ಸುಂಟಿಕೊಪ್ಪ, ಆ. ೧೬: ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ತೊಂಡೂರು ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಕಾಸ್ ಜನಸೇವಾ ಟ್ರಸ್ಟ್ ಜೀವನದಾರಿ ಆಶ್ರಮಕ್ಕೆ ಸುಂಟಿಕೊಪ್ಪ ಲಯನ್ಸ್ ಸಂಸ್ಥೆ ವತಿಯಿಂದ ಆಶ್ರಮದ ನಿವಾಸಿಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭ ಆಶ್ರಮದ ಅಧ್ಯಕ್ಷ ಹೆಚ್.ಕೆ. ರಮೇಶ್ ಮಾತನಾಡಿ, ೪ ವರ್ಷಗಳ ಹಿಂದೆ ಸುಂಟಿಕೊಪ್ಪದ ಗದ್ದೆಹಳ್ಳದ ಪಟ್ಟೆಮನೆ ಭರತ್ ಮನೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಸಂದರ್ಭ ವಿದ್ಯುತ್ ಇಲ್ಲದೆ ರಾತ್ರಿ ವೇಳೆ ಕ್ಯಾಂಡಲ್ ಬೆಳಕಿನಲ್ಲ್ಲಿ ದಿನ ದೂಡುತ್ತಿರುವುದನ್ನು ಗಮನಿಸಿದ ಲಯನ್ ಸಂಸ್ಥೆಯು ಸುಮಾರು ೨೫ ಸಾವಿರ ವೆಚ್ಚದ ಇನ್ವರ್ಟರ್ ನೀಡಿದ್ದು ಇವತ್ತಿಗೂ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ ಹಲವಾರು ವರ್ಷಗಳಿಂದ ನಮ್ಮ ಆಶ್ರಮಕ್ಕೆ ಸಹಾಯ ಹಸ್ತ ನೀಡಿ ಮಾನವಿಯತೆ ಮರೆಯುತ್ತಿರುವುದು ಆಶ್ರಮದ ನಿವಾಸಿಗಳ ಭಾಗ್ಯವಾಗಿದೆ ಎಂದರು.

ಈ ಸಂದರ್ಭ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಚಮನ್ ಚೆಟ್ಟಿಯಪ್ಪ, ಕಾರ್ಯದರ್ಶಿ ಲಯನ್ ಶಶಾಂಕ್, ಲಯನ್ ದರ್ಶನ್, ಮಾಜಿ ಅಧ್ಯಕ್ಷ ಕೋಟೇರ ಶಾಶ್ವತ್, ಸಂಸ್ಥೆಯ ಹಿರಿಯರಾದ ಕೆ.ಪಿ. ಜಗನಾಥ್, ಎಂ.ಎ. ವಸಂತ್, ಗಣೇಶ್, ಹಾಜರಿದ್ದರು.