ಮಡಿಕೇರಿ, ಆ. ೧೬: ಕಾರುಗಳ ನಡುವೆ ಅಪಘಾತ ಸಂಭವಿಸಿ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ಕುಶಾಲನಗರ ದಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಇಟಿಯೋಸ್ ಕಾರು (ಕೆಎ ೧೨ ಬಿ ೪೪೬೪) ಹಾಗೂ ಮಂಗಳೂರಿನಿAದ ಮಡಿಕೇರಿ ಮೂಲಕ ಹಟ್ಟಿಹೊಳೆಗೆ ತೆರಳುತ್ತಿದ್ದ ರಿಟ್ಜ್ ಕಾರು (ಕೆಎ ೧೯ ಎಂಬಿ ೭೧೪೪) ನಡುವೆ ಅರಣ್ಯ ಭವನದ ಬಳಿ ಅಪಘಾತ ಸಂಭವಿಸಿದ್ದು, ಇಟಿಯೋಸ್ ಕಾರಿನಲ್ಲಿದ್ದ ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್, ಸಹಾಯಕ ನಿಬಂಧಕರಾದ ಮೋಹನ್, ಚಾಲಕ ಶ್ರೀನಿವಾಸ್ ಇವರುಗಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ರಮೇಶ್ ಅವರು ನೀಡಿದ ದೂರಿನನ್ವಯ ಮಡಿಕೇರಿ ಸಂಚಾರಿ ಠಾಣೆಯಲ್ಲಿ ರಿಟ್ಜ್ ಕಾರಿನ ಚಾಲಕ ಸುಹಾಸ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.