ಕೂಡಿಗೆ, ಆ. ೧೭: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಂಭಾಗದ ವೇದಿಕೆಯ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಮತ್ತು ತಂಡದವರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ೩೦ ಸಾವಿರ ಬೆಲೆ ಬಾಳುವ ೧.೯೧೫ ಕೆ.ಜಿ. ಒಣಗಿದ ಗಾಂಜಾ, ರೂ. ೨,೯೧೦ ನಗದು, ಒಂದು ಸ್ಕೂಟಿ, ೩ ಬೈಕ್‌ಗಳÀÄ ಸೇರಿದಂತೆ ವಿವಿಧ ಕಂಪೆನಿಯ ೬ ಮೊಬೈಲ್ ಫೆೆÇÃನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ಚೇತನ್, ಕಿರಣ್ ಕುಮಾರ್, ಪ್ರವೀಣ್, ಸೂರ್ಯ, ಪ್ರತಾಪ್ ಎಂಬವರುಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ಎ. ಅಯ್ಯಪ್ಪ ಅವರ ನಿರ್ದೇಶನದಂತೆ ಉಪ ಅಧೀಕ್ಷಕ ಆರ್.ವಿ. ಗಂಗಾಧರಪ್ಪ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಬಿ.ಜೆ. ಮಹೇಶ್ ಸೂಚನೆಯಂತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಹೆಚ್.ವಿ. ಚಂದ್ರಶೇಖರ್, ಪಿಎಸ್‌ಐ ಭಾರತಿ, ಎಎಸ್‌ಐ ಎಂ.ಎ. ಗೋಪಾಲ್, ಕುಮಾರಿ, ಸಿಬ್ಬಂದಿಗಳಾದ

(ಮೊದಲ ಪುಟದಿಂದ) ಮಂಜುನಾಥ, ಅಜಿತ್, ಉದಯ, ಪ್ರವೀಣ್, ಸುದೀಶ್, ಪ್ರಕಾಶ್, ರಂಜಿತ್ ಕುಮಾರ್, ದಿವೇಶ್, ಶಾಫಿನ್ ಅಹಮದ್, ಮುನಾವರ್ ಪಾಷ, ಧನುಕುಮಾರ್ ಸಿ.ಡಿ.ಆರ್. ಘಟಕದ ಸಿಬ್ಬಂದಿ ರಾಜೇಶ್, ಗಿರೀಶ್, ಪ್ರವೀಣ್, ಚಾಲಕ ಯೋಗೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.