇಶಭೂಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಅನ್ವಿತ, ದ್ವಿತೀಯ ರಕ್ಷಿತಾ, ತೃತೀಯ ಅದಿತಿ ಪಡೆದುಕೊಂಡರು.

ಮಡಿಕೇರಿ ಶಾಖೆಯ ಸಂಚಾಲಕಿ ಬಿ.ಕೆ. ಗಾಯತ್ರಿ ಜಿ ಅವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ್ ಕಾಮತ್, ಚಾನೆಲ್ ಕೂರ್ಗ್ ಹಾಗೂ ಕೂರ್ಗ್ ಎಕ್ಸ್ಪ್ರೆಸ್ ಪ್ರಧಾನ ಸಂಪಾದಕÀ ಶ್ರೀಧರ್ ನೆಲ್ಲಿತ್ತಾಯ, ಕುಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಮತ್ತು ಯೋಗ ಶಿಕ್ಷಕಿ ಅಲೀಮಾ ಪಿ.ಹೆಚ್ ಇದ್ದರು.

ಇದೇ ಸಂದರ್ಭದಲ್ಲಿ ರಕ್ಷಾ ಬಂಧನ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಧ್ಯಾತ್ಮಿಕ ರಹಸ್ಯವನ್ನು ಮಡಿಕೇರಿ ಶಾಖೆಯ ಸಂಚಾಲಕಿ ಬಿ.ಕೆ. ಧನಲಕ್ಷಿö್ಮ ತಿಳಿಸಿದರು. ಬಿ.ಕೆ. ಚಂದ್ರಿಕಾ ನಿರೂಪಿಸಿದರೆ, ಶಿಬು ಸ್ವಾಗತಿಸಿದರು. ಬಿ.ಕೆ. ರೇಷ್ಮಾ ವಂದಿಸಿದರು.