ಕೂಡಿಗೆ, ಆ. ೧೬: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಶಾಲೆಯಲ್ಲಿ ಮಕ್ಕಳಿಗೆ ಉಚಿತವಾಗಿ ಟಿ ಶರ್ಟ್ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಿರೀಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಭಾಸ್ಕರ್ ನಾಯಕ್, ಗ್ರಾಪಂ ಸದಸ್ಯರಾದ ಮಣಿಕಂಠ ರವರು ಮಾತನಾಡಿದರು. ದಾನಿಗಳಾದ ಗುತ್ತಿಗೆದಾರ ವೇಲುಮುರುಗನ್, ಪರಮಶಿವನ್, ವೇಲನ್ ಕೆ. ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ತಮ್ಮಯ್ಯ ಮತ್ತು ಶಿಕ್ಷಕ ವೃಂದ ಶಾಲಾ ಮಕ್ಕಳು , ಪೋಷಕರು ಹಾಜರಿದ್ದರು.