ಮಡಿಕೇರಿ, ಆ. ೧೭: ಸ್ವತಂತ್ರö್ಯ ಭಾರತ ಮತ್ತು ಅಮೇರಿಕಾ ನಡುವೆ ೭೫ ವರ್ಷಗಳ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಂಬAಧ ವೃದ್ಧಿಯಾಗುತ್ತಲೇ ಬಂದಿದ್ದು, ಪರಸ್ಪರ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಚೆನ್ನೆöÊನಲ್ಲಿರುವ ಅಮೇರಿಕಾ ದೇಶದ ಕೌನ್ಸಲ್ ಜನರಲ್ ಜುಡಿತ್ ರವಿನ್ ಹರ್ಷ ವ್ಯಕ್ತಪಡಿಸಿದರು.
ನಗರದ ನಾರ್ಥ್ ಕೂರ್ಗ್ ಕ್ಲಬ್ ಸಭಾಂಗಣದಲ್ಲಿ ಮರ್ಕೆರಾ ಡೇರಿಯನ್ ಅಸೋಸಿಯೇಷನ್‌ನ ೬೮ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಜುಡಿತ್ ರವಿನ್, ಭಾರತದ ಭವಿಷ್ಯ ಯುವಪೀಳಿಗೆಯನ್ನು ಅವಲಂಭಿಸಿದ್ದು ಭಾರತೀಯ ಯುವಕ, ಯುವತಿಯರು ತಮ್ಮ ದೇಶವನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ಸಶಕ್ತವಾಗಿ ಮುಂದುವರೆಸಿಕೊAಡು ಸಾಗುವಲ್ಲಿ ಪ್ರಬಲರಾಗಿದ್ದಾರೆ ಎಂದು ಶ್ಲಾಘಿಸಿದರು.
ಅಮೇರಿಕಾ - ಭಾರತ ನಡುವಿನ ಸೌಹಾದÀð ಸಂಬAಧ ಕಳೆದ ೭೫ ವರ್ಷಗಳಲ್ಲಿ ನಿರೀಕ್ಷೆಗೂ ಮೀರಿ ಉತ್ತಮವಾಗಿದೆ. ಭಾರತದ ಲಕ್ಷಾಂತರ ಉದ್ಯೋಗಿಗಳಿಗೆ ಅಮೇರಿಕಾ ಆಶ್ರಯ ನೀಡಿದ್ದರೆ, ಭಾರತ ಕೂಡ ಅಮೇರಿಕಾದ ಅನೇಕ ಪ್ರಮುಖ ಸಂಸ್ಥೆಗಳಿಗೆ ತನ್ನ ದೇಶದಲ್ಲಿ ವಿವಿಧ ವಹಿವಾಟಿಗೆ ಅವಕಾಶ ನೀಡಿ ಸ್ನೇಹದ ಬೆಸುಗೆ ವೃದ್ಧಿಸಿದೆ ಎಂದರು.
ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲ್ಚೀರ ಎ. ಅಯ್ಯಪ್ಪ ಮಾತನಾಡಿ, ಎರಡೂ ದೇಶಗಳ ಎರಡು ನಗರಗಳಾದ ಮಡಿಕೇರಿ ಹಾಗೂ ಡೇರಿಯನ್ ನಡುವೆ ಪರಸ್ಪರ ಸೌಹಾರ್ಧ ಸಂಬAಧ ಬೆಸೆಯುವಲ್ಲಿ ಮರ್ಕೆರಾ ಡೇರಿಯನ್ ಅಸೋಸಿಯೇಷನ್ ಅತ್ಯುತ್ತಮ ಕಾರ್ಯನಿರ್ವಹಿಸಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯ ಬೆಳವಣಿಗೆಯಲ್ಲಿ ಯುವಪೀಳಿಗೆ ಹೆಚ್ಚಿನ ಪಾತ್ರ ವಹಿಸಬೇಕೆಂದು ಕರೆ ನೀಡಿದರು.
ಮರ್ಕೆರಾ ಡೇರಿಯನ್ ಅಸೋಸಿಯೇಷನ್‌ನಲ್ಲಿ ೩೦ ವರ್ಷಗಳಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಕೂತಂಡ ಪಿ. ಉತ್ತಪ್ಪ ಮಾತನಾಡಿ, ೧೯೫೪ ರಲ್ಲಿ ಅಮೇರಿಕಾದ ಡೇರಿಯನ್ ನಗರ ಹಾಗೂ ಭಾರತದ ಮಡಿಕೇರಿ ನಡುವೆ ಪ್ರಾರಂಭವಾದ ಗೆಳೆತನದ ಬೆಸುಗೆ ಇಂದಿಗೂ ಮುಂದುವರೆದುಕೊAಡು ಬಂದಿದೆ. ಈ ಅವಧಿಯಲ್ಲಿ ಎರಡೂ ನಗರಗಳಿಗೆ ಎರಡೂ ದೇಶದ ಪ್ರತಿನಿಧಿಗಳು ಭೇಟಿ ನೀಡಿ ಸ್ನೇಹದ ಸಂಬAಧ ಬೆಸೆದಿದ್ದಾರೆ. ಫೀಲ್ಡ್ ಮರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಮೈಸೂರು ಮಹಾರಾಜರು ಕೂಡ ಡೇರಿಯನ್ ನಗರಕ್ಕೆ ಭೇಟಿ ನೀಡಿ ಕರ್ನಾಟಕದ ಕಂಪನ್ನು ತೋರಿದ್ದಾರೆ ಎಂದರು. ಮುಂದಿನ ದಿನಗಳಲ್ಲಿಯೂ ಮಡಿಕೇರಿ ಮತ್ತು ಡೇರಿಯನ್ ನಗರಗಳು ಈ ಸಂಸ್ಥೆಯ ಮೂಲಕ ತಮ್ಮ ಗೆಳೆತನವನ್ನು ಹೀಗೇ ಉಳಿಸಿಕೊಳ್ಳುತ್ತದೆ. ಜಗತ್ತಿನಲ್ಲಿಯೇ ಈ ರೀತಿ ಎರಡು ದೇಶಗಳ ಎರಡು ನಗರಗಳು ತಮ್ಮದೇ ಸಂಸ್ಥೆ ಹೊಂದಿ ಗೆಳೆತನ ಬೆಸೆದಿರುವುದು ಮರ್ಕೆರಾ - ಡೇರಿಯನ್ ಅಸೋಸಿಯೇಷನ್‌ನ ಹೆಗ್ಗಳಿಕೆಯಾಗಿದೆ ಎಂದೂ ಕೆ.ಪಿ. ಉತ್ತಪ್ಪ ಹೆಮ್ಮೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮರ್ಕೇರಾ ಡೇರಿಯನ್ ಅಸೋಸಿಯೇಷನ್‌ನ ನೂತನ ಅಧ್ಯಕ್ಷರಾಗಿ ಮಡಿಕೇರಿಯ ಡಾ. ಅನಿಲ್ ಚಂಗಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಅಸೋಸಿಯೇಷನ್ ಕಾರ್ಯದರ್ಶಿ ಸುನೀಲ್ ಗಣಪತಿ ವಂದಿಸಿದರು. ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ, ಚೆನ್ನೆöÊನ ಅಮೇರಿಕಾ ರಾಯಭಾರಿ ಕಚೇರಿ ಅಧಿಕಾರಿ ಬೃಂದಾ ಜಯಕಾಂತ್ ಸೇರಿದಂತೆ ಮರ್ಕೆರಾ ಡೇರಿಯನ್ ಅಸೋಸಿಯೇಷನ್‌ನ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭ ಅಮೇರಿಕಾದ ಕೌನ್ಸಲ್ ಜನರಲ್ ಜುಡಿತ್ ರವಿನ್ ಅವರಿಗೆ ಕೊಡವ ಸಾಂಪ್ರದಾಯಿಕ ತೂಕ್‌ಬೊಳ್‌ಚ, ಕೊಡಗಿನ ಸ್ವಾದಿಷ್ಟ ಕಾಫಿ ಪುಡಿಯನ್ನು ಉಡುಗೊರೆಯಾಗಿ ನೀಡಿದರೆ ಮರ್ಕೆರಾ ಡೇರಿಯನ್ ಅಸೋಸಿಯೇಷನ್‌ಗೆ ಅಮೇರಿಕಾದ ಉಪಾಧ್ಯಕ್ಷೆ ಭಾರತೀಯ ಮೂಲದ ಕಮಲಾ ಹ್ಯಾರೀಸ್ ಅವರ ಭಾಷಣದ ಸಂಗ್ರಹದ ಪುಸ್ತಕವನ್ನು ಕೊಡುಗೆಯಾಗಿ ಜುಡಿತ್ ರವಿನ್ ನೀಡಿದರು.