ಮಡಿಕೇರಿ, ಆ. ೧೬: ಮಂಗಳೂರಿನಿAದ ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದ ಯುವಕರ ಮೇಲೆ ಅಪರಿಚಿತರು ಹಲ್ಲೆ ಮಾಡಿದ ಸಂಬAಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಹೊರವಲಯದ ಮಾಂದಲಪಟ್ಟಿಗೆ ತೆರಳುವ ನಡುವಿನ ನಂದಿಮೊಟ್ಟೆ ಜಂಕ್ಷನ್‌ನಲ್ಲಿ ಘಟನೆ ಸಂಭವಿಸಿದ್ದು, ಯುವಕರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

ಏನಿದು ಪ್ರಕರಣ.? : ಮಂಗಳೂರು ನಗರದ ಮೂವರು ಯುವಕರು ಹಾಗೂ ಈರ್ವರು ಯುವತಿಯರು ಪ್ರವಾಸಕ್ಕೆಂದು

ಪ್ರವಾಸಿಗರ ಮೇಲೆ ಗುಂಪು ಹಲ್ಲೆ - ಪ್ರಕರಣ ದಾಖಲು

(ಮೊದಲ ಪುಟದಿಂದ) ಪೋಷಕರ ಅನುಮತಿ ಪಡೆದು ಮಡಿಕೇರಿಗೆ ಆಗಮಿಸಿದ್ದಾರೆ. ಮಾಂದಲಪಟ್ಟಿಗೆ ತೆರಳಿ ವಾಪಸ್ ಬರುವ ಸಂದರ್ಭ ಅಪರಿಚಿತರು ಪ್ರವಾಸಿಗರಿದ್ದ ವಾಹನ ತಡೆದು ಅನ್ಯಕೋಮಿನ ಯುವತಿಯರನ್ನು ಕರೆತಂದಿದ್ದಾರೆ ಎಂಬ ವಿಷಯ ಮುಂದಿಟ್ಟು ಹಲವರು ಸೇರಿ ಯುವಕರ ಮೇಲೆ ಗುಂಪು ಹಲ್ಲೆ ಮಾಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು , ಮಂಗಳೂರಿನ ನಂದ ಕಿಶನ್, ಸಮನ್ ಫಾಜೀದ್, ಸಂಶೀರ್ ಸೇರಿ ಇಬ್ಬರು ಯುವತಿಯರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪ್ರವಾಸಿಗರು ನಾವುಗಳು ಉತ್ತಮ ಸ್ನೇಹಿತರಾಗಿದ್ದು, ಮನೆಯವರ ಅನುಮತಿಯೊಂದಿಗೆ ಬಂದಿದ್ದೇವೆ. ಅಲ್ಲಿದ್ದವರು ಅಪಾರ್ಥ ಮಾಡಿಕೊಂಡು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಹಲ್ಲೆ ಮಾಡಿದವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಡಿವೈಎಸ್ ಪಿ ಗಜೇಂದ್ರ ಪ್ರಸಾದ್ ತಿಳಿಸಿದ್ದಾರೆ.